ಶುಕ್ರವಾರ, ಅಕ್ಟೋಬರ್ 30, 2020
25 °C

ಮಹಿಳಾ ಸ್ವಾವಲಂಬೆನೆಗೆ ದುಡಿಯುತ್ತೇನೆ: ಶಶಿಕಲಾ ಟೆಂಗಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಮಹಿಳೆಯರ ಕಷ್ಟಕ್ಕೆ ಸ್ಪಂದಿಸಿದ ನಡೆ ನೋಡಿ ಮುಖಂಡರು ನನಗೆ ಅವಕಾಶ ನೀಡಿದ್ದಾರೆ. ಅದನ್ನು ಚಾಚೂತಪ್ಪದೇ ಪಾಲಿಸುತ್ತೇನೆ’ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಘಟಕದಿಂದ ನಗರದಲ್ಲಿ ಮಂಗಳವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಅಧ್ಯಕ್ಷ ಪದವಿ ಸಿಕ್ಕ ನಂತರ ಬಹಳಷ್ಟು ಕಡೆ ಅಭಿನಂದರೆ ಇಟ್ಟುಕೊಂಡಿದ್ದಾರೆ. ಆದರೆ, ನಗರದಲ್ಲಿ ನಡೆದ ಸನ್ಮಾನ ನನ್ನ ತವರಿನ ಉಡುಗೊರೆಯಂತೆ. ಮಹಿಳೆಯರ ನಿರೀಕ್ಷೆ ಹುಸಿಯಾಗದಂತೆ ಕೆಲಸ ಮಾಡುತ್ತೇನೆ’ ಎಂದರು.

ಮಹಾಸಭೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ಶರಣ ಬಿ. ಪಾಟೀಲ ಮಾತನಾಡಿ, ‘ನಮ್ಮ ಸಮಾಜದ ಮಹಿಳೆಯೊಬ್ಬರು ಸಾಮಾಜಿಕ ಕಾರ್ಯಗಳಿಗೆ, ಮಹಿಳೆಯರ ಅಭಿವೃದ್ಧಿಗೆ ಸ್ಪಂದಿಸುತ್ತಿರುವು ಸಂತಸ ತಂದಿದೆ’ ಎಂದರು.

ಮಹಾಸಭೆಯ ಕಾರ್ಯದರ್ಶಿ ಡಾ.ಎಸ್.ಎಸ್. ಪಾಟೀಲ ಬಂದರವಾಡ, ಉಪಾಧ್ಯಕ್ಷ ರಾಜುಗೌಡ ನಾಗನಹಳ್ಳಿ, ಗೌರಿ ಚಿತ್ಕೋಟೆ, ವೀರಣ್ಣ ಗೊಳೆದ್, ಶೀಲಾ ಮುತ್ತಿನ, ಮಹಿಳಾ ಘಟಕ ಅಧ್ಯಕ್ಷೆ ಡಾ.ಸುಧಾ ಹಾಳಕಾಯಿ, ಶ್ರೀದೇವಿ ಸಾಸನಗೇರ, ಬೇಬಿನಂದಾ, ಕವಿತಾ ದೆಂಗಾವ್, ಮಾಲಾ ಕಣ್ಣಿ, ಮಾಲಾ ದನ್ನೂರ, ಶಾರದಾ ವಿ. ಪಾಟೀಲ, ವಿ.ಸಿ. ಪಾಟೀಲ, ಮಹಾಸಭೆ ಯುವ ಘಟಕ ಜಿಲ್ಲಾ ಗೌರವ ಅಧ್ಯಕ್ಷ ಎಂ.ಎಸ್. ಪಾಟೀಲ ನರಿಬೋಳ, ಸೋಮಶೇಖರ ಹಿರೇಮಠ, ಶರಣ ಟೆಂಗಳಿ, ಬಸವರಾಜ ಪಾಟೀಲ, ವರ್ಚನಹಳ್ಳಿ ತಾತಗೌಡ ಪಾಟೀಲ, ಡಾ.ರಾಜಶೇಖರ ಬಂಡೆ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು