ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರಸ್ಯಕ್ಕೆ ದಕ್ಕೆಯಾದರೆ ಅಭಿವೃದ್ಧಿ ಅಸಾಧ್ಯ

ಆರ್‌ಎಸ್‌ಎಸ್‌ ಕಲಬುರಗಿ ವಿಭಾಗ ಕಾರ್ಯವಾಹ ನಾಗರಾಜ ಮನ್ನೆ ಅಭಿಮತ
Last Updated 5 ಡಿಸೆಂಬರ್ 2021, 5:24 IST
ಅಕ್ಷರ ಗಾತ್ರ

ಸೇಡಂ: ‘ಸಮಾಜದಲ್ಲಿ ಸಾಮಾಜಿಕ ಸಾಮರಸ್ಯದ ಕೊರತೆಯಾದಾಗ ಹಾಗೂ ಸಾಮರಸ್ಯಕ್ಕೆ ಧಕ್ಕೆಯುಂಟಾದಾಗ ಅಭಿವೃದ್ಧಿ ಹೊಂದುವುದು ಅಸಾಧ್ಯ. ಸಮಾಜದ ಏಳಿಗೆಗೆ ಸಾಮಾಜಿಕ ಸಾಮರಸ್ಯ ಅತಿ ಅವಶ್ಯಕವಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಲಬುರಗಿ ವಿಭಾಗ ಕಾರ್ಯವಾಹ ಡಾ.ನಾಗರಾಜ ಮನ್ನೆ ಅಭಿಪ್ರಾಯಟ್ಟರು.

ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಶುಕ್ರವಾರ ವಿಶ್ವಹಿಂದು ಪರಿಷತ್ ತಾಲ್ಲೂಕು ಘಟಕ ಆಯೋಜಿಸಿದ್ಧ 6ನೇ ವರ್ಷದ ಶ್ರೀ ದೀಪಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿದರು.

ವಿಶೇಷ ಸತ್ಕಾರ: 19 ವರ್ಷದೊಳಗಿನ ಬಿಸಿಸಿಐ (ಬಿ) ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಕು.ಮಮತಾ ವೀರೇಶ ಮಡಿವಾಳ, ಪೊಲೀಸ್ ಇಲಾಖೆಯಲ್ಲಿ ಕಬ್ಬಡ್ಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ರತ್ನಮ್ಮಾ ಶಿವಕುಮಾರ ವಠಾರ ಮತ್ತು ತನಗೆ ಸಿಕ್ಕ 9 ತೊಲೆ ಚಿನ್ನ ಹಾಗೂ ಮೊಬೈಲ್‌ನ್ನು ಅದರ ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆಯಿಂದ ಮರೆದ ಕು.ವೈಷ್ಣವಿ ಭೀಮಾಶಂಕರ ಚನ್ನಕ್ಕಿ ಅವರನ್ನು ವಿಶೇಷವಾಗಿ ಸತ್ಕರಿಸಿ, ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ತೊಟ್ನಳ್ಳಿ ಮಹಾಂತೇಶ್ವರ ಮಠದ ತ್ರೀಮೂರ್ತಿ ಶಿವಾಚಾರ್ಯರು ಮಾತನಾಡಿದರು.

ಶಿವಶಂಕರೇಶ್ವರ ಮಠದ ಶಿವಶಂಕರ ಶಿವಾಚಾರ್ಯ, ಮಳಖೇಡ ಭಂಗಿ ಮಠದ ಕೊಟ್ಟೂರೇಶ್ವರ ಶಿವಾಚಾರ್ಯ, ರಾಯಕೊಡ ಚಿಕ್ಕಶಿವಲಿಂಗೇಶ್ವರ ಸ್ವಾಮೀಜಿ, ಶ್ರೀ ಮರೆಪ್ಪ ತಾತಾ, ವಿಶ್ವಹಿಂದು ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷ ಲಿಂಗರಾಜಪ್ಪ ಅಪ್ಪ, ಮಾತೃಶಕ್ತಿ ಕಲಬುರಗಿ ಜಿಲ್ಲಾ ಸಹ ಪ್ರಮುಖರ ಸುಮಂಗಲಾ ಚಕ್ರವರ್ತಿ, ಅನುರಾಧ ಪಾಟೀಲ, ಸತ್ಯನಾರಾಯಣ ಮಹಾರಾಜ, ವಿಶ್ವಹಿಂದು ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಮುಸ್ತಾಜರ್, ಮಾತೃಶಕ್ತಿ ತಾಲ್ಲೂಕು ಪ್ರಮುಖರು ವಿಜಯಲಕ್ಷ್ಮಿ ಕೆರಳ್ಳಿ ಇದ್ದರು.

ಕಾರ್ಯಕ್ರಮದಲ್ಲಿ ನಾಗಲಕ್ಷ್ಮೀ ಪಾಟೀಲ ಸ್ವಾಗತಿಸಿದರು. ಮೀನಲ್ ಪತಂಗೆ ಪ್ರಾಸ್ತಾವಿಕ ಮಾತನಾಡಿದರು. ಪೂಜಾ ಆಲಗೂಡ ನಿರೂಪಿಸಿ ಸಂಧ್ಯಾ ಕುಲಕರ್ಣಿ
ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT