ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವ್ಯಾಪ್ತಿಯ ದರ್ಜೆ-3 ಮೇಲ್ವಿಚಾರಕೇತರ ಹಾಗೂ ದರ್ಜೆ-4ರ ಸಿಬ್ಬಂದಿ ವರ್ಗಾವಣೆಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಗಮದ www.kkrtc.org ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಕೆಗೆ 2023ರ ಆ.31ರವರೆಗೆ ಅವಕಾಶವಿದೆ. ಅರ್ಜಿಗಳ ಪರಿಶೀಲನೆ, ವ್ಯತ್ಯಾಸಗಳು ಸರಿಪಡಿಸಲು ಸೆಪ್ಟೆಂಬರ್ 1ರಿಂದ ಸೆ.11 ರವರೆಗೆ ಅವಕಾಶ ನೀಡಲಾಗಿದೆ.

ವರ್ಗಾವಣೆಗೆ ಅರ್ಹ ಸಿಬ್ಬಂದಿಬ ಅರ್ಹತಾ ಪಟ್ಟಿ ಪ್ರಕಟಿಸಲು ಸೆ.12ರಿಂದ ಸೆ.14ರವರೆಗೆ ಅವಕಾಶ ಇದ್ದು, ಸೆ.15ರಿಂದ ಸೆ.19 ನಡುವೆ ಆಕ್ಷೇಪಗಳು ಸಲ್ಲಿಸಬಹುದು. ಅಂತರ ವಿಭಾಗ, ಆಯಾ ಇಲಾಖೆ ಮುಖ್ಯಸ್ಥರು, ವಿಭಾಗದೊಳಗಿನ ವರ್ಗಾವಣಾ ಅರ್ಜಿಗಳ ಜತೆಗೆ ದೃಢೀಕೃತ ಪಟ್ಟಿಯನ್ನು ವರ್ಗಾವಣಾ ಸಮಿತಿಗೆ ಸಿಬ್ಬಂದಿ ಶಾಖೆಯಿಂದ ಸಲ್ಲಿಸಲು ಸೆ.20ರಿಂದ ಸೆ.22ರವರೆಗೆ ಅವಕಾಶ ಇರುತ್ತದೆ.

ಸೆ.23ರಿಂದ ಸೆ.30ರವರೆಗೆ ಕೇಂದ್ರ ಕಚೇರಿಗೆ ಅನುಸರಣಾ ವರದಿಯ ಸಲ್ಲಿಸಬಹುದು. ಅಕ್ಟೋಬರ್ 3ರಿಂದ ಅ.15ರವರೆಗೆ ವರ್ಗಾವಣೆಯಾದ ಸಿಬ್ಬಂದಿ ಬಿಡುಗಡೆಯ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.