ಕಲಬುರಗಿ: ‘ಜೀವನದಲ್ಲಿ ಗುರಿ ಮತ್ತು ಗುರು ಎರಡು ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಹಿಡಿದ ಕೆಲಸ ಬಿಡದೆ ಮಾಡುವ ಪ್ರಯತ್ನ ಸಾಧನೆಗೆ ಸಹಕಾರಿಯಾಗುತ್ತದೆ’ ಎಂದು ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಉಪನಿರ್ದೇಶಕ ಸುರೇಶ ಕೆ.ಅಕ್ಕಣ್ಣ ಹೇಳಿದರು.

ಈಚೆಗೆ ನಡೆದ ನಗರದ ಮಾತೋಶ್ರೀ ಕಲ್ಯಾಣಿ ಸ್ಮಾರಕ ಶಿಕ್ಷಣ ಸಂಸ್ಥೆ ಸಂಚಾಲಿತ ಶ್ರೀಗುರು ಸ್ವತಂತ್ರ ವಿಜ್ಞಾನ ಪದವಿಪೂರ್ವ ಕಾಲೇಜಿನ 2025–26ನೇ ಸಾಲಿನ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಂಶುಪಾಲ ವಿದ್ಯಾಸಾಗರ ಎಂ.ಗೋಗಿ, ‘ವಿದ್ಯಾರ್ಥಿಗಳು ತಂದೆ, ತಾಯಿ, ಗುರು, ಹಿರಿಯರಿಗೆ ಗೌರವ ಕೊಡುವುದರೊಂದಿಗೆ ಪ್ರಾಮಾಣಿಕತೆಯಿಂದ ಮುನ್ನಡೆದು ಉನ್ನತ ಶಿಕ್ಷಣ ಪಡೆದು ಭವ್ಯ ಭಾರತದ ಶಿಲ್ಪಿಗಳಾಗಬೇಕು’ ಎಂದು ಹಾರೈಸಿದರು.

ಕಾರ್ಯದರ್ಶಿ ನಿತಿನ್ ನಾಯ್ಕ ಮಾತನಾಡಿ, ‘ಪಾಲಕರು ಮತ್ತು ಗುರುಗಳಿಂದ ಮಾರ್ಗದರ್ಶನ, ಸಲಹೆ ಪಡೆದು ಉತ್ತಮ ಫಲಿತಾಂಶ ತನ್ನಿ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷೆ ನಳಿನಿ ಎ.ನಾಯ್ಕ ಮಾತನಾಡಿ, ‘ನಮ್ಮ ಸಂಸ್ಥೆಯ ಉತ್ತಮ ಶಿಕ್ಷಕರ ಸಲಹೆ ಮತ್ತು ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿ ಉತ್ತಮ ಫಲಿತಾಂಶ ತನ್ನಿ’ ಎಂದರು.

ಆಡಳಿತಾಧಿಕಾರಿಗಳಾದ ನಹಾ ನಾಯ್ಕ, ಆಡಳಿತ ಮಂಡಳಿ ಸದಸ್ಯರಾದ ಗುರುರಾಜ ಎ.ನಾಯ್ಕ ಸೇರಿಂದತೆ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.