ಆಳಂದ: ಅಮಾಯಕ ಮಹಿಳೆಯರನ್ನು ವಂಚಿಸಿ ಹಣ, ಒಡವೆಗಳನ್ನು ದೋಚುತ್ತಿದ್ದ ಮಹಿಳೆಯರಿಬ್ಬರನ್ನು ಪೊಲೀಸರು ಬುಧವಾರ ಬಂಧಿಸಿ, ಅವರಿಂದ ₹ 1.18 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ಜಪ್ತಿ ಮಾಡಿಕೊಂಡಿದ್ದಾರೆ.

ಕಲಬುರಗಿಯ ಸರೀತಾ ಕಾಶಿನಾಥ, ಕರುಣಾನಿಧಿ ಜೀನಕೇರಿ ಬಂಧಿತರು. ಇವರು ಬಸ್ ನಿಲ್ದಾಣ, ಸಂತೆ, ಬಸ್ ಸಂಚಾರದ ಜನದಟ್ಟಣೆ ಇರುವ ಸ್ಥಳದಲ್ಲಿ ಕಳವು ಮಾಡುತ್ತಿದ್ದರು. ಸೋಮವಾರ ಬಸ್ ನಿಲ್ದಾಣದಲ್ಲಿ ಕಳವು ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಈಚೆಗೆ ಮೋಘಾ ಬಿ ಗ್ರಾಮದ ಮೇಘಾ ನಡಗೇರಿ, ಪಡಸಾವಳಿ ಗ್ರಾಮದ ವೀರಭದ್ರ ಪಾರಶೆಟ್ಟಿ, ಚಿಂಚೋಳಿ ಗ್ರಾಮದ ಮಹಾದೇವಯ್ಯ ಸ್ವಾಮಿ ತಮ್ಮ ವಸ್ತುಗಳು ಕಳವು ಆಗಿರುವ ಬಗ್ಗೆ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.