ಜೂನ್ ತಿಂಗಳಲ್ಲಿ ಚಿಂಚೋಳಿ ತಾಲ್ಲೂಕಿನಲ್ಲಿ ಶೇ 10 ಮಳೆ ಕೊರತೆಯಿದ್ದರೆ, ಚಿಂಚೋಳಿ ಹೋಬಳಿಯಲ್ಲಿ ಶೇ 20 ಅಧಿಕ ಮಳೆಯಾಗಿತ್ತು. ಐನಾಪುರ ಹೋಬಳಿಯಲ್ಲಿ ಶೇ 8 ಅಧಿಕ ಮಳೆ ಸುರಿದರೆ, ಸುಲೇಪೇಟ ಹೋಬಳಿಯಲ್ಲಿ ಶೇ 52 ಮತ್ತು ಕೋಡ್ಲಿ ಹೋಬಳಿಯಲ್ಲಿ ಶೇ 13 ಮಳೆಯ ಕೊರತೆಯಿತ್ತು.
ಆದರೆ ಜುಲೈ ತಿಂಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ಜನರ ಸೂರುಗಳು ನೆಲಕ್ಕುರುಳಿವೆ. ಜುಲೈನಲ್ಲಿ 358 ಮಿ.ಮೀ, ಚಿಂಚೋಳಿ ಹೋಬಳಿಯಲ್ಲಿ 421 ಮಿ.ಮೀ, ಐನಾಪುರ 382 ಮಿ.ಮೀ, ಸುಲೇಪೇಟ 250 ಮಿ.ಮೀ, ಕೋಡ್ಲಿ 335 ಮಿ.ಮೀ ಮಳೆಯಾಗಿದೆ.
ಕುಂಚಾವರಂನಲ್ಲಿ 10 ದಿನದಲ್ಲಿ 809 ಮಿ.ಮೀ ಮಳೆ: ತಾಲ್ಲೂಕಿನ ಕುಂಚಾವರಂನಲ್ಲಿ ಜುಲೈ 18ರಿಂದ ಜುಲೈ 28ರವರೆಗೆ 809.6 ಮಿ.ಮೀ ಮಳೆಯಾಗಿದೆ ಎಂದು ಜಲ ಹವಾಮಾಪನ ಕೇಂದ್ರದ ಮೂಲಗಳು ತಿಳಿಸಿವೆ.