ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ದೆಹಲಿ, ತಿರುಪತಿಗೆ ಎರಡು ದಿನ ಮಾತ್ರ ವಿಮಾನ

Last Updated 23 ಜೂನ್ 2022, 3:03 IST
ಅಕ್ಷರ ಗಾತ್ರ

ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣದಿಂದ ದೆಹಲಿ ಮತ್ತು ತಿರುಪತಿ ಮಾರ್ಗದಲ್ಲಿ ಇನ್ನು ಮುಂದೆ ವಾರದಲ್ಲಿ ಎರಡು ದಿನ ಮಾತ್ರ ವಿಮಾನ ಹಾರಾಟ ನಡೆಯಲಿದೆ. ಈ ಹಿಂದೆ ನಾಲ್ಕು ದಿನ ಇತ್ತು.

ಆದರೆ, ಇಲ್ಲಿಂದ ಬೆಂಗಳೂರಿಗೆ ಹೊರಡುವ ವಿಮಾನಗಳ ಸೇವೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಸಮಯದಲ್ಲಿ ಮಾತ್ರ ಬದಲಾವಣೆಯಾಗಿದೆ.

ಸ್ಟಾರ್ ಏರ್‌ ವಿಮಾನವು ಕಲಬುರಗಿ–ತಿರುಪತಿ ಮಾರ್ಗವಾಗಿ ವಾರದಲ್ಲಿ ಇನ್ನು ಮುಂದೆ ಎರಡು ದಿನ ಮಾತ್ರ (ಸೋಮವಾರ ಮತ್ತು ಬುಧವಾರ) ಸಂಚರಿಸಲಿವೆ. ಎಸ್‌5–127 ವಿಮಾನ ಕಲಬುರಗಿಯಿಂದ ಭಾನುವಾರ ಬೆಳಿಗ್ಗೆ 10:20ಕ್ಕೆ ಹೊರಟು ಬೆಳಿಗ್ಗೆ 11:30ಕ್ಕೆ ತಿರುಪತಿ ತಲುಪಲಿದೆ. ಅದೇ ದಿನ ಎಸ್‌5–128 ವಿಮಾನ ತಿರುಪತಿಯಿಂದ ಬೆಳಿಗ್ಗೆ 11:55ಕ್ಕೆ ಹೊರಟು ಮಧ್ಯಾಹ್ನ 1ಕ್ಕೆ ಕಲಬುರಗಿ ತಲುಪಲಿದೆ. ಇದಕ್ಕೂ ಮುನ್ನ ಇದೇ ಮಾರ್ಗದಲ್ಲಿ ವಿಮಾನ ವಾರಕ್ಕೆ 4 ದಿನ ಹಾರಾಟ ನಡೆಸುತಿತ್ತು.

‘ಸ್ಟಾರ್ ಏರ್‌ ವಿಮಾನವು ಕಲಬುರಗಿ–ಹಿಂಡಾನ್ (ದೆಹಲಿ) ಮಾರ್ಗದಲ್ಲಿ ವಾರದಲ್ಲಿ ಎರಡು ದಿನ (ಮಂಗಳವಾರ ಮತ್ತು ಶನಿವಾರ) ಸಂಚರಿಸಲಿದೆ. ಮಂಗಳವಾರ ಎಸ್‌5–133 ವಿಮಾನ ಕಲಬುರಗಿಯಿಂದ ಬೆಳಿಗ್ಗೆ 10.20ಕ್ಕೆ ಹೊರಟು ಮಧ್ಯಾಹ್ನ 12.45ಕ್ಕೆ ಹಿಂಡಾನ್ ತಲುಪಲಿದೆ. ಅದೇ ದಿನ ಎಸ್‌–134 ವಿಮಾನ ಹಿಂಡಾನ್‌ನಿಂದ ಮಧ್ಯಾಹ್ನ 1.15ಕ್ಕೆ ಬಿಟ್ಟರೆ 3.40ಕ್ಕೆ ಕಲಬುರಗಿ ತಲುಪಲಿದೆ. ಇದಕ್ಕೂ ಮುನ್ನ ಈ ಮಾರ್ಗದಲ್ಲಿ ವಾರದಲ್ಲಿ ಮೂರು ದಿನ ಹಾರಾಟ ನಡೆಸುತಿತ್ತು’ ಎಂದು ಕಲಬುರಗಿ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕಲಬುರಗಿ– ಹಿಂಡಾನ್(ದೆಹಲಿ) ಮತ್ತು ಕಲಬುರಗಿ–ತಿರುಪತಿ ಮಾರ್ಗವಾಗಿ ಸಂಚರಿಸುವ ವಿಮಾನಗಳ ಆಸನ ಶೇ 85ರಷ್ಟು ಭರ್ತಿ ಆಗುತ್ತಿವೆ. ಶೇ 40ರಷ್ಟು ಆಸನ ಭರ್ತಿಯಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಶೇ 60ರಷ್ಟು ಆಸನಗಳ ಹಣ ಸಂದಾಯ ಆಗುತ್ತದೆ. ಇಷ್ಟುಂದು ಲಾಭದಲ್ಲಿ ಸಾಗುತ್ತಿದ್ದರೂ ಹಾರಾಟದ ದಿನಗಳನ್ನು ಕಡಿತಗೊಳಿಸಿದ್ದು ಯಾಕೆ‌’ ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ–ವಿರೋಧದ ಚರ್ಚೆ ಆಗುತ್ತಿದೆ.

ಇದಲ್ಲದೇ ಕಲಬುರಗಿ ಹಾಗೂ ಬೆಂಗಳೂರು ನಡುವೆ ಗುರುವಾರ, ಶುಕ್ರವಾರ ಮತ್ತು ಭಾನುವಾರ ಹಾರಾಟ ನಡೆಸುವ ವಿಮಾನಗಳ ಸಮಯ ಬದಲಾಗಿದೆ. ಸ್ಟಾರ್‌ ಏರ್‌ನ ಎಸ್‌5–117 ವಿಮಾನವು ಬೆಂಗಳೂರಿನಿಂದ ಬೆಳಿಗ್ಗೆ 10.10ಕ್ಕೆ ಹೊರಟು ಕಲಬುರಗಿಗೆ 11.15ಕ್ಕೆ ತಲುಪಲಿದೆ. ಎಸ್‌5–118 ವಿಮಾನವು ಕಲಬುರಗಿಯಿಂದ ಬೆಳಿಗ್ಗೆ 11.45ಕ್ಕೆ ಹೊರಟು ಬೆಂಗಳೂರಿಗೆ ಮಧ್ಯಾಹ್ನ 12.50ಕ್ಕೆ ತಲುಪಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT