ಕಲಬುರ್ಗಿ: ಮಾಜಿ ಸಚಿವ ಜಿ.ರಾಮಕೃಷ್ಣ ಅವರ ಅಂತ್ಯಕ್ರಿಯೆ ನಂದಿಕೂರ ಗ್ರಾಮದ ಅವರ ತೋಟದಲ್ಲಿ ಸೋಮವಾರ ನೆರವೇರಿತು.

ಜಿ.ರಾಮಕೃಷ್ಣ ಅವರ ಪಾರ್ಥಿವ ಶರೀರವನ್ನು ಇಲ್ಲಿಯ ಕೀರ್ತಿ ಶಿಕ್ಷಣ ಸಂಸ್ಥೆಯ ನರ್ಸಿಂಗ್ ಕಾಲೇಜಿನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಮಧ್ಯಾಹ್ನ 2.30ಕ್ಕೆ ಆರಂಭವಾದ ಅಂತಿಮ ಯಾತ್ರೆ ಜಗತ್ ವೃತ್ತ, ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದ ಮೂಲಕ ಸಾಗಿಬಂದು ನಂದಿಕೂರದ ಅವರ ಸ್ವಂತ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

‘ಪ್ರಗತಿಪರ ಚಿಂತಕರು, ಅಭಿವೃದ್ಧಿಯ ಹರಿಕಾರರಾಗಿದ್ದ ರಾಮಕೃಷ್ಣ ಅವರು ನಮಗೆಲ್ಲ ಮಾರ್ಗದರ್ಶನ ಮಾಡುತ್ತಿದ್ದರು. ಅಪಾರ ಜ್ಞಾನ ಹೊಂದಿದ್ದ ಇವರು ವಿಧಾನಸಭೆಯಲ್ಲಿ ವಿಷಯ ಮಂಡನೆ ಮಾಡುವಲ್ಲಿ ನಿಸ್ಸೀಮರಾಗಿದ್ದರು. ದೀನ ದಲಿತರ ಬಗ್ಗೆ ಕಾಳಜಿ ವಹಿಸುತ್ತಿದ್ದರು. ನುಡಿದಂತೆ ನಡೆಯುತ್ತಿದ್ದ ಜಿ.ರಾಮಕೃಷ್ಣ ಅವರು ಸುಳ್ಳು ಆಶ್ವಾಸನೆ ಎಂದೂ ಕೊಡುತ್ತಿರಲಿಲ್ಲ’ ಎಂದುಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಸ್ಮರಿಸಿದರು.

ಸಂಸದ ಡಾ.ಉಮೇಶ ಜಾಧವ, ರೇವುನಾಯಕ ಬೆಳಮಗಿ, ಮಾಜಿ ಶಾಸಕ ಬಿ.ಆರ್.ಪಾಟೀಲ, ಅಲ್ಲಮಪ್ರಭು ಪಾಟೀಲ್, ಮಾಜಿ ಮಹಾಪೌರ ವೈಜನಾಥ ತಡಕಲ್ ಮಹಾಗಾಂವ, ಶರಣು ಮೋದಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿನಾಥ ಪಾಟೀಲ ಸೊಂತ, ನೀಲಕಂಠರಾವ ಮೂಲಗೆ, ಜಿ.ಪಂ ಸದಸ್ಯ ಶಿವಾನಂದ ಪಾಟೀಲ, ಶರಣಗೌಡ ಪಾಟೀಲ, ವಿಶ್ವನಾಥ ತಡಕಲ್, ರವಿ ಚವಾಣ್, ಯಶ್ವಂತರಾಯ ಅಷ್ಟಗಿ, ಗುರುರಾಜ ಪಾಟೀಲ, ಶರಣು ಗೌರೆ, ಗುಂಡಪ್ಪ ಸಿರಡೋಣ, ನಿಜಪ್ಪ ಕಾಂಬಳೆ, ಆನಂದ ವಾರಿಕ ಅಂತಿಮದರ್ಶನ ಪಡೆದರು.

ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ಅವರಾದ (ಬಿ), ಕಮಲಾಪುರ, ಮಹಾಗಾಂವ, ಕುರಿಕೋಟಾ, ನರೋಣಾ, ಶಹಾಬಾದ್, ಮತ್ತಿತರ ಕಡೆಗಳಲ್ಲಿ ಅವರ ಅಭಿಮಾನಿಗಳು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಶ್ರದ್ಧಾಂಜಲಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.