ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಸೂರ | ಸಾಲಬಾಧೆ: ರೈತ ಆತ್ಮಹತ್ಯೆ

Published 25 ನವೆಂಬರ್ 2023, 15:53 IST
Last Updated 25 ನವೆಂಬರ್ 2023, 15:53 IST
ಅಕ್ಷರ ಗಾತ್ರ

ಹುಲಸೂರ: ತಾಲ್ಲೂಕಿನ ಸಮೀಪದ ಸಾಯಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಸರ ಜವಳಗಾ ಗ್ರಾಮದಲ್ಲಿ ಸಾಲಬಾಧೆಯಿಂದ ಹೊಲದಲ್ಲಿ ನೇಣು ಬಿಗಿದುಕೊಂಡು ರೈತರೊಬ್ಬರು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಂಟೆಪ್ಪಾ ಪೀರಣ್ಣ ವಾಘೆ (60) ಮೃತ ರೈತ. ಪಿಕೆಪಿಎಸ್‌ ಸಹಕಾರ ಸಂಘದಲ್ಲಿ ₹2.50 ಲಕ್ಷ ಸಾಲ ಪಡೆದಿದ್ದರು. ಜತೆಗೆ ಖಾಸಗಿಯವರಿಂದಲೂ ಸಾಲ ಪಡೆದಿದ್ದಾರೆ. ಬೆಳೆದ ಫಸಲು ಕೈಗೆ ಸಿಗದೆ ನಷ್ಟವುಂಟಾಗಿದ್ದರಿಂದ ಹಣಕಾಸಿನ ತೊಂದರೆಯುಂಟಾಗಿ ನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪತ್ನಿ ಮಂಗಲಬಾಯಿ ದೂರಿನಲ್ಲಿ ತಿಳಿಸಿದ್ದಾರೆ. ಮೃತ ರೈತಗೆ ಮೂವರು ಗಂಡು ಮಕ್ಕಳಿದ್ದಾರೆ. ಮೇಹಕರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ಶಿವಕುಮಾರ ಬಳತೆ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT