ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನಡೆದಾಡಿದ್ದ ಸ್ಥಳದಲ್ಲಿ ಸೋಮವಾರ ಅವರ ಜಯಂತ್ಯುತ್ಸವ ಸಡಗರ ಜೋರಾಗಿತ್ತು. ಕಲಬುರಗಿ ನಗರದ ಜಗತ್ ವೃತ್ತದಲ್ಲಿ ನೀಲಿ ಬಾವುಟಗಳು ರಾರಾಜಿಸಿದವು. ಜೈ ಭೀಮ್ ಘೋಷಣೆಯೂ ಮೊಳಗಿತು. ಅಂಬೇಡ್ಕರ್ ಅವರ 134ನೇ ಜಯಂತಿ ಅಂಗವಾಗಿ ಸಂಜೆ ನಡೆದ ಮೆರವಣಿಗೆ ವೇಳೆ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದ ಸ್ತಬ್ಧಚಿತ್ರಗಳು, ಅವುಗಳ ಮುಂದೆ ಡಿ.ಜೆ. ಅಬ್ಬರಕ್ಕೆ ಯುವಕರ ನೃತ್ಯ, ಎದೆಗಡಚಿಕ್ಕುವ ಸಂಗೀತ, ಯುವಕರ ಕುಣಿತ ನೋಡುಗರ ಮೈನವಿರೇಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.