ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಪರೀಕ್ಷೆ: ಒಂದೂವರೆ ಗಂಟೆ ತಡವಾಗಿ ಪ್ರಶ್ನೆ ಪತ್ರಿಕೆ ವಿತರಣೆ

ಗುಲಬರ್ಗಾ ವಿವಿ ಸ್ನಾತಕ ಕೋರ್ಸ್‌ಗಳ ರಿಪೀಟರ್ಸ್ ಪರೀಕ್ಷೆ; ಪರದಾಡಿದ ವಿದ್ಯಾರ್ಥಿಗಳು
Published : 22 ಮಾರ್ಚ್ 2025, 14:26 IST
Last Updated : 22 ಮಾರ್ಚ್ 2025, 14:26 IST
ಫಾಲೋ ಮಾಡಿ
Comments
‘ಗೊಂದಲದಿಂದ ವಿತರಣೆಯಲ್ಲಿ ವಿಳಂಬ’
‘ಮೌಲ್ಯಮಾಪನ ವಿಭಾಗದ ಸಿಬ್ಬಂದಿಯವರು ಯಾವ ವಿಷಯಗಳ ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸಬೇಕು ಎಂದು ಗೊಂದಲಕ್ಕೆ ಒಳಗಾಗಿದ್ದರು. ಇದರಿಂದ ವಿತರಣೆಯಲ್ಲಿ ತಡವಾಗಿದೆ. ಯಾರಿಂದ ಎಲ್ಲಿ ತಪ್ಪಾಗಿದೆ ಎಂದು ಪರಿಶೀಲಿಸಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಗುಲಬರ್ಗಾ ವಿವಿ ಪ್ರಭಾರ ಕುಲಪತಿ ಪ್ರೊ.ಜಿ. ಶ್ರೀರಾಮುಲು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಬೀದರ್ ಕಲಬುರಗಿ ಜೇವರ್ಗಿ ಸೇರಿದಂತೆ ಕೆಲವು ಕಾಲೇಜುಗಳ ಕೇಂದ್ರಗಳಲ್ಲಿ ತಡವಾಗಿದೆ. ಒಇ ಪ್ರಶ್ನೆ ಪತ್ರಿಕೆಗಳು ಹೆಚ್ಚಾಗಿದ್ದು ಮೇಲ್ ಮೂಲಕ ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸಿ ಸರಿಪಡಿಸಲಾಗಿದೆ. ಯುಯುಸಿಎಂಎಸ್‌ನಲ್ಲಿ ಹಾಜರಾತಿ ದಾಖಲಿಸುವ ಬಗ್ಗೆಯೂ ಪರಿಶೀಲನೆ ಮಾಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT