ಕಲಬುರ್ಗಿ: ‘ಶಿಕ್ಷಕ ವೃತ್ತಿ ಪವಿತ್ರವಾದದ್ದು. ಅದರ ಪಾವಿತ್ರ್ಯವೇ ಜೀವನಕ್ಕೆ ಸಾರ್ಥಕ್ಯ ತಂದುಕೊಡುತ್ತದೆ’ ಎಂದು ಪೂಜ್ಯ ವರಜ್ಯೋತಿ ಭಂತೇಜಿ ಹೇಳಿದರು.

ನಗರದ ಡಾ.ಅಂಬೇಡ್ಕರ್ ಪದವಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ.ಐ.ಎಸ್. ವಿದ್ಯಾಸಾಗರ ಹಾಗೂ ಅವರ ಪತ್ನಿಯನ್ನು ಸೋಮವಾರ ಸನ್ಮಾನಿಸಿ ಅವರು ಮಾತನಾಡಿದರು.

‘ವ್ಯಕ್ತಿಯ ಸಾಧನೆಗೆ ಅವರ ಪ್ರವೃತ್ತಿಯೇಆಧಾರವಾಗುತ್ತವೆ. ಈ ಸಾಧನೆಯ ಹಿಂದೆ ಮಹಿಳೆಯರ ಸಹಕಾರ ಮುಖ್ಯವಾಗುತ್ತದೆ. ಈ ದಿಸೆಯಲ್ಲಿ ವಿದ್ಯಾಸಾಗರ ದಂಪತಿ ಆದರ್ಶಕ್ಕೆ ಅವರ ಸಮಾಜಮುಖಿ ಕಾರ್ಯಗಳೇ ಸಾಕ್ಷಿಯಾಗಿವೆ’ ಎಂದರು.

ಸಾಹಿತಿಗಳಾದ ಕೆ.ಎಸ್. ಬಂಧು ಸಿದ್ದೇಶ್ವರಕರ ಮತ್ತು ಧರ್ಮಣ್ಣ ಧನ್ನಿ ಮಾತನಾಡಿದರು. ದಿಲೀಪ ನವಲೆ, ಹರ್ಷವರ್ಧನ ಮಾತನಾಡಿದರು. ಉಪನ್ಯಾಸ ಗಾಂಧೀಜಿ ಮೊಳಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಗ್ಯಶ್ರೀ ಐ. ವಿದ್ಯಾಸಾಗರ, ಮಹಾದೇವಿ ಬಂಧು, ಚಂದ್ರಕಾಂತ ಹಾಗರಗಿ, ರಾಹುಲ ಶರ್ಮಾ ಸೇರಿದಂತೆ ಅವರ ಅಭಿಮಾನಿಗಳು, ಗಣ್ಯರು ಭಾಗವಹಿಸಿದ್ದರು. ಶಿವಶಂಕರ ಹಡಗಲ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.