ಭಾನುವಾರ, ಜನವರಿ 19, 2020
28 °C

ಸರಕು ಸಾಗಾಣಿಕೆ ರೈಲಿನ ವಿಶೇಷ ಬೋಗಿಗೆ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಇಲ್ಲಿನ ಕಲಬುರ್ಗಿ ರೈಲು ನಿಲ್ದಾಣದಲ್ಲಿ ನಿಂತಿದ್ದ ಸರಕು ಸಾಗಣೆ ರೈಲಿನಲ್ಲಿ ಸಿಬ್ಬಂದಿ ಇದ್ದ ಬೋಗಿಗೆ ಗುರುವಾರ ಬೆಳಗಿನ ಜಾವ ಬೆಂಕಿ ಹೊತ್ತಿಕೊಂಡಿದೆ.

ಕ್ಷಣಾರ್ಧದಲ್ಲಿ ಬೆಂಕಿ ಇಡೀ ಬೋಗಿಗೆ ವ್ಯಾಪಿಸಿತು. ತಕ್ಷಣ ‌ರೈಲು‌ ನಿಲ್ದಾಣಕ್ಕೆ ಧಾವಿಸಿದ‌ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.

ಘಟನೆಯಲ್ಲಿ ‌ಯಾರಿಗೂ ಗಾಯಗಳಾಗಿಲ್ಲ ಎಂದು‌ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)