ಚಿಂಚೋಳಿ: ‘ಭಾರತ ದೇಶದಲ್ಲಿ ಹಿಂದೂ ಸಮಾಜವನ್ನು ಹಾಳು ಮಾಡಲು ವ್ಯವಸ್ಥಿತ ರೀತಿಯಲ್ಲಿ ಜಿಹಾದ್ ಕೆಲಸ ಮಾಡುತ್ತಿದೆ. ಜಿಹಾದ್ ಎಂಬುದು ಒಂದೇ ಕ್ಷೇತ್ರಕ್ಕೆ ಸೀಮಿತವಾಗಿಲ್ಲ, ಇದು ಎಲ್ಲಾ ಕ್ಷೇತ್ರಕ್ಕೂ ವ್ಯಾಪಿಸಿ ಚಕ್ರವ್ಯೂಹದಂತೆ ಧರ್ಮವನ್ನು ಕಾಡುತ್ತಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತದ ಪ್ರಚಾರ ಪ್ರಮುಖ ಕೃಷ್ಣಾ ಜೋಷಿ ಹೇಳಿದರು.

ಇಲ್ಲಿನ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ಹಿಂದೂ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಲವ್ ಜಿಹಾದ್, ಜನಸಂಖ್ಯಾ ಜಿಹಾದ್, ಭೂಮಿ(ವಕ್ಫ್) ಜಿಹಾದ್, ಮಾದಕ ವಸ್ತುಗಳ ಡ್ರಗ್ ಜಿಹಾದ್, ಮೋಬೈಲ್ ಅಶ್ಲೀಲ ವಿಡಿಯೋಗಳ ಜಿಹಾದ್, ಹಣಕಾಸಿನ ಜಿಹಾದ್ ಮತ್ತು ಕಾನೂನು ಜಿಹಾದ್ ಹೀಗೆ ಜಿಹಾದ್ ಹಿಂದೂ ಧರ್ಮದ ವಿರುದ್ಧ ಚಕ್ರವ್ಯೂಹ ಸೃಷ್ಟಿಯಾಗಿದೆ’ ಎಂದರು.

‘ಹಿಂದೂ ಧರ್ಮವು ಆಂತರಿಕ ಮತ್ತು ಬಾಹ್ಯ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಿದೆ. ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿರುವಷ್ಟು ದಿನ ಮಾತ್ರ ಡಾ.ಅಂಬೇಡ್ಕರ್ ಅವರ ಸಂವಿಧಾನ ಜಾರಿಯಲ್ಲಿರುತ್ತದೆ. ಒಂದು ವೇಳೆ ಹಿಂದೂಗಳು ಅಲ್ಪಸಂಖ್ಯಾತರಾದರೆ ಹಿಂದೂ ಧರ್ಮಕ್ಕೂ ಮತ್ತು ಅಂಬೇಡ್ಕರ್ ಅವರ ಸಂವಿಧಾನಕ್ಕೂ ಅಪಾಯ ಎದುರಾಗಲಿದೆ' ಎಂದರು.

ಖಟ್ವಾಂಗೇಶ್ವರ ವೀರಕ್ತಮಠ ಮಠದ ಪ್ರಭುದೇವರು ಮಾತನಾಡಿ, ‘ಹಿಂದೂ ಧರ್ಮ ಜಗತ್ತಿನ ವಿಶಾಲವಾದ ಧರ್ಮವಾಗಿದೆ. ಜಗತ್ತಿನ ಎಲ್ಲಾ ಧರ್ಮಗಳಲ್ಲಿರುವ ಒಳ್ಳೆಯ ಅಂಶಗಳು ಹಿಂದೂ ಧರ್ಮದಲ್ಲಿವೆ. ನಾವೆಲ್ಲಾ ಒಂದೂ, ನಾವೆಲ್ಲಾ ಬಂಧು ಎಂದಾಗ ಮಾತ್ರ ಧರ್ಮ ಉಳಿಯಲು ಸಾಧ್ಯ’ ಎಂದರು.

ರೈತ ಮುಖಂಡ ಶಂಕರಗೌಡ ಅಲ್ಲಾಪುರ, ವಕೀಲ ಜಗನ್ನಾಥ ಅಗ್ನಿಹೋತ್ರಿ, ಜಿಲ್ಲಾ ಮಾದಿಗ ಮಹಾಸಭೆ ಅಧ್ಯಕ್ಷ ಗೋಪಾಲರಾವ್ ಕಟ್ಟಿಮನಿ, ಶಾಮರಾವ್ ಕೊರವಿ, ಬಸವರಾಜ (ಶಶಿಧರ) ಯಾಲಾಲ, ಸತ್ಯಾನಾರಾಯಣ ನಿರಾಳೆ, ಶಂಕರ ಭಗವಂತಿ, ಚಂದ್ರಶೇಖರ ಗುತ್ತೇದಾರ, ಮಧುಕರ ಕೊಳ್ಳೂರು, ಮಲ್ಲಿಕಾರ್ಜುನ ಪಂಚಾಳ, ಸುರೇಶ ಹುಡಗಿ, ಪ್ರದೀಪ, ಪುಂಡಲಿಕ, ಜಗದೀಶಸಿಂಗ್ ಠಾಕೂರ, ಸಂತೋಷ ಗಡಂತಿ, ಗೀತಾ ನಾಗಪ್ಪ ಮೈಲ್ವಾರ, ವಸಂತ ಇಟಗಿ ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಆಕರ್ಷಕ ಶೋಭಾ ಯಾತ್ರೆ ಜರುಗಿತು. ಭಾರತ ಮಾತೆ, ಭಾರತ ರತ್ನ ಡಾ.ಅಂಬೇಡ್ಕರ್, ಸರ್ವ ಶರಣರು ಮತ್ತು ಮಹಾಪುರುಷರ ಭಾವಚಿತ್ರಗಳ ಶೋಭಾ ಯಾತ್ರೆ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.