ಶುಕ್ರವಾರ, ಫೆಬ್ರವರಿ 21, 2020
18 °C
ನಂದಿಬಸವೇಶ್ವರ ರಥೋತ್ಸವ ಸಂಭ್ರಮ

ಐನಾಪುರ: ಉಡಿ ತುಂಬಿಕೊಂಡು ತೇರೆಳೆದ ಮಹಿಳೆಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ತಾಲ್ಲೂಕಿನ ಐನಾಪುರ ಗ್ರಾಮದ ನಂದಿಬಸವೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ಮಹಿಳೆಯರು ಶ್ರದ್ಧಾ ಭಕ್ತಿಯಿಂದ ತೇರು ಎಳೆದು ಸಂಭ್ರಮಿಸಿದರು.

ಗ್ರಾಮದ ಬೆನಕೆಪಳ್ಳಿ ಮಾರ್ಗದ ರಸ್ತೆ ಬದಿಯ ಹೊಲದಲ್ಲಿ ನೆರೆದ ಸಹಸ್ರಾರು ಭಕ್ತರ ಮಧ್ಯೆ ಮಹಿಳೆಯರು ತೇರು ಎಳೆದರು. ಖ್ಯಾತ ಪ್ರವಚನಕಾರ ಮಲ್ಲಯ್ಯ ಶಾಸ್ತ್ರಿ ನೇತೃತ್ವದಲ್ಲಿ ಜ.26ರಿಂದ ಜಾತ್ರೆ ನಡೆಯುತ್ತಿದೆ.

ಶನಿವಾರ ಸಂಜೆ 4 ಗಂಟೆ ಸುಮಾರಿಗೆ ತೇರು ಮೈದಾನದಲ್ಲಿ ರಥದ ಎದುರಿಗೆ 1001 ಮಹಿಳೆಯರನ್ನು ಸಾಲಾಗಿ ಕೂರಿಸಿ ತಲೆಗೆ ಮಲ್ಲಿಗೆಯ ದಂಡೆ ಕಟ್ಟಿ ಉಡಿತುಂಬಲಾಯಿತು. ಗ್ರಾ.ಪಂ ಅಧ್ಯಕ್ಷೆ ಮಧು ರಮೇಶ ಪಡಶೆಟ್ಟಿ ಅವರು ರಥಕ್ಕೆ ಪೂಜೆ ಸಲ್ಲಿಸಿದರು. ನಂತರ ಉಡಿತುಂಬಿಕೊಂಡ ಸುಮಂಗಲೆಯರು ತಾವು ಕುಳಿತ ಸ್ಥಳದಲ್ಲೇ ಎದ್ದು ನಿಂತು ತೇರಿಗೆ ಕಟ್ಟಿದ್ದ ಮಿಣಿ ಹಗ್ಗ ಹಿಡಿದು ತೇರು ಎಳೆದರು.

ರಥೋತ್ಸವದಲ್ಲಿ ಶ್ರೀಶೈಲದ ಸಾರಂಗಧರೇಶ್ವರ ಜಗದ್ಗುರುಗಳು, ಶಾಸಕ ಡಾ.ಅವಿನಾಶ ಜಾಧವ, ತಾ.ಪಂ ಸದಸ್ಯ ಪ್ರೇಮಸಿಂಗ್‌ ಜಾಧವ, ರವಿ ಪಡಶೆಟ್ಟಿ, ದಾಸೋಹ ಅಣ್ಣೆಪ್ಪ ವರನಾಳ್‌ ಚಿಟ್ಟಗುಪ್ಪ, ಶಿವಕುಮಾರ ಚೌಡಶೆಟ್ಟಿ, ದೀಪಕ ಪಾಟೀಲ, ರಮೇಶ ಪಟಶೆಟ್ಟಿ, ರೇವಪ್ಪ ಉಪ್ಪಿನ್‌, ಅಶೋಕ ಪಡಶೆಟ್ಟಿ, ಅಪ್ಪಾರಾವ್‌ ಪಾಟೀಲ, ರವಿ ಪಡಶೆಟ್ಟಿ, ರವಿಕಾಂತ ಮಠಪತಿ, ಸಿದ್ದಪ್ಪ ಗಾರಂಪಳ್ಳಿ, ಡಾ. ವಿಠಲರಾವ್‌ ಪಾಟೀಲ, ಜನಾರ್ಧನ ವಾಗ್ಜಿ, ಜ್ಞಾನದೇವ ಪಾಟೀಲ, ಕಲ್ಲಪ್ಪ ಮೇತ್ರಿ, ರಮೇಶ ಕರಗಾರ, ನಾಗಪ್ಪ ಮೇತ್ರಿ, ಚಂದ್ರ ಗಾರಂಪಳ್ಳಿ, ಶ್ರೀಶೈಲ್‌ ಶಾಸ್ತ್ರಿ, ಚಂದ್ರಶೆಟ್ಟಿ ಗಾರಂಪಳ್ಳಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು