ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರಂಟೈನ್‌ ಕೇಂದ್ರದ 400 ಮಂದಿಗೆ ಹೋಳಿಗೆ ಊಟ

Last Updated 20 ಮೇ 2020, 10:06 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ ಮಾಶಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಕ್ವಾರಂಟೈನ ಕೇಂದ್ರದಲ್ಲಿರುವ 400 ಕಾರ್ಮಿಕರಿಗೆ, ಜೆ.ಎಂ.ಕೊರಬು ಫೌಂಡೇಷನ್ ವತಿಯಿಂದ ಮಂಗಳವಾರ ಹೋಳಿಗೆ– ತುಪ್ಪ ಊಟದ ವ್ಯವಸ್ಥೆ ಮಾಡಲಾಗಿತ್ತು.

‘ಕ್ವಾರಂಟೈನ್ ಕೇಂದ್ರದಲ್ಲಿ ಇರುವವರು ಮಾನಸಿಕ ಖಿನ್ನತೆಗೆ ಒಳಗಾಗದೇ ಸಂತೋಷವಾಗಿ ಕಾಲ ಕಳೆಯಬೇಕು ಎನ್ನುವ ಉದ್ದೇಶದಿಂದ ಊಟ ಮಾಡಿಸಿದ್ದೇನೆ’ ಎಂದುಫೌಂಡೇಷನ್‌ನ ಅಧ್ಯಕ್ಷ ಶಿವಪುತ್ರ ಜಿಡ್ಡಗಿ ತಿಳಿಸಿದರು.

‘ವಲಸೆ ಕಾರ್ಮಿಕರು ಕಷ್ಟದಲ್ಲಿದ್ದಾರೆ. ಪ್ರತಿ ದಿನ ಅನ್ನ– ಸಾರು ಊಟ ಬೇಸರ ತಂದಿರಬಹುದು. ಇಂಥ ಸಮಾಜಮುಖಿ ಕಾರ್ಯ ನಿರಂತರವಾಗಿ ಮುಂದುವರಿಯಲಿದೆ’ ಎಂದು ‌ಫೌಂಡೇಷನ್ ಸಂಸ್ಥಾಪಕ ಜೆ.ಎಂ.ಕೊರಬು ಪ್ರತಿಕ್ರಿಯೆ ನೀಡಿದರು.

ಮುಖಂಡರಾದ ಚಂದಪ್ಪ ಹಾವಳಗಿ, ಪಂಡಿತ ನಾವಿ, ರೇವಣಸಿದ್ಧ ನಾಮಗೊಂಡ, ಸುರೇಶ ರಾಖಾ, ಅಣ್ಣಾರಾವ ಶಿವಗೊಂಡ, ದೇವಾನಂದ ಜಿಡಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT