‘ನಗರದ ಸಂತ್ರಾಸವಾಡಿಯಲ್ಲಿರುವ ಕಾಳಿಕಾ ಮಂದಿರದಲ್ಲಿ ಅಂದು ಬೆಳಿಗ್ಗೆ 6 ಗಂಟೆಗೆ ವಿಶ್ವಕರ್ಮ ಸುಪ್ರಭಾತ, ವಿಶ್ವಕರ್ಮ ಧ್ವಜಾರೋಹಣ, ಗಣಪತಿ ಸಹಿತ ಪಂಚಬ್ರಹ್ಮ ವಿಶ್ವಕರ್ಮರ ಚಿತ್ರಕ್ಕೆ ಪೂಜೆ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ವಿಶ್ವಕರ್ಮ ಹಾಗೂ ಸಮಾಜದ ಇತರ ಸತ್ಪುರುಷ ಚಿತ್ರಗಳ ಮೆರವಣಿಗೆ ವಿವಿಧ ವಾದ್ಯವೃಂದದೊಂದಿಗೆ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರ ತನಕ ನಡೆಯಲಿದೆ. ಮಧ್ಯಾಹ್ನ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ವಿಶೇಷ ಉಪನ್ಯಾಸ ಜರುಲಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.