ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಮಲಾಪುರ: ಬಸ್ ನಿಲ್ದಾಣ ನಿರ್ಮಿಸಲು ತಾ.ಪಂ ಮಾಜಿ ಸದಸ್ಯ ಅಮೃತಗೌರೆ ಆಗ್ರಹ

Published : 27 ಆಗಸ್ಟ್ 2024, 14:32 IST
Last Updated : 27 ಆಗಸ್ಟ್ 2024, 14:32 IST
ಫಾಲೋ ಮಾಡಿ
Comments

ಕಮಲಾಪುರ: ತಾಲ್ಲೂಕು ಕೇಂದ್ರ ಕಮಲಾಪುರದಲ್ಲಿ ತಾಲ್ಲೂಕು ಮಟ್ಟದ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ತಾ.ಪಂ ಮಾಜಿ ಸದಸ್ಯ ಅಮೃತಗೌರೆ ಒತ್ತಾಯಿಸಿದರು.

ಪಟ್ಟಣದ ಬಸ್ ನಿಲ್ದಾಣದ ಎದುರು ಧರಣಿ ನಡೆಸಿದ ಅವರು, ‘ಸರ್ಕಾರಿ ಪದವಿ ಕಾಲೇಜಿನ ಪಕ್ಕದಲ್ಲಿ 4 ಎಕರೆ ಸರ್ಕಾರಿ ಭೂಮಿ ಇದೆ. ಸದ್ಯದ ತಹಶೀಲ್ದಾರ್ ಕಚೇರಿ ತೆರವುಗೊಳಿಸುವ ಜಾಗ ಬಸ್ ನಿಲ್ದಾಣಕ್ಕೆ ಜಾಗ ಒದಗಿಸಬೇಕು. ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಬೇಕು’ ಎಂದು ಆಗ್ರಹಿಸಿದರು.

ಬೀದದ್, ಬಸವಕಲ್ಯಾಣ, ಹುಮನಾಬಾದ್ ಸೇರಿದಂತೆ ನೆರೆಯ ಮಹಾರಾಷ್ಟ್ರ, ತೆಲಂಗಾಣದಿಂದ ಅನೇಕ ಭಕ್ತರು ಕಮಲಾಪುರ ಮಾರ್ಗದಿಂದ ರೇವಣಸಿದ್ದೇಶ್ವರರ ದರ್ಶನಕ್ಕೆ ಆಗಮಿಸುತ್ತಿದ್ದು ಕೂಡಲೇ ಕಮಲಾಪುರ-ರೇವಗ್ಗಿ ರೇವಣಸಿದ್ದೇಶ್ವರ ಗುಡ್ಡಕ್ಕೆ ಬಸ್ ಸಂಚಾರ ಆರಂಭಿಸಬೇಕು. ಅರಣಕಲ್, ರೇವಗ್ಗಿ ಮತ್ತಿತರ ಗ್ರಾಮಗಳು ಕಮಲಾಪುರ ತಾಲ್ಲೂಕಿಗೆ ಸೇರ್ಪಡೆಗೊಂಡಿವೆ. ಮಕ್ಕಳು ಕಮಲಾಪುರ ಶಾಲಾ ಕಾಲೇಜುಗಳಿಗೆ ಆಗಮಿಸುತ್ತಿದ್ದಾರೆ. ಕೂಡಲೇ ಬಸ್ ಸಂಚಾರ ಆರಂಭಿಸಬೇಕು ಎಂದರು.

ರಾಷ್ಟ್ರೀಯ ಹೆದ್ದಾರಿ ಮೇಲೆ ವಾಹನಗಳು ಅತಿ ವೇಗದಲ್ಲಿ ಸಂಚರಿಸುತ್ತಿವೆ. ವಾಹನಗಳ ವೇಗ ನಿಯಂತ್ರಿಸಲು ಹಂಪ್‌ಗಳನ್ನು ಹಾಕಬೇಕು. ಪೊಲೀಸ್‌ ಠಾಣೆಯಿಂದ ಡಯಟ್ ಕಚೇರಿವರೆಗೆ ಏಕಪಥ ರಸ್ತೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ಗ್ರೇಡ್ 2 ತಹಶೀಲ್ದಾರ್ ಶಿವಕುಮಾರ ಶಾಬಾ ಅವರಿಗೆ ಮನವಿ ಸಲ್ಲಿಸಲಾಯಿತು.

ಮುಖಂಡರಾದ ವಿಜಯಕುಮಾರ ಪಾಟೀಲ ರಟಕಲ್, ಸಿದ್ದಣಗೌಡ ಅರಣಕಲ್, ದಶರಥ ವಗ್ಗಿ ಮತ್ತಿತರರು ಹಾಜರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT