ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಹೋಟೆಲ್‌ನಲ್ಲಿ ಸಿಲಿಂಡರ್ ಸ್ಫೋಟ: 10 ಕಾರ್ಮಿಕರಿಗೆ ಗಾಯ

Published 21 ಜೂನ್ 2024, 4:02 IST
Last Updated 21 ಜೂನ್ 2024, 4:02 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಸಪ್ತಗಿರಿ ಆರೇಂಜ್ ಹೋಟೆಲ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಹತ್ತು ಕಾರ್ಮಿಕರಿಗೆ ಗಾಯಗಳಾಗಿವೆ.

ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ‌.

ಬೆಳಿಗ್ಗೆ 6.15ರ ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡಿತು. ಕೆಲ ಕಾರ್ಮಿಕರು ಹೊರಗಡೆ ಬಂದರು‌. ಉಳಿದವರು ಕಟ್ಟಡದ ಹಿಂಬದಿಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಸರಿಸಲು ಯತ್ನಿಸಿದಾಗ ಬೆಂಕಿಯ ಕೆನ್ನಾಲಿಗೆ ಚಾಚಿಕೊಂಡಿತು.

ಇಬ್ಬರನ್ನು ಜಿಮ್ಸ್‌ನ ಟ್ರಾಮಾ ಸೆಂಟರ್ ಆಸ್ಪತ್ರೆಗೆ ದಾಖಲಿಸಲಾಗಿದೆ‌. ಉಳಿದವರನ್ನು ಜಿಮ್ಸ್ ಸಾಮಾನ್ಯ ವಾರ್ಡ್‌ಗೆ ದಾಖಲಿಸಲಾಗಿದೆ.

ಬೆಳಿಗ್ಗೆ ಉಪಾಹಾರದ ಸಿದ್ಧತೆಯಲ್ಲಿದ್ದ ಕಾರ್ಮಿಕರು ಗಾಯಗೊಂಡಿದ್ದಾರೆ. ಗ್ರಾಹಕರು ಇಲ್ಲದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ‌.

'ನಮಗೆ ಬೆಳಿಗ್ಗೆ 6.25ಕ್ಕೆ ಕರೆ ಬಂದಿತು. ಒಂದು ಸಿಲಿಂಡರ್ ಸಿಡಿದು ಗಾಯಗೊಂಡಿದ್ದರು. ತಕ್ಷಣ ಬೆಂಕಿ ನಂದಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ಅಗ್ನಿಶಾಮಕ ಅಧಿಕಾರಿ ಅಂಕೋಶ್ ಅರ್ಜುನ್ 'ಪ್ರಜಾವಾಣಿ'ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT