ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಳೆ: ಇಬ್ಬರು ಸಾವು

98 ಮನೆಗಳಿಗೆ ಹಾನಿ l ಉತ್ತರ ಕರ್ನಾಟಕದ ವಿವಿಧೆಡೆ ಮಳೆ
Last Updated 30 ಸೆಪ್ಟೆಂಬರ್ 2022, 20:12 IST
ಅಕ್ಷರ ಗಾತ್ರ

ಕಲಬುರಗಿ: ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಬಳಗಾನೂರು ಗ್ರಾಮದಲ್ಲಿ ಮಳೆಯಿಂದ ಮನೆ ಕುಸಿದು ಮರಿಯಪ್ಪ (55) ಎಂಬುವರು ಮೃತಪಟ್ಟಿದ್ದಾರೆ.

ಮರಿಯಪ್ಪ ಅವರ ಪತ್ನಿ ಮತ್ತು ಪುತ್ರಿ ಗಾಯಗೊಂಡಿದ್ದಾರೆ. ಮಸ್ಕಿ ಜಲಾಶಯ ಭರ್ತಿಯಾಗಿದ್ದರಿಂದ ಹಳ್ಳಕ್ಕೆ ನೀರು ಹರಿಬಿಡಲಾಗುತ್ತಿದೆ. ಶುಕ್ರವಾರ ಇಡೀ ದಿನ ಜಿಲ್ಲೆಯಲ್ಲಿ ಮಳೆಯಾಯಿತು.

ಕೊಪ್ಪಳ ತಾಲ್ಲೂಕಿನ ಕಾಟ್ರಳ್ಳಿ ಬಳಿ ಸಿಡಿಲು ಬಡಿದು ಚಿಕ್ಕಸಿಂದೋಗಿ ಗ್ರಾಮದ ರೈತ ಕೊಟ್ರೇಶ (23) ಎಂಬುವರು ಮೃತಪಟ್ಟಿದ್ದಾರೆ. ಮಹಿಳೆಯೊಬ್ಬರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಮತ್ತು ಶುಕ್ರವಾರ ಉತ್ತಮ ಮಳೆಯಾಗಿದ್ದು, ಮನೆ, ಬೆಳೆಗಳಿಗೆ→ಹಾನಿಯಾಗಿದೆ.→ಯಲಬುರ್ಗಾ→ತಾಲ್ಲೂಕಿನಲ್ಲಿ→ಎರಡು ದಿನಗಳಲ್ಲಿ→ಒಟ್ಟು 53 ಮನೆಗಳಿಗೆ ಹಾನಿಯಾಗಿದೆ.

ರಾಜ್ಯದಲ್ಲಿ ಒಂದೇ ದಿನ ಹೆಚ್ಚು ಮಳೆ ಸುರಿದ ಮೊದಲ ಮೂರು ಊರುಗಳ ಪಟ್ಟಿಯಲ್ಲಿ ಕೊಪ್ಪಳ ತಾಲ್ಲೂಕಿನ ಹಿಟ್ನಾಳ (10.06 ಸೆಂ.ಮೀ), ಬೇವಿನಹಳ್ಳಿ (10.04 ಸೆಂ.ಮೀ) ಇವೆ. ಮೊದಲ ಸ್ಥಾನದಲ್ಲಿ ರೋಣ ತಾಲ್ಲೂಕಿನ ಕುಂಟೋಜಿ (10.08 ಸೆಂ.ಮೀ.) ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆ (ಹುಬ್ಬಳ್ಳಿ ವರದಿ): ಹುಬ್ಬಳ್ಳಿ, ಧಾರವಾಡ, ಗದಗ, ಹೊಸಪೇಟೆ, ವಿಜಯಪುರ, ಕಾರವಾರ ಸೇರಿದಂತೆ ವಿವಿಧೆಡೆ ಮಳೆಯಾಗಿದೆ.

ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ ಗುರುವಾರ ರಾತ್ರಿ ಹಾಗೂ ಶುಕ್ರವಾರ ಸಾಯಂಕಾಲ ಧಾರಾಕಾರವಾಗಿ ಸುರಿದಿದೆ. ಗುಡುಗು, ಮಿಂಚಿನ ಸಹಿತ ರಭಸದ ಮಳೆಯಾಗಿದೆ. ಶುಕ್ರವಾರ ದಿನವಿಡೀ ಬಿಡುವಿಲ್ಲದ ವರ್ಷಧಾರೆಗೆ ವಿಜಯನಗರ ಜಿಲ್ಲೆಯಲ್ಲಿ 30 ಮನೆಗಳಿಗೆ ಹಾನಿಯಾಗಿದ್ದು, ಬಳ್ಳಾರಿ ಜಿಲ್ಲೆಯಲ್ಲಿ 7 ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಗುರುವಾರ ರಾತ್ರಿಯಿಡಿ ಗುಡುಗು ಸಹಿತ ಮಳೆಯಾಗಿತ್ತು.ಸತತ ಮೂರನೇ ದಿನ ಸುರಿದ ಮಳೆಗೆ ಜೋಳ, ಮೆಕ್ಕೆಜೋಳ, ಭತ್ತದ ಗದ್ದೆಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದೆ.

ಹುಬ್ಬಳ್ಳಿ ನಗರದಲ್ಲಿ ಧಾರಾಕಾರ ಮಳೆ ಸುರಿಯಿತು. ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ತಾಲ್ಲೂಕು ವ್ಯಾಪ್ತಿಯಲ್ಲಿ 8 ಮನೆಗಳು ಭಾಗಶಃ ಕುಸಿದಿವೆ. ಕಾರವಾರವೂ ಸೇರಿದಂತೆ ಉತ್ತರ ಕನ್ನಡದ ಕರಾವಳಿಯಾದ್ಯಂತ ಉತ್ತಮ ಮಳೆಯಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ ಮಳೆ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆ ಸುರಿಯುತ್ತಿದೆ. ಗುರುವಾರ ರಾತ್ರಿ 11ರಿಂದೊಲೇ ಆರಂಭವಾದ ಮಳೆ ಶುಕ್ರವಾರ ಬೆಳಿಗ್ಗೆಯೂ ಜಿಟಿಜಿಟಿಯಾಗಿ ಸುರಿಯಿತು. ಸಂಜೆ ವೇಳೆ ಮಳೆ ತುಸು ಜೋರಾಗಿಯೇ ಸುರಿಯಿತು. ಜಿಲ್ಲೆಯಲ್ಲಿ ಸರಾಸರಿ 14.2 ಮಿ.ಮೀ ಮಳೆಯಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ ಮಳೆ

ದಾವಣಗೆರೆ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆ ಸುರಿಯುತ್ತಿದೆ. ಗುರುವಾರ ರಾತ್ರಿ 11ರಿಂದೊಲೇ ಆರಂಭವಾದ ಮಳೆ ಶುಕ್ರವಾರ ಬೆಳಿಗ್ಗೆಯೂ ಜಿಟಿಜಿಟಿಯಾಗಿ ಸುರಿಯಿತು. ಸಂಜೆ ವೇಳೆ ಮಳೆ ತುಸು ಜೋರಾಗಿಯೇ ಸುರಿಯಿತು. ಜಿಲ್ಲೆಯಲ್ಲಿ ಸರಾಸರಿ 14.2 ಮಿ.ಮೀ ಮಳೆಯಾಗಿದೆ.

ಜಗಳೂರು ತಾಲ್ಲೂಕಿನಲ್ಲಿ 23 ಮಿ.ಮೀ ಹಾಗೂ ದಾವಣಗೆರೆ ತಾಲ್ಲೂಕಿನಲ್ಲಿ 19 ಮಿ.ಮೀ ಮಳೆಯಾಗಿದೆ. ಈ ಮಳೆಯಿಂದ ಹಿಂಗಾರು ಬೆಳೆಗಳಿಗೆ ಅನುಕೂಲವಾಗಲಿದೆ.

ಚಿತ್ರದುರ್ಗ ಜಿಲ್ಲೆಯಲ್ಲೂ ಗುರುವಾರದಿಂದ ಮಳೆ ಸುರಿಯುತ್ತಿದೆ. ಮೊಳಕಾಲ್ಮುರಿನಲ್ಲಿ 3.2 ಸೆಂ.ಮೀ ಮಳೆಯಾಗಿದೆ. ಚಿಕ್ಕಜಾಜೂರಿನಲ್ಲಿ ಗುರುವಾರ ತಡರಾತ್ರಿ 5.8 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT