ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ-ಮುಂಬೈ ನಡುವೆ ವಿಮಾನ ಹಾರಾಟ 13ರಿಂದ

Last Updated 11 ಜೂನ್ 2020, 4:32 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿ ವಿಮಾನ ನಿಲ್ದಾಣದಿಂದ ಕಲಬುರ್ಗಿ-ಮುಂಬೈ (ವಯಾ: ಬೆಂಗಳೂರು, ಬೆಳಗಾವಿ) ಮಾರ್ಗವಾಗಿ ಪ್ರಾಯೋಗಿಕ ವಿಮಾನ ಹಾರಾಟಕ್ಕೆ ಸ್ಟಾರ್ ಏರ್ ಸಂಸ್ಥೆ‌ ಮುಂದಾಗಿದೆ.

ಪ್ರಸ್ತುತ ಸ್ಟಾರ್ ಏರ್ ಸಂಸ್ಥೆ ಪ್ರತಿ ಶನಿವಾರ ಮಾತ್ರ ಈ ಮಾರ್ಗದಲ್ಲಿ ವಿಮಾನ ಹಾರಾಟ ನಡೆಸಲು ಉದ್ದೇಶಿಸಿದ್ದು, ಇದೇ ಜೂನ್ 13ರಂದು ಕಲಬುರ್ಗಿ-ಮುಂಬೈ ನಡುವೆ ಸಂಸ್ಥೆಯ ವಿಮಾನ ಸಂಚರಿಸಲಿದೆ. ಬುಕಿಂಗ್ಈಗಾಗಲೇ ಆರಂಭಗೊಂಡಿದೆ.

OG-118 ಸಂಖ್ಯೆಯ ವಿಮಾನ ಕಲಬುರ್ಗಿಯಿಂದ ಬೆಳಿಗ್ಗೆ 10.20 ಗಂಟೆಗೆ ಹೊರಟು 11.25ಕ್ಕೆ ಬೆಂಗಳೂರು ತಲುಪಲಿದೆ. ಇದೇ ವಿಮಾನ OG-105 ಸಂಖ್ಯೆಯೊಂದಿಗೆ 1 ಗಂಟೆಗೆ ಬೆಳಗಾವಿಗೆ ಹಾಗೂ OG-111 ಸಂಖ್ಯೆಯಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 2.40ಕ್ಕೆ ಇಳಿಯಲಿದೆ ಎಂದು ಕಲಬುರ್ಗಿ ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರ ರಾವ್ ತಿಳಿಸಿದ್ದಾರೆ.

ಸ್ಟಾರ್ ಏರ್ ಸಂಸ್ಥೆ ಈಗಾಗಲೇ ನಿತ್ಯ ಬೆಂಗಳೂರು-ಕಲಬುರ್ಗಿ ಮಧ್ಯೆ ವಿಮಾನ ಸಂಚಾರ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT