ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರವೃತ್ತಿಯೇ ಸಾಧನೆ ಮಾರ್ಗ’

Last Updated 15 ಜೂನ್ 2021, 2:24 IST
ಅಕ್ಷರ ಗಾತ್ರ

ಕಲಬುರ್ಗಿ: ‘‌ಶಿಕ್ಷಕ ವೃತ್ತಿ ಪವಿತ್ರವಾದದ್ದು. ಅದರ ಪಾವಿತ್ರ್ಯವೇ ಜೀವನಕ್ಕೆ ಸಾರ್ಥಕ್ಯ ತಂದುಕೊಡುತ್ತದೆ’ ಎಂದು ಪೂಜ್ಯ ವರಜ್ಯೋತಿ ಭಂತೇಜಿ ಹೇಳಿದರು.

ನಗರದ ಡಾ.ಅಂಬೇಡ್ಕರ್‌ ಪದವಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ.ಐ.ಎಸ್. ವಿದ್ಯಾಸಾಗರ ಹಾಗೂ ಅವರ ಪತ್ನಿಯನ್ನು ಸೋಮವಾರ ಸನ್ಮಾನಿಸಿ ಅವರು ಮಾತನಾಡಿದರು.

‘‌ವ್ಯಕ್ತಿಯ ಸಾಧನೆಗೆ ಅವರ ಪ್ರವೃತ್ತಿಯೇಆಧಾರವಾಗುತ್ತವೆ. ಈ ಸಾಧನೆಯ ಹಿಂದೆ ಮಹಿಳೆಯರ ಸಹಕಾರ ಮುಖ್ಯವಾಗುತ್ತದೆ. ಈ ದಿಸೆಯಲ್ಲಿ ವಿದ್ಯಾಸಾಗರ ದಂಪತಿ ಆದರ್ಶಕ್ಕೆ ಅವರ ಸಮಾಜಮುಖಿ ಕಾರ್ಯಗಳೇ ಸಾಕ್ಷಿಯಾಗಿವೆ’ ಎಂದರು.

ಸಾಹಿತಿಗಳಾದ ಕೆ.ಎಸ್. ಬಂಧು ಸಿದ್ದೇಶ್ವರಕರ ಮತ್ತು ಧರ್ಮಣ್ಣ ಧನ್ನಿ ಮಾತನಾಡಿದರು. ದಿಲೀಪ ನವಲೆ, ಹರ್ಷವರ್ಧನ ಮಾತನಾಡಿದರು. ಉಪನ್ಯಾಸ ಗಾಂಧೀಜಿ ಮೊಳಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಗ್ಯಶ್ರೀ ಐ. ವಿದ್ಯಾಸಾಗರ, ಮಹಾದೇವಿ ಬಂಧು, ಚಂದ್ರಕಾಂತ ಹಾಗರಗಿ, ರಾಹುಲ ಶರ್ಮಾ ಸೇರಿದಂತೆ ಅವರ ಅಭಿಮಾನಿಗಳು, ಗಣ್ಯರು ಭಾಗವಹಿಸಿದ್ದರು.‌ ಶಿವಶಂಕರ ಹಡಗಲ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT