ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲೆಯಾದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ

Last Updated 6 ಏಪ್ರಿಲ್ 2021, 6:40 IST
ಅಕ್ಷರ ಗಾತ್ರ

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಪೋಲಕಪಳ್ಳಿಯ ವಿದ್ಯುತ್ ತಯಾರಿಕಾ ಘಟಕದ ಸಮೀಪದ ಮಂಗಳವಾರ ಅಪರಿಚಿತ ಮಹಿಳೆಯ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸುಮಾರು 30 ವರ್ಷ ವಯಸ್ಸಿನ ಇವರಿಗೆ ಮದುವೆ ಆಗಿದೆಯೋ ಇಲ್ಲವೋ ತಿಳಿದುಬಂದಿಲ್ಲ. ಬಿಳಿ ಬಣ್ಣದ ಚೂಡಿದಾರ್ ಧರಿಸಿದ್ದಾರೆ. ಮೃತಳ ಬಾಯಿಗೆ ಬಟ್ಟೆ ತುರುಕಿದ್ದು ಕತ್ತು ಹಿಸುಕಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

ಆದರೆ ಈಗಲೇ ಏನನ್ನು ಹೇಳಲಾಗದು. ಬೇರೆ ಕಡೆ ಕೊಲೆ ಮಾಡಿ ಇಲ್ಲಿ ಬಿಸಾಕಿರಬಹುದು. ಸ್ಥಳದಲ್ಲಿ ಮಹಿಳೆಯ ಕರವಸ್ತ್ರ ಹಾಗೂ ಪರ್ಸ್ ಸಿಕ್ಕಿದೆ ಎಂದು ಮಾಹಿತಿ ನೀಡಿದ್ದಾರೆ.

ಸಿಪಿಐ ಮಹಾಂತೇಶ ಪಾಟೀಲ, ಸಬ್ ಇನ್‌ಸ್ಪೆಕ್ಟರ್ ಸಂತೋಷ ರಾಠೋಡ ಸ್ಥಳಕ್ಕೆ ಭೆಟಿ ನೀಡಿ ಪರಿಶೀಲಿಸಿದರು. ಸುದ್ದಿ ತಿಳಿದು ನೂರಾರು ಜನ ಸ್ಥಳಕ್ಕೆ ದೌಡಾಯಿಸಿದ್ದರಿಂದ ಅಲ್ಲಿ ಜನಜಂಗುಳಿ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT