ಸೋಮವಾರ, ಮೇ 16, 2022
24 °C

ನೂತನ ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷರ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೇವರ್ಗಿ: ತಾಲ್ಲೂಕಿನ 23 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತಿದ್ದು, ಗುರುವಾರ 7 ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆಸಲಾಗಿದೆ.

ಹುಲ್ಲೂರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಸದಸ್ಯೆ ಕಲಾವತಿ ಅಂಬರೀಶ, ಉಪಾಧ್ಯಕ್ಷರಾಗಿ ಭಾಗಮ್ಮ ಚಂದಪ್ಪ ಸರಡಗಿ ಗುರುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಪಂಚಾಯಿತಿರಾಜ್ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುಭಾಷ್ಚಂದ್ರ ಸಂಭಾಜಿ ತಿಳಿಸಿದ್ದಾರೆ.

ಹುಲ್ಲೂರ ಗ್ರಾಮ ಪಂಚಾಯಿತಿ 11 ಸದಸ್ಯರ ಬಲಹೊಂದಿದೆ. ವಿಜೇತರ ಘೋಷಣೆಯಾಗುತ್ತಿದ್ದಂತೆಯೆ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಜೆಡಿಎಸ್ ಮುಖಂಡ ಚನಮಲ್ಲಯ್ಯ ಹಿರೇಮಠ, ಯುವ ಮುಖಂಡ ವಿಜಯಕುಮಾರ ಕೇದಾರಲಿಂಗಯ್ಯ ಹಿರೇಮಠ, ಭಗವಂತರಾಯಗೌಡ ಅಂಕಲಗಾ, ಯಲ್ಲಾಲಿಂಗ ಪೂಜಾರಿ ಮೋಗನಿಟಗಾ, ದಂಗಪ್ಪ ಕಂಟಿಕಾರ, ಬಾಪುಗೌಡ ಮಾಲಿಪಾಟೀಲ, ತಿಪ್ಪಣ್ಣ ಇದ್ದರು.

ನೆಲೋಗಿ: ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಬೈಲಪ್ಪ ನೇದಲಗಿ, ಉಪಾಧ್ಯಕ್ಷೆಯಾಗಿ ತಾಯಮ್ಮಗೌಡ್ತಿ ಯಶವಂತರಾಯಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಲಾಸರಾಜ್ ತಿಳಿಸಿದ್ದಾರೆ.

ನೆಲೋಗಿ ಗ್ರಾಮ ಪಂಚಾಯಿತಿ ಒಟ್ಟು 21 ಸದಸ್ಯರ ಬಲಹೊಂದಿದೆ. ಅದರಲ್ಲಿ 20 ಜನ ಕಾಂಗ್ರೆಸ್ ಬೆಂಬಲಿತರು ಚುನಾಯಿತರಾಗಿದ್ದರು. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬೈಲಪ್ಪ ನೇದಲಗಿ ಹಾಗೂ ಸಾಮಾನ್ಯ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ತಾಯಮ್ಮಗೌಡ್ತಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಇವರಿಬ್ಬರೂ ಹೊರತುಪಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸಿದ ಕಾರಣ ಬೈಲಪ್ಪ ಹಾಗೂ ತಾಯಮ್ಮಗೌಡ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದರು.

ವಿಜಯೋತ್ಸವ: ಅವಿರೋಧ ವಾಗಿ ಆಯ್ಕೆಯಾಗುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಲಾಯಿತು. ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣಪ್ಪ ಕಮಕನೂರ, ಮಾಜಿ ಮೇಯರ್ ಸಂಜಯಸಿಂಗ್, ಮುಖಂಡರಾದ ಶರಣು ಸಾಹು ಬಿಲ್ಲಾಡ, ಭಗವಂತ್ರಾಯ ಗುಜಗೊಂಡ, ವಿಧ್ಯಾಧರ ಚೌಡಾಪೂರ, ಗುರುಪಾಟೀಲ, ಶರಭು ಕಲ್ಯಾಣಿ, ಭೀಮು ಕಾಚಾಪೂರ, ಬಾಬುಗೌಡ ವಿಭೂತಿ, ಅನಂತರಾವ ಕುಲಕರ್ಣಿ, ರಾಜು ಮುದ್ದಾ, ದತ್ತು ಹರಕೇರಿ, ನಿಂಗು ಅಂಬಿಗ, ರಾಜಶೇಖರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು