ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ ಕಲಾಮಹೋತ್ಸವ ನಾಳೆಯಿಂದ

Published 15 ಫೆಬ್ರುವರಿ 2024, 16:16 IST
Last Updated 15 ಫೆಬ್ರುವರಿ 2024, 16:16 IST
ಅಕ್ಷರ ಗಾತ್ರ

ಕಲಬುರಗಿ: ದಿ ಐಡಿಯಲ್‌ ಫೈನ್‌ ಆರ್ಟ್‌ ಟ್ರಸ್ಟ್‌ನ ದಿ ಐಡಿಯಲ್‌ ಫೈನ್‌ ಆರ್ಟ್‌ ಇನ್‌ಸ್ಟಿಟ್ಯೂಟ್‌ ಹಾಗೂ ಎಂ.ಎಂ.ಕೆ. ಕಾಲೇಜ್‌ ಆಫ್‌ ವಿಜುವಲ್‌ ಆರ್ಟ್‌ನ ವಾರ್ಷಿಕ ಚಿತ್ರಕಲಾ ಪ್ರದರ್ಶನವಾದ 54ನೇ ಕಲಬುರಗಿ ಕಲಾಮಹೋತ್ಸವ ಫೆ.17ರಿಂದ ನಡೆಯಲಿದೆ.

ನಗರದ ಮಹಾನಗರ ಪಾಲಿಕೆ ಉದ್ಯಾನ ಬಳಿಯ ನೀಲಗಂಗಮ್ಮ ಅಂದಾನಿ ಆರ್ಟ್‌ ಗ್ಯಾಲರಿಯಲ್ಲಿ ಫೆ.17ರ ಸಂಜೆ 5.30ಕ್ಕೆ ಕಲಾಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಕಲಾಮಹೋತ್ಸವಕ್ಕೆ ಚಾಲನೆ ನೀಡುವರು. ಕಲಾವಿದ ಬಸವರಾಜ ಎಲ್‌.ಜಾನೆ ಅವರು ವಾರ್ಷಿಕ ಕಲಾ ಪ್ರದರ್ಶನ ಉದ್ಘಾಟಿಸುವರು. ಕಲಾವಿದ ವಿ.ಜಿ.ಅಂದಾನಿ ಅಧ್ಯಕ್ಷತೆ ವಹಿಸುವರು.

ಕಾರ್ಯಕ್ರಮದಲ್ಲಿ ಕಲಾವಿದ ನಾರಾಯಣ ಭೋಸಾವಳೆ, ಪತ್ರಕರ್ತ ಗೋಪಾಲ ಕುಲಕರ್ಣಿ, ಕರ್ನಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಮಲ್ಲ ಶಿವಭೊ ಹಾಗೂ ಸುಕಿ ಸಾಂಸ್ಕೃತಿಕ ಸಂಸ್ಥೆಯ ಕಾರ್ಯದರ್ಶಿ ಶರಣು ಪಟ್ಟಣಶೆಟ್ಟಿ ಅವರಿಗೆ ಸನ್ಮಾನ ನಡೆಯಲಿದೆ.

ಕಲಾಪ್ರದರ್ಶನವು ಫೆ.18ರಿಂದ ಫೆ.20ರ ತನಕ ನಿತ್ಯ ಬೆಳಿಗ್ಗೆ 11ರಿಂದ ಸಂಜೆ 5 ಗಂಟೆ ತನಕ ನಡೆಯಲಿದ್ದು, ಸಾರ್ವಜನಿಕರು ಭೇಟಿ ನೀಡಿ ವೀಕ್ಷಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT