ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೂಬಾ ಬಳಿ ದಾಖಲೆ ಇದೆಯೇ?: ಶರಣಪ್ರಕಾಶ ಪಾಟೀಲ

Published 29 ಏಪ್ರಿಲ್ 2024, 4:22 IST
Last Updated 29 ಏಪ್ರಿಲ್ 2024, 4:22 IST
ಅಕ್ಷರ ಗಾತ್ರ

ಕಲಬುರಗಿ: ‘ಕಾಂಗ್ರೆಸ್ ಮುಖಂಡ ಶರಣಕುಮಾರ ಮೋದಿ ಅವರ ಕಾರಿನಲ್ಲಿ ಸಿಕ್ಕ ಹಣ ಈಶ್ವರ ಖಂಡ್ರೆ ಅವರಿಗೆ ಸೇರಿದ್ದು ಮೋದಿ ಅವರು ಖಂಡ್ರೆ ಅವರ ಕಲೆಕ್ಷನ್ ಏಜೆಂಟ್ ಎಂಬ ಭಗವಂತ ಖೂಬಾ ಹೇಳಿಕೆ ಖಂಡನೀಯ. ಖಂಡ್ರೆ ಅವರದೇ ಹಣ ಎನ್ನುವುದಕ್ಕೆ ಖೂಬಾ ಅವರ ಬಳಿ ಏನಾದರೂ ದಾಖಲೆಗಳಿವೆಯೇ’ ಎಂದು ಡಾ. ಶರಣಪ್ರಕಾಶ ಪಾಟೀಲ ಪ್ರಶ್ನಿಸಿದರು.

‘ಯಾರ ಬಗ್ಗೆಯಾದರೂ ಮಾತನಾಡಬೇಕಾದರೆ ಪೂರಕ ದಾಖಲೆ ಇಟ್ಟುಕೊಂಡು ಮಾತನಾಡಬೇಕು. ಕೇಂದ್ರ ಸಚಿವರಾಗಿರುವವರು ಇಂತಹ ಆಧಾರ ರಹಿತ ಹೇಳಿಕೆಗಳನ್ನು ನೀಡಬಾರದು. ಈ ಹೇಳಿಕೆ ಆಧರಿಸಿ ಈಶ್ವರ ಖಂಡ್ರೆ ಅವರು ಮಾನನಷ್ಟ ಪ್ರಕರಣ ದಾಖಲಿಸಬಹುದು’ ಎಂದು ಎಚ್ಚರಿಸಿದರು.

‘ಶರಣಕುಮಾರ ಮೋದಿ ಅವರ ಬಳಿ ಸಿಕ್ಕ ಹಣದ ಬಗ್ಗೆ ತನಿಖೆ ನಡೆಸಲು ಆದಾಯ ತೆರಿಗೆ ಇಲಾಖೆ ಸ್ವತಂತ್ರ ತನಿಖೆ ನಡೆಸಲಿ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT