ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ 43ನೇ ಘಟಿಕೋತ್ಸವ ಫೆಬ್ರುವರಿ 24ರಂದು ನಿಗದಿಯಾಗಿದೆ. ಘಟಿಕೋತ್ಸವದಲ್ಲಿ ಮೂವರು ಸಾಧಕರನ್ನು ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದ್ದು, ಮೂವರೂ ರಾಜಕಾರಣಿಗಳು ಎಂಬುದು ವಿಶೇಷ.

‘ಸಮಾಜ ಸೇವಾ ಕ್ಷೇತ್ರದ ಸಾಧನೆಗಾಗಿ ಪಿ.ಜಿ.ಆರ್.ಸಿಂಧ್ಯಾ, ಮುರುಗೇಶ ನಿರಾಣಿ ಹಾಗೂ ಕೇದಾರಲಿಂಗಯ್ಯ ಹಿರೇಮಠ ಅವರಿಗೆ ಈ ಪುರಸ್ಕಾರ ನೀಡಲು ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅನುಮೋದಿಸಿದ್ದಾರೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ್ ಎಸ್.ಉಡಿಕೇರಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಗೌರವ ಡಾಕ್ಟರೇಟ್ಗೆ ಒಟ್ಟು 18 ಸಾಧಕರ ಅರ್ಜಿಗಳು ವಿವಿಗೆ ಬಂದಿದ್ದವು. ಅವುಗಳನ್ನು ಅವುಗಳನ್ನು ಸಿಂಡಿಕೇಟ್ ಸಭೆಯು ರಾಜ್ಯಪಾಲರು ರಚಿಸಿದ್ದ ಆಯ್ಕೆ ಸಮಿತಿಗೆ ಸಲ್ಲಿಸಿತ್ತು. ರಾಜ್ಯಪಾಲರ ನಾಮನಿರ್ದೇಶಿತ ಭೂಪಾಲ್ನ ಐಇಎಸ್ ವಿವಿಯ ಕುಲಪತಿ ಬಿ.ಎಸ್.ಯಾದವ್, ಇಂದೋರ್ನ ದೇವಿ ಅಹಿಲ್ಯಾ ವಿವಿಯ ವಿಶ್ರಾಂತ ಕುಲಪತಿ ರೇಣು ಜೈನ್ ಹಾಗೂ ವಿಶ್ವವಿದ್ಯಾಲಯ ನಾಮನಿರ್ದೇಶಿತ ಬೆಳಗಾವಿಯ ಆರ್ಸಿಯು ವಿವಿ ವಿಶ್ರಾಂತ ಕುಲಪತಿ ಎಂ.ರಾಮಚಂದ್ರಗೌಡ ಆಯ್ಕೆ ಸಮಿತಿಯಲ್ಲಿದ್ದರು’ ಎಂದರು.

‘18 ಹೆಸರುಗಳ ಪೈಕಿ ಮೂವರ ಹೆಸರುಗಳನ್ನು ಸಮಿತಿಯು ಶಿಫಾರಸು ಮಾಡಿತ್ತು. ಅದರಂತೆ ರಾಜ್ಯಪಾಲರು ಇದನ್ನು ಅಂತಿಮಗೊಳಿಸಿದ್ದಾರೆ. ಇದೆಲ್ಲವೂ ನಾನು ಕುಲಪತಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲಿನ ನಿರ್ಧಾರಗಳಾಗಿವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘43ನೇ ಘಟಿಕೋತ್ಸವ 2025ರ ಮೇನಲ್ಲೇ ನಡೆಯಬೇಕಿತ್ತು. ಆದರೆ, ಪೂರ್ಣಾವಧಿ ಕುಲಪತಿ ಇಲ್ಲದ್ದೂ ಸೇರಿದಂತೆ ಹಲವು ಕಾರಣಗಳಿಂದ ಈಗ ನಿಗದಿಯಾಗಿದೆ. ಈ ಘಟಿಕೋತ್ಸವದಲ್ಲಿ 2023–24ನೇ ಸಾಲಿನ ಒಟ್ಟು 19,133 ವಿದ್ಯಾರ್ಥಿಗಳು ಪದವಿಗಳನ್ನು ಪಡೆಯಲು ಅರ್ಹರಾಗಿದ್ದಾರೆ. ಪಿಎಚ್ಡಿ ಸೇರಿದಂತೆ ಒಟ್ಟು 3,369 ವಿದ್ಯಾರ್ಥಿಗಳು ಘಟಿಕೋತ್ಸವ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.