ಕಲಬುರಗಿ: ‘ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜ್ಯದಲ್ಲಿ (ಕಲಬುರಗಿ ಜಿಲ್ಲೆ) ಮರಳು ಅಕ್ರಮ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇದರಲ್ಲಿ ಸಚಿವರ ಬೆಂಬಲಿಗರ ಕೈವಾಡವಿದ್ದು, ಅಕ್ರಮವನ್ನು ತಡೆಯಬೇಕಿದ್ದ ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತಿದೆ. ಪೊಲೀಸರು ಸಹ ಮರಳು ದಂಧೆಕೋರರ ಜತೆಗೆ ಶಾಮೀಲಾಗಿದ್ದಾರೆ’ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಆರೋಪಿಸಿದರು.

‘ಚಿತ್ತಾಪುರ, ಜೇವರ್ಗಿ, ಸೇಡಂ ಸೇರಿದಂತೆ ಹಲವೆಡೆ ಮರಳು ತುಂಬಿದ ನೂರಾರು ಲಾರಿಗಳು ನಿತ್ಯ ರಾಜಾರೋಷವಾಗಿ ಓಡಾಡುತ್ತಿವೆ. ರಾಯಲ್ಟಿ ಕಟ್ಟದೆ, ನಿಗದಿಗಿಂತ ಹೆಚ್ಚುವರಿ ಟನ್ ಮರಳು ಸಾಗಿಸುವ ಲಾರಿಗಳಿಗೆ ಕಡಿವಾಣ ಹಾಕುವಲ್ಲಿ ಆರ್ಟಿಒ, ಗಣಿ, ಪೊಲೀಸ್ ಅಧಿಕಾರಿಗಳು ವಿಫಲವಾಗಿದ್ದಾರೆ. ಆಡಳಿತ ಎಂಬುದು ಸ್ತಬ್ಧವಾಗಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಪ್ರಿಯಾಂಕ್ ಅವರು ಈ ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಮರಳು ದಂಧೆಯ ಬಗ್ಗೆ ರಾಜಾರೋಷವಾಗಿ ಮಾತಾಡುತ್ತಿದ್ದರು. ಈಗ ಎಲ್ಲಿ ಹೋಗಿದ್ದಾರೆ? ಜಿಲ್ಲಾಧಿಕಾರಿ ತಮ್ಮ ಕಚೇರಿಯಿಂದ ಹೊರಬಂದು ಮರಳು ಮಾಫಿಯಾವನ್ನು ತಡೆಯಬೇಕು. ಇಲ್ಲದಿದ್ದರೆ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಮರಳು ರಾಯಲ್ಟಿಯಿಂದ ಸರ್ಕಾರಕ್ಕೆ ಬರಬೇಕಿದ್ದ ಆದಾಯಕ್ಕೆ ಕತ್ತರಿ ಬಿದ್ದಿದೆ. ರಸ್ತೆಯಲ್ಲಿ ಬೇರೆ ವಾಹನಗಳು ಬಂದರೆ ಅವುಗಳನ್ನು ಹೊಡೆದುಕೊಂಡು ಹೋಗುತ್ತಿದ್ದಾರೆ. ಅಪಘಾತಗಳು ಹೆಚ್ಚಾಗುತ್ತಿವೆ. ಮರುಳು ಮಾಫಿಯಾದಲ್ಲಿ ಕಾಂಗ್ರೆಸ್ನ ಕೆಲವು ಕಾರ್ಯಕರ್ತರು, ಸಚಿವರ ಹಿಂಬಾಲಕರ ದಂಡೇ ಕಾಣಿಸಿಕೊಳ್ಳುತ್ತಿದೆ. ಮರಳು ದಂಧೆಗೆ ಉಸ್ತುವಾರಿ ಸಚಿವರ ಕೃಪಾಕಟಾಕ್ಷ ಇದೆಯಾ? ಈಗ ಅವರದ್ದೇ ಸರ್ಕಾರ ಅಧಿಕಾರಕ್ಕೆ ಬಂದಿದೆ, ಆರೋಪಿಗಳನ್ನು ಹುಡುಕಿ, ಒದ್ದು ಒಳಗೆ ಹಾಕಲಿ’ ಎಂದು ಸವಾಲೊಡ್ಡಿದರು.

ಹೆಸರು ಹೇಳಲು ಹಿಂದೇಟು: ಅಕ್ರಮದ ಹಿಂದಿರುವ ಸಚಿವರ ಬೆಂಬಲಿಗರ ಹೆಸರು ಬಹಿರಂಗಪಡಿಸುವಂತೆ ಮಾಧ್ಯಮದವರು ಕೇಳಿದಾಗ, ಹೆಸರು ಬಹಿರಂಗಪಡಿಸಲು ಹಿಂದೇಟು ಹಾಕಿದ್ದರು. ‘ಪ್ರಿಯಾಂಕ್ ಖರ್ಗೆ ಮತ್ತು ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಬೆಂಬಲಿಗರೇ ಭಾಗಿಯಾಗಿದ್ದಾರೆ. ನಾಯಕರಿಗಿಂತ ಬೇರೆ ಹೆಸರುಬೇಕಾ? ಕೆಲವು ಅಧಿಕಾರಿಗಳ ಜತೆಗೆ ಫೋನ್ನಲ್ಲಿ ಮಾತನಾಡಿದ್ದು, ತಾವು ಅಸಹಾಯಕರಾಗಿದ್ದಾಗಿ ಹೇಳಿದ್ದಾರೆ. ಇಡೀ ಜಿಲ್ಲಾಡಳಿತ ಸಚಿವರ ಕೈಗೊಂಬೆಯಾಗಿದೆ. ಜಿಲ್ಲಾಧಿಕಾರಿ, ಎಸ್ಪಿ, ಆರ್ಟಿಒ, ಗಣಿ ಇಲಾಖೆಯ ಅಧಿಕಾರಿಗಳ ಕೈವಾಡವಿದೆ’ ಎಂದು ತೇಲ್ಕೂರು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸುಭಾಷ ಗುತ್ತೇದಾರ, ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಅಶೋಕ ಬಗಲಿ, ಮಾಜಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಪ್ರಮುಖರಾದ ಸಂತೋಷ ಹಾದಿಮನಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.