ಚಿತ್ತಾಪುರ: ಜಿಲ್ಲೆಯಾದ್ಯಂತ ಕಳೆ ಎರಡು ದಿನಗಳಿಂದ ಮಳೆಯಾಗುತ್ತಿದ್ದರಿಂದ ತಾಲ್ಲೂಕಿನ ದಂಡೋತಿ ಸಮೀಪ ಹರಿಯುತ್ತಿರುವ ಕಾಗಿಣಾ ನದಿಯಲ್ಲಿ ಪ್ರವಾಹ ಉಕ್ಕಿ ಬಂದು ಕಾಗಿಣಾ ನದಿಗೆ ಕಟ್ಟಿರುವ ಸೇತುವೆ ಮುಳುಗಡೆಯಾಗಿದೆ.

ಈ ಸೇತುವೆ ಮಾರ್ಗದ ಸಾರಿಗೆ ಸಂಚಾರ ಭಾನುವಾರ ಮಧ್ಯರಾತ್ರಿಯಿಂದ ಸಂಪೂರ್ಣ ಸ್ತಬ್ಧಗೊಂಡಿದೆ. ಕಳೆದ ಶುಕ್ರವಾರ ರಾತ್ರಿಯಿಂದ ನಿರಂತರ ಮಳೆ ಬರುತ್ತಿದ್ದರಿಂದ ಕಾಗಿಣಾ ನದಿಯಲ್ಲಿ ಪ್ರವಾಹದ ಮಟ್ಟ ಹೆಚ್ಚಾಗುತ್ತಿದೆ. ಶನಿವಾರ ಮಧ್ಯಾಹ್ನ ನದಿಯಲ್ಲಿ ಪ್ರವಾಹ ಹೆಚ್ಚಾಗಿ ಸಂಜೆಯೆ ಸೇತುವೆಯು ಮುಳುಗಡೆಯ ಹಂತಕ್ಕೆ ತಲುಪಿತ್ತು. ರಾತ್ರಿ ಮತ್ತೆ ಪ್ರವಾಹ ಹೆಚ್ಚಾಗಿದ್ದರಿಂದ ಸೇತುವೆ ಮುಳುಗಡೆಯಾಗಿ ಸಂಚಾರ ಬಂದ್ ಆಗಿದೆ.

ಚಿತ್ತಾಪುರ ಬಸ್ ನಿಲ್ದಾಣದಿಂದ ದಂಡೋತಿ ಕಾಗಿಣಾ ನದಿ ಸೇತುವೆಯ ಮಾರ್ಗವಾಗಿ ದಿನಾಲೂ ಜಿಲ್ಲಾ ಕೇಂದ್ರ ಕಲಬುರಗಿ, ತಾಲ್ಲೂಕುಗಳಾದ ಸೇಡಂ, ಕಾಳಗಿಗೆ ಸಂಚರಿಸುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಬಂದ್ ಮಾಡಲಾಗಿದೆ. ಕಲಬುರಗಿಗೆ ಶಹಾಬಾದ್ ಮಾರ್ಗವಾಗಿ ಬಸ್ ಸಂಚರಿಸುತ್ತಿವೆ. ದಂಡೋತಿ, ತೆಂಗಳಿ ಕ್ರಾಸ್ ಮಾರ್ಗವಾಗಿ ಸಂಚರಿಸುತ್ತಿದ್ದ ಸೇಡಂ ಬಸ್ ನೇರವಾಗಿ ಮಳಖೇಡ ಮಾರ್ಗವಾಗಿ ಸಂಚರಿಸುತ್ತಿವೆ.

ಕಾಗಿಣಾ ನದಿ ಸೇತುವೆ ಮಾರ್ಗದಿಂದ ಚಿತ್ತಾಪುರ ಪಟ್ಟಣವು ಅನೇಕ ಗ್ರಾಮಗಳಿಂದ ಸಂಪರ್ಕ ಕಡಿದುಕೊಂಡಿದೆ. ಜನರು ಬೇರೆ ಬೇರೆ ಗ್ರಾಮಗಳಿಂದ ಚಿತ್ತಾಪುರಕ್ಕೆ ಬರಲು ಮತ್ತು ಹೋಗಲು ತಾಲ್ಲೂಕಿನ ಭಾಗೋಡಿ ಗ್ರಾಮದ ಪಕ್ಕದ ಸೇತುವೆ ಮಾರ್ಗವಾಗಿ, ಮಳಖೇಡ ಮಾರ್ಗವಾಗಿ, ಶಹಾಬಾದ್ ಮಾರ್ಗವಾಗಿ ಸಂಚರಿಸುತ್ತಿದ್ದಾರೆ.

ಉದ್ದು ಬೆಳೆ ರಾಶಿಗೆ ಅಡಚಣೆ: ಕಟಾವಿಗೆ ಬಂದಿದ್ದ ಉದ್ದಿನ ಬೆಳೆಯ ರಾಶಿ ಭರದಿಂದ ನಡೆಯುತ್ತಿತ್ತು. ಶುಕ್ರವಾರ ರಾತ್ರಿಯಿಂದ ಮಳೆ ಶುರುವಾಗಿ ನಿರಂತರ ಬರುತ್ತಿದ್ದರಿಂದ ರೈತರು ಉದ್ದು ಬೆಳೆ ರಾಶಿ ಮಾಡಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಕೃಷಿ ಕೆಲಸಗಳು ಸಂಪೂರ್ಣ ಬಂದ್ ಆಗಿವೆ. ತಗ್ಗುಪ್ರದೇಶದ ಹೊಲಗಳಲ್ಲಿ ಮಳೆ ನೀರು ನಿಂತು ತೊಗರಿ ಬೆಳೆ ಹಾನಿಯಾಗುವ ಆತಂಕ ರೈತರನ್ನು ಕಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.