ಕಲಬುರ್ಗಿ: ‘ಶಿವಶರಣ ಹರಳಯ್ಯ (ಸಮಗಾರ) ಮಚಗಾರ ಸಮಾಜದ ಜಿಲ್ಲಾ ಘಟಕದಿಂದ ಅ. 3ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ರಾಮಮಂದಿರದ ಹಿಂದಿರುವ ಹರಳಯ್ಯ ಸಮಾಜ ಭವನದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯು ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕಾಶಿರಾಯ ಎಸ್. ನಂದೂರಕರ್ ತಿಳಿಸಿದರು.

‘ಹಿಂದುಳಿದ ಹರಳಯ್ಯ ಸಮಾಜದಲ್ಲಿ ಇನ್ನೂ ಶಿಕ್ಷಣದಿಂದ ದೂರ ಉಳಿದವರು ಬಹಳ ಇದ್ದಾರೆ. ಮಕ್ಕಳಿಗೆ ಪ್ರೋತ್ಸಾಹ ನೀಡುವುದು ಹಾಗೂ ಪಾಲಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಪ್ರತಿಭಾ ಪುರಸ್ಕಾರವನ್ನು ಪ್ರತಿ ವರ್ಷ ಆಯೋಜಿಸಲಾಗುತ್ತಿದೆ’ ಎಂದು ಅವರ ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘2020–21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಮಾದಜ 43 ಮಕ್ಕಳು ಹಾಗೂ ಪಿಯು ದ್ವಿತೀಯ ವರ್ಷದ ಪರೀಕ್ಷೆಯಲ್ಲಿ 15 ಮಕ್ಕಳು ಉತ್ತಮ ಸಾಧನೆ ತೋರಿದ್ದಾರೆ. ಅವರ ಜತೆಗೇ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸ್ನೇಹಾ ಯಲಗುರೇಶ, ಅಕ್ಷತಾ ಮಲ್ಲಿನಾಥ ಬೋರಟಿ, ಪೂಜಾ ರಾಜಕುಮಾರ ಮರತೂರ ಹಾಗೂ ಪಿಯು ವಿದ್ಯಾಗಳಾದ ಜಾನವಿ ಬನ್ನಿಗಿಡದ, ಕೆ.ಎಸ್.ವಿಜಯಲಕ್ಷ್ಮಿ, ಪ್ರಿಯಾಂಕಾ ರಾಜಕುಮಾರ ಹರಡಿಕರ್ ಅವರಿಗೆ ನಗದು ಪುರಸ್ಕಾರ ನೀಡಲಾಗುವುದು’ ಎಂದು ಹೇಳಿದರು.

ಅಂದು ನಡೆಯುವ ಕಾರ್ಯಕ್ರಮವನ್ನು ಎಚ್‌ಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ ಉದ್ಘಾಟಿಸುವರು. ಶಾಸಕ ಬಸವರಾಜ ಮತ್ತಿಮೂಡ, ನಿವೃತ್ತ ಎಸ್ಪಿ ಬಿ.ಎಸ್.ಮರತೂರಕರ್, ನಿವೃತ್ತ ವೈದ್ಯಾಧಿಕಾರಿ ಜಿ.ಜಿ.ನಂದೂರಕರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಘಟನೆಯ ಅಧ್ಯಕ್ಷ ಶಿವಣ್ಣ ಮುಳಗುಂದ, ಪಾಲಿಕೆ ಸದಸ್ಯ ಅರ್ಚನಾ ಪಾಟೀಲ ಬಿರಾಳ, ಶಿಕ್ಷಕರಾದ ರಾಘವೇಂದ್ರ ಹಳಿಪೇಟ್, ಪ್ರವೀಣ ಹಾಗೂ ಸುರೇಶ ದೊಡ್ಡಮನಿ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.

ಸಮಾಜದ ಮುಖಂಡರಾದ ವೀರಭದ್ರಪ್ಪ ಹೆಬ್ಬಾಳಕರ್, ಸಿದ್ದಣ್ಣ ಬಾವಿಮನಿ, ಶಿವಶರಣಪ್ಪ ದೊಡ್ಡಮನಿ, ಶ್ರೀಮಂತ ಜೇವರ್ಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.