ಬುಧವಾರ, ಡಿಸೆಂಬರ್ 8, 2021
28 °C
ಹಲವು ತಿಂಗಳ ಬಳಿಕ ಮಹಾನಗರ ಪಾಲಿಕೆಯಿಂದ ದಿಟ್ಟ ಕ್ರಮ

ಅಕ್ರಮ ಗೂಡಂಗಡಿಗಳು ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರದ ಜಿಲ್ಲಾ ನ್ಯಾಯಾಲಯ ಮುಂಭಾಗ ಹೊಂದಿಕೊಂಡಂತೆ ಹಾಗೂ ಕೇಂದ್ರ ಬಸ್ ನಿಲ್ದಾಣ ರಸ್ತೆ ಬದಿ ಅಲ್ಲಲ್ಲಿ ಅಕ್ರಮವಾಗಿ ಹಾಕಿದ್ದ 70ಕ್ಕೂ ಅಧಿಕ ಗೂಡಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ಮಂಗಳವಾರ ತೆರವುಗೊಳಿಸಿದರು.

ಹಲವು ತಿಂಗಳ ಬಳಿಕ ನಡೆದ ಅತಿ ದೊಡ್ಡ ತೆರವು ಕಾರ್ಯಾಚರಣೆ ಇದಾಗಿದೆ.

ಬೆಳಿಗ್ಗೆಯೇ ಪಾಲಿಕೆಯ ಸೂಚನೆ ಮೇರೆಗೆ ಸ್ಥಳಕ್ಕೆ ಬಂದ ಜೆಸಿಬಿಗಳು ಒಂದೊಂದಾಗಿ ಗೂಡಂಗಡಿಯ ಮುಂಭಾಗದ ಶಟರ್‌ಗಳನ್ನು ಕಿತ್ತು ಹಾಕಿದವು.

ಜಿಲ್ಲಾ ನ್ಯಾಯಾಲಯದ ಮುಂಭಾಗ ಮತ್ತು ಡಿ.ಸಿ. ಕಚೇರಿ ಹಿಂಭಾಗದಿಂದ ಹಾದು ಹೋಗುವ ರಸ್ತೆ ಬದಿ ಹಾಕಿಕೊಂಡಿದ ಝೆರಾಕ್ಸ್, ದಸ್ತು ಬರಹಗಾರರ ಕಚೇರಿ, ಹೋಟೆಲ್‍ಗಳನ್ನು ತೆರವುಗೊಳಿಸಲಾಯಿತು. ಈ ಅಂಗಡಿಗಳನ್ನು ಇಟ್ಟುಕೊಳ್ಳಲು ಪಾಲಿಕೆಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು ಪಾಲಿಕೆಯ ಎಂಜಿನಿಯರ್ ತಿಳಿಸಿದರು.

ಮಂಗಳವಾರ ಈ ರಸ್ತೆಯಲ್ಲೂ ಇರುವ ಕಬ್ಬಿನ ಹಾಲಿನ ಅಂಗಡಿ, ಎಳನೀರು ಅಂಗಡಿ, ಪೀಠೋಪಕರಣ ಅಂಗಡಿ, ಗೃಹ ಬಳಕೆ ವಸ್ತುಗಳ ಮಾರಾಟ ಮಾಡುವ ತಾತ್ಕಾಲಿಕ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಈ ವೇಳೆಯಲ್ಲಿ ಕೆಲವು ಅಂಗಡಿದಾರರು ಪಾಲಿಕೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.