ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಅಕ್ರಮ ಸಾಗಾಟ ಪ್ರಕರಣ: ಜೇವರ್ಗಿ ಸಿಪಿಐ, ನೆಲೋಗಿ ಪಿಎಸ್‌ಐ ಅಮಾನತು

Published 17 ಜೂನ್ 2023, 15:53 IST
Last Updated 17 ಜೂನ್ 2023, 15:53 IST
ಅಕ್ಷರ ಗಾತ್ರ

ಕಲಬುರಗಿ: ಮರಳು ಅಕ್ರಮ ಸಾಗಾಟ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಜೇವರ್ಗಿ ಸರ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್ ಭೀಮನಗೌಡ ಬಿರಾದಾರ, ನೆಲೋಗಿ ಠಾಣೆ ಪಿಎಸ್‌ಐ ಗೌತಮ್ ಹಾಗೂ ಕಾನ್‌ಸ್ಟೆಬಲ್ ರಾಜಶೇಖರ ಅವರನ್ನು ಎಸ್ಪಿ ಇಶಾ ಪಂತ್ ಅವರು ಅಮಾನತುಗೊಳಿಸಿ ಶನಿವಾರ ಆದೇಶ ಹೊರಡಿಸಿದ್ದಾರೆ.

ಜೇವರ್ಗಿ ತಾಲ್ಲೂಕಿನ ಹುಲ್ಲೂರು ಗ್ರಾಮದ ಬಳಿ ಭೀಮಾ ನದಿಯ ದಡದಲ್ಲಿ ಶೇಖರಿಸಿ ಇಟ್ಟಿದ್ದ ಮರಳನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ತಡೆಯಲು ಮುಂದಾದ ಪೊಲೀಸ್ ಕಾನ್‌ಸ್ಟೆಬಲ್ ಮಯೂರ ಚವ್ಹಾಣ ಅವರ ಮೇಲೆ ಹಾಯಿಸಿ ಚಾಲಕ ಕೊಲೆ ಮಾಡಿದ್ದ. ಹೀಗಾಗಿ, ಅಕ್ರಮ ತಡೆಯಲು ಮುಂದಾಗದ ಕಾರಣಕ್ಕೆ ಅಮಾನತು ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

ಇದನ್ನೂ ಓದಿ... ಕಲಬುರಗಿ | ಮರಳು ಅಕ್ರಮ ಸಾಗಾಣಿಕೆ: ಪಿಎಸ್‌ಐ ಮೇಲೆ ಹಲ್ಲೆ, ಆರೋಪಿ ಕಾಲಿಗೆ ಗುಂಡೇಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT