ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಲಬುರಗಿ: ಮಳೆಗೆ ಭೀಮೆಯ ಒಡಲು ಸೇರುವ ರಾಡಿ ನೀರು; ಶುದ್ಧೀಕರಣವೇ ಸವಾಲು

ಪ್ರಭು ಬ. ಅಡವಿಹಾಳ
Published : 29 ಜುಲೈ 2024, 6:04 IST
Last Updated : 29 ಜುಲೈ 2024, 6:04 IST
ಫಾಲೋ ಮಾಡಿ
Comments
ಚಿಂಚೋಳಿಯ ಚಂದಾಪುರದ ನೀರು ಶುದ್ಧೀಕರಣ ಘಟಕ
ಚಿಂಚೋಳಿಯ ಚಂದಾಪುರದ ನೀರು ಶುದ್ಧೀಕರಣ ಘಟಕ
ನಗರದಲ್ಲಿವೆ 37 ಓವರ್‌ಹೆಡ್‌ ಟ್ಯಾಂಕ್‌, 964 ಬೋರ್‌ವೆಲ್‌ ಸರ್ಕಾರಿ ಹಾಸ್ಟೆಲ್‌, ಗಾರ್ಡನ್‌ಗಳಿಗೆ ಬೋರ್‌ವೆಲ್‌ ನೀರು ಮಾಸಿಕ 175 ನೀರಿನ ಕರ, ಕೆಲವಡೆ ಮೀಟರ್ ಲೆಕ್ಕ
ಜಿಲ್ಲೆಯಲ್ಲಿ ಕೊಳವೆಬಾವಿ ನೀರು ಕುಡಿಯಲು ಯೋಗ್ಯವಾಗಿಲ್ಲ. ಇಲ್ಲಿ ಸುಣ್ಣದಕಲ್ಲು ಹೆಚ್ಚಾಗಿರುವುದರಿಂದ ಕೊಳವೆಬಾವಿ ನೀರಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾಗಿದೆ. ಹೀಗಾಗಿ ಕಾಯಿಸಿ ಸೋಸಿ ಆರಿಸಿ ಕುಡಿಯುವುದು ಉತ್ತಮ
ಡಾ.ರತ್ನಾಕರ ತೋರಣ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಅಧಿಕಾರಿ
ಕೆಕೆಆರ್‌ಡಿಬಿಯಿಂದ ನಗರದಲ್ಲಿ ₹ 5 ಕಾಯಿನ್‌ ಹಾಕಿ ನೀರು ಪಡೆಯುವ 39 ಘಟಕಗಳನ್ನು ಸ್ಥಾಪಿಸಲಾಗಿದೆ. ಧರ್ಮಸ್ಥಳ ಸಂಸ್ಥೆಯವರು 6 ಶಾಸಕ ಅಲ್ಲಮಪ್ರಭು ಪಾಟೀಲರು 10 ಸ್ಥಾಪಿಸಿ ಕೊಡುವುದಾಗಿ ತಿಳಿಸಿದ್ದಾರೆ
ಆರ್‌.ಪಿ.ಜಾಧವ್‌ ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ)
ಸುಮಾರು ₹ 62 ಕೋಟಿ ವೆಚ್ಚದಲ್ಲಿ ಭೀಮಾ ಬ್ಯಾರೇಜಿನಿಂದ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆ ಮುಗಿಯುವ ಹಂತದಲ್ಲಿದೆ. ಈ ಯೋಜನೆ ಪೂರ್ಣಗೊಂಡರೆ ನಿರಂತರವಾಗಿ ಪಟ್ಟಣಕ್ಕೆ ಶುದ್ಧ ನೀರು ದೊರೆಯುತ್ತದೆ
ವಿಜಯ ಮಹಾಂತೇಶ ಹೂಗಾರ ಪುರಸಭೆ ಮುಖ್ಯಾಧಿಕಾರಿ ಅಫಜಲಪುರ
ಭೀಮಾ ನದಿಯಿಂದ ಪೂರೈಕೆ ಆಗುವ ಮಲಿನ ನೀರೇ ನಮಗೆ ಅನಿವಾರ್ಯವಾಗಿದೆ. ಈ ಭಾಗದ ಜನಪ್ರತಿನಿಧಿಗಳು ಹಾಳಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡಬೇಕು
ಲಕ್ಷ್ಮಣ್ ಕಟ್ಟಿಮನಿ ರೈತ ಮುಖಂಡ ಬಂದರವಾಡ
ಪುರಸಭೆ ವ್ಯಾಪ್ತಿಯ ಚಂದಾಪುರ ಪಟೇಲ್ ಕಾಲೊನಿ ಆಶ್ರಯ ಬಡಾವಣೆ ಹಾಗೂ ಚಿಂಚೋಳಿಯ ಕಲ್ಯಾಣ ಗಡ್ಡಿ ಪ್ರದೇಶಕ್ಕೆ 15 ದಿನಗಳಲ್ಲಿ ಸಮರ್ಪಕ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು
ಕಾಶಿನಾಥ ಧನ್ನಿ ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ
ಜಲಶುದ್ಧೀಕರಣ ಘಟಕದಲ್ಲಿ ಆಗುವುದೇನು?
ನದಿಯಿಂದ ಜಾಕ್‌ವೆಲ್‌ನಲ್ಲಿ ಜಾಳಿಗೆಗಳ ಮೂಲಕ ನೀರನ್ನು ಸ್ಕ್ರೀನಿಂಗ್‌ ಮಾಡಿ ಸಂಪ್‌ಗೆ ತುಂಬಲಾಗುತ್ತದೆ. ಅಲ್ಲಿಂದ ಪ್ರಿ ಕ್ಲೊರಿನೇಷನ್‌ ಆಗಿ ಜಲ ಶುದ್ಧೀಕರಣ ಘಟಕಕ್ಕೆ ಬರುತ್ತದೆ. ಅಲ್ಲಿ ಫ್ಲ್ಯಾಶ್‌ ಮಿಕ್ಸಿಂಗ್‌ ಮಾಡಲಾಗುತ್ತದೆ. ಫ್ಲ್ಯಾಶ್‌ ಮಿಕ್ಸಿಂಗ್‌ ಎಂದರೆ ಆಲಂ ಬ್ಲೀಚಿಂಗ್‌ ಪಿಎಸಿ ಎಂಬ ರಾಸಾಯನಿಕಗಳ ಸೇರ್ಪಡೆಯಾಗಿದೆ. ಆಲಂ ಮಣ್ಣನ್ನು ತಡೆದರೆ ಬ್ಲೀಚಿಂಗ್‌ ಮತ್ತು ಪಿಎಸಿ ನೀರು ಶುದ್ಧೀಕರಿಸುತ್ತವೆ. ಬಳಿಕ ನೀರು ಫಿಲ್ಟರ್‌ ಗ್ಯಾಲರಿಗೆ ಬರುತ್ತದೆ. ತದನಂತದ ಪೋಸ್ಟ್‌ ಕ್ಲೋರಿನೇಷನ್‌ ಮಾಡಿ ನೀರು ಸಂಗ್ರಹ ಟ್ಯಾಂಕ್‌ಗೆ ತುಂಬಲಾಗುತ್ತದೆ. ನಂತರ ಓವರ್‌ ಹೆಡ್‌ ಟ್ಯಾಂಕ್‌ಗಳಿಗೆ ಪೂರೈಸಿ ನಗರಕ್ಕೆ ಸರಬರಾಜು ಮಾಡಲಾಗುತ್ತದೆ.
ಆರ್‌ಒ ವಾಟರ್‌ ವ್ಯವಹಾರ.. ಮನಬಂದಂತೆ ದರ!
ನಗರಕ್ಕೆ ಪೂರೈಕೆಯಾಗುವ ಜಲಶುದ್ಧೀಕರಣ ಘಟಕದ ನೀರನ್ನು ಬಳಕೆಗೆ ಮಾತ್ರ ಉಪಯೋಗಿಸುವ ಜನತೆ ಕುಡಿಯಲು ಆರ್‌ಒ ವಾಟರ್‌ ಅನ್ನೇ ಅವಲಂಬಿಸಿದ್ದಾರೆ. ಆರ್‌ಒ ಎಂದರೆ ರಿವರ್ಸ್‌ ಅಸ್ಮೋಸಿಸ್‌ (ಪ್ರತಿ ಪರಾಸರಣ). ಇದೊಂದು ಜೀವರಾಸಾಯಿಕ ಕ್ರಿಯೆಯಾಗಿದೆ. ಇಲ್ಲಿ ಅತ್ಯಂತ ತೆಳುವಾದ ಪೊರೆಯ ಮೂಲಕ ನೀರು ಹಾಯಿಸಲಾಗುತ್ತದೆ. ಆ ಪೊರೆ 0.0001 ಮೈಕ್ರಾನ್‌ನಷ್ಟು ಮಾತ್ರ ರಂಧ್ರ ಹೊಂದಿರುತ್ತದೆ. ಇದರಲ್ಲಿ ನೀರಿಗಿಂತ ದೊಡ್ಡ ಗಾತ್ರದ ಅಣುಗಳು ಹಾದುಹೋಗುವುದಿಲ್ಲ. ಹೀಗಾಗಿ ಶುದ್ಧ ನೀರು ದೊರೆಯುತ್ತದೆ. ಆದರೆ ಇದು ನಗರದಲ್ಲಿ ವ್ಯವಹಾರವಾಗಿ ಮಾರ್ಪಟ್ಟಿದೆ. ಕಲಬುರಗಿ ನಗರದಲ್ಲಿ 126 ಆರ್‌ಒ ವಾಟರ್‌ ಪ್ಲಾಂಟ್‌ಗಳಿವೆ. ಇವುಗಳಲ್ಲದೇ ಅನಧಿಕೃತ ಪ್ಲಾಂಟ್‌ಗಳೂ ಇವೆ ಎನ್ನುತ್ತಾರೆ ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ.ಜಾಧವ. 126 ವಾಟರ್ ಪ್ಲಾಂಟ್‌ಗಳಲ್ಲಿ 51 ಐಎಸ್‌ಐ ಅನುಮತಿ ಪಡೆದಿದ್ದರೆ 75 ವಾಣಿಜ್ಯ ಪರವಾನಗಿ ಪಡೆದು ವ್ಯವಹಾರ ನಡೆಸುತ್ತಿವೆ. 20 ಲೀಟರ್‌ ಕ್ಯಾನ್‌ಗೆ ₹ 10 ದರ ಇದೆ. ಆದರೆ ಪ್ರತಿ ಕ್ಯಾನ್‌ಗೆ ₹ 30ರವರೆಗೂ ದರ ಪಡೆಯುತ್ತಾರೆ.
ದುರಸ್ತಿ ಕಾಣದ ಪೈಪ್‌ಲೈನ್‌
ಆಳಂದ: ಪಟ್ಟಣಕ್ಕೆ ಅಮರ್ಜಾ ಅಣೆಕಟ್ಟೆಯಿಂದ ನೀರು ಸರಬರಾಜಾಗುತ್ತದೆ. ಪುರಸಭೆ ವತಿಯಿಂದ 1995ರಲ್ಲಿ 2.5 ಲಕ್ಷ ಲೀಟರ್‌ ನೀರು ಸಾಮರ್ಥ್ಯದ ಜಲ ಶುದ್ಧೀಕರಣ ಘಟಕವಿದೆ. ಆದರೆ ನಿವಾಸಿಗಳಿಗೆ ಅಶುದ್ಧ ಕುಡಿಯುವ ನೀರಿನ ತಾಪತ್ರಯ ತಪ್ಪುತ್ತಿಲ್ಲ. ಸಮರ್ಪಕ ನಲ್ಲಿ ಪೂರೈಕೆ ವ್ಯವಸ್ಥೆ ಇಲ್ಲದ ಕಾರಣ ಪಟ್ಟಣದ ನಿವಾಸಿಗಳು ಮನೆ ಮುಂದೆ ತಗ್ಗು ತೋಡಿ ನೀರು ಪಡೆಯುತ್ತಾರೆ. ಇದರಿಂದ ಅಶುದ್ಧ ನೀರು ಚರಂಡಿ ನೀರು ಮುಖ್ಯ ಪೈಪ್‌ಲೈನ್‌ಗೆ ಸೇರಿ ಅಶುದ್ಧ ನೀರು ಸರಬರಾಜು ಹೆಚ್ಚುತ್ತಿದೆ. ಹೊಸ ಬಡಾವಣೆಗಳಿಗೆ ಪೈಪ್‌ಲೈನ್‌ ವ್ಯವಸ್ಥೆ ಸಮಸ್ಯೆಯಾಗಿದೆ. ಸಮರ್ಪಕ ರಸ್ತೆಯೂ ಇಲ್ಲದ ಬಡಾವಣೆಗಳಲ್ಲಿ ನೀರು ಪೋಲು ಅಧಿಕವಾಗಿದೆ. ಹೀಗಾಗಿ ವಾರಕೊಮ್ಮೆ ನೀರು ಪೂರೈಕೆ ಅನಿವಾರ್ಯವಾಗಿದೆ. ಪಟ್ಟಣದ ನಿವಾಸಿಗಳು ಕುಡಿಯುವ ನೀರನ್ನು ಹಲವು ದಿನಗಳವರೆಗೆ ಸಂಗ್ರಹಿಸಿಡಬೇಕಾಗಿದೆ.
ಜಾಕ್‌ವೆಲ್‌ನಲ್ಲಿ ದೋಷ
ಚಿಂಚೋಳಿ: ಪಟ್ಟಣದಲ್ಲಿ ನಿಂತು ಬೀಸಿ ಕಲ್ಲು ಹೊಡೆದರೆ ಅದು ಮುಲ್ಲಾಮಾರಿ ನದಿಯಲ್ಲಿ ಬೀಳುವಷ್ಟು ಸಮೀಪದಲ್ಲಿದೆ. ನಾಗರಿಕರಿಗೆ ಶುದ್ಧೀಕರಿಸಿದ ನೀರು ಪೂರೈಸಲಾಗುತ್ತಿದೆ. ಆದರೆ ಇದು ಕೆಲವೊಂದು ಬಡಾವಣೆಗಳಿಗೆ ತಲುಪುತ್ತಿಲ್ಲ. ಚಂದಾಪುರದಲ್ಲಿ ದಿನ ಬಿಟ್ಟು ದಿನ ನೀರು ಪೂರೈಸಲಾಗುತ್ತಿದೆ. ಚಂದಾಪುರಕ್ಕೆ ಶುದ್ಧ ನೀರು ಪೂರೈಸುವ ಜಾಕ್‌ವೆಲ್‌ನಲ್ಲಿ ದೋಷ ಎದುರಾಗಿದ್ದರಿಂದ ಸಮಸ್ಯೆ ಉಂಟಾಗಿದೆ. ಜಾಕ್‌ವೆಲ್‌ನಲ್ಲಿ ಎರಡು ಪಂಪ್‌ಗಳಿದ್ದು ಒಂದೇ ಕಾರ್ಯನಿರ್ವಹಿಸುತ್ತಿದೆ. ಇನ್ನೊಂದು ದುರಸ್ತಿಯಲ್ಲಿದೆ. ಜಾಕ್‌ವೆಲ್‌ನಲ್ಲಿ ಹೂಳು ತುಂಬಿದ್ದರಿಂದ ಪದೇ ಪದೆ ಮೋಟರ್ ಸುಟ್ಟು ಹೋಗುತ್ತಿದೆ. ಹೀಗಾಗಿ ಜನರಿಗೆ ನೀರಿನ ಬವಣೆ ತಪ್ಪುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT