ಕಲಬುರಗಿ: ಕೇರಳದ ಮಲಪ್ಪುರಂ ಜಿಲ್ಲೆಯ ಪಡಿಂಜಟ್ಟುಮುರಿಯ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಎ.ಟಿ.ಅಬ್ದುಲ್ ಮಲಿಕ್ ಅವರು ಹಲವು ವರ್ಷಗಳಿಂದ ಕಡಲುಂಡಿ ನದಿಯನ್ನು ನಿತ್ಯ ಈಜಿಕೊಂಡು ಶಾಲೆಗೆ ತೆರಳಿ ಪಾಠ ಮಾಡುವುದು ಇತ್ತೀಚೆಗೆ ರಾಷ್ಟ್ರೀಯ ಸುದ್ದಿಯಾಗಿತ್ತು. ಇಂತಹ ಹಲವು ಶಿಕ್ಷಕರು ತಮ್ಮ ಬದ್ಧತೆ, ಕಲಿಕಾ ಶೈಲಿ, ಮಕ್ಕಳ ಬಗೆಗಿನ ಕಾಳಜಿಯಿಂದಾಗಿ ಹೆಸರಾಗಿದ್ದಾರೆ.

ಅತ್ಯಂತ ನೆಮ್ಮದಿ ನೀಡುವ ವೃತ್ತಿಗಳಲ್ಲಿ ಬೋಧಕ ವೃತ್ತಿ ಪ್ರಮುಖವಾದುದು. ಭಾರತದಲ್ಲಿ ಗುರು–ಶಿಷ್ಯರ ಸಂಬಂಧಕ್ಕೆ ಶತಮಾನಗಳ ಇತಿಹಾಸವೇ ಇದೆ. ದ್ರೋಣಾಚಾರ್ಯರನ್ನು ತನ್ನ ಮಾನಸ ಗುರುವನ್ನಾಗಿ ಮಾಡಿಕೊಂಡು ಅವರ ಮೂರ್ತಿ ಎದುರಿಗೆ ಶಸ್ತ್ರಾಭ್ಯಾಸ ಕಲಿತು ಕೊನೆಗೆ ಗುರುವಿನ ಅಪೇಕ್ಷೆಯ ಮೇರೆಗೆ ಹೆಬ್ಬೆರಳನ್ನೇ ನೀಡಿದ ಏಕಲವ್ಯನಂತಹ ಶಿಷ್ಯರೂ ಇದ್ದಾರೆ.

ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರು ಪ್ರತಿಯೊಂದಕ್ಕೂ ಸರ್ಕಾರಿ ಅನುದಾನವನ್ನು ನೆಚ್ಚಿಕೊಳ್ಳದೇ ತಮ್ಮ ಶಾಲೆಗಳಿಗೆ ಕುರ್ಚಿ, ಟೇಬಲ್, ಸ್ಮಾರ್ಟ್ ಕ್ಲಾಸ್, ಕೊನೆಗೆ ಕಟ್ಟಡವನ್ನೂ ದುರಸ್ತಿ ಮಾಡಿಸಿದ ಘಟನೆಗಳು ಹೇರಳವಾಗಿವೆ. ಬಹುತೇಕ ಶಿಕ್ಷಕರು ತಮ್ಮ ತಿಂಗಳ ವೇತನದ ಒಂದು ಭಾಗವನ್ನು ಮಕ್ಕಳ ಕಲ್ಯಾಣಕ್ಕಾಗಿ ಖರ್ಚು ಮಾಡುವುದನ್ನೂ ಕಂಡಿದ್ದೇವೆ. ಮಕ್ಕಳ ಸಂದೇಹವನ್ನು ನಿವಾರಿಸಲು ತಡರಾತ್ರಿಯಲ್ಲಿಯೂ ವಿದ್ಯಾರ್ಥಿಗಳಿಗಾಗಿ ತಮ್ಮ ಮನೆ ಬಾಗಿಲನ್ನು ತೆರೆದ ಉದಾಹರಣೆಗಳೂ ಇವೆ. ಶಾಲಾವಧಿ ಮುಗಿದ ಬಳಿಕ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿ, ಪರೀಕ್ಷೆ ಸಮೀಪಿಸುತ್ತಿದ್ದಂತೆಯೇ ಎಲ್ಲ ದಿನವೂ ಮಕ್ಕಳಿಗೆ ಸಂಭವನೀಯ ಪ್ರಶ್ನೋತ್ತರಗಳನ್ನು ಹೇಳಿಕೊಡುವ ಶಿಕ್ಷಕರ ಸಂಖ್ಯೆಯೇನೂ ಕಡಿಮೆ ಇಲ್ಲ.

ಪ್ರತಿ ವರ್ಷ ಕಡಿಮೆ ಫಲಿತಾಂಶ ದಾಖಲಿಸುವ ಕಲ್ಯಾಣ ಕರ್ನಾಟಕದಲ್ಲಿನ ಮಕ್ಕಳಿಗೆ ನಿರಂತರವಾಗಿ ಆನ್ಲೈನ್ ಮೂಲಕ ಕಬ್ಬಿಣದ ಕಡಲೆ ಎನಿಸಿದ ಗಣಿತ, ಇಂಗ್ಲಿಷ್ ಸೇರಿದಂತೆ ಇತರೆ ವಿಷಯಗಳನ್ನು ಹೇಳಿಕೊಡಲು ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್ ಜಿಲ್ಲೆಗಳ ಶಿಕ್ಷಕರನ್ನೊಳಗೊಂಡ ಶಿಕ್ಷಕರ ತಂಡವು ಪ್ರತಿನಿತ್ಯವೂ ಟೆಲಿಗ್ರಾಂ, ವಾಟ್ಸ್ಆ್ಯಪ್ ಚಾನೆಲ್ ಮೂಲಕ ಲಕ್ಷಾಂತರ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಾ ಬಂದಿದೆ. ಇದರಿಂದಾಗಿ ಕಲಿಕೆಯಲ್ಲಿ ಹಿಂದುಳಿದಿದ್ದವರು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದರು. ಈ ಪ್ರಯೋಗ ಕೋವಿಡ್ ಸಂದರ್ಭದಲ್ಲಿ ಜನರ ಸಂಪರ್ಕವೇ ನಿಂತು ಹೋಗಿದ್ದಾಗ ವಿದ್ಯಾರ್ಥಿಗಳಿಗೆ ವರದಾನವಾಗಿತ್ತು.

ಕೋವಿಡ್ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಶಿಕ್ಷಕರು ಪಟ್ಟ ಪಾಡು ಅಷ್ಟಿಷ್ಟಲ್ಲ. ಕೋವಿಡ್ ಆರಂಭದ ಹಂತದಲ್ಲಿ ಸರ್ಕಾರ ವಿದ್ಯಾಗಮವನ್ನು ಜಾರಿಗೆ ತಂದಿತ್ತು. ಮಕ್ಕಳು ಇರುವ ಓಣಿಗಳಿಗೇ ತೆರಳಿ ಪಾಠ ಮಾಡಬೇಕಾದ ಅನಿವಾರ್ಯತೆ ಶಿಕ್ಷಕರದ್ದಾಗಿತ್ತು. ಬಸ್, ಆಟೊಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದ ಸಂದರ್ಭದಲ್ಲಿ, ಬೈಕ್ನಲ್ಲಿ ಹೊರಟರೂ ಅಡ್ಡಗಟ್ಟಿ ವಾಪಸ್ ಕಳುಹಿಸುವ ಪೊಲೀಸರ ಮನವೊಲಿಸಿ ಶಾಲೆಗೆ ಹೋಗುವುದು ದೊಡ್ಡ ಸಾಹಸವೇ ಆಗಿತ್ತು. ಅದನ್ನೂ ಮೀರಿ ಶಿಕ್ಷಕರೆಂಬ ಆಪದ್ಬಾಂಧವರು ಗ್ರಾಮೀಣ ಬಡಮಕ್ಕಳ ಮಸ್ತಕದಲ್ಲಿ ಒಂದಷ್ಟು ಅಕ್ಷರಗಳನ್ನು ತುಂಬಿದ್ದರು. ಎಲ್ಲರೂ ಲಾಕ್ಡೌನ್ ಕಾರಣಕ್ಕೆ ಮನೆಯಲ್ಲಿದ್ದರೆ ಸರ್ಕಾರಿ ಶಾಲಾ ಶಿಕ್ಷಕ, ಶಿಕ್ಷಕಿಯರು ನಿತ್ಯ ಶಾಲೆಗೆ ತೆರಳಿ ವಿದ್ಯಾರ್ಥಿಗಳು ತರುತ್ತಿದ್ದ ಮನೆ ಪಾಠದ ಪುಸ್ತಕಗಳನ್ನು ನೋಡಬೇಕಿತ್ತು. ಇದನ್ನೆಲ್ಲ ಸಮರ್ಥವಾಗಿ ನಿಭಾಯಿಸಿದ ಶಿಕ್ಷಕ ಸಮುದಾಯ ಮಕ್ಕಳ ಜೀವನಕ್ಕೆ ಅರ್ಥಪೂರ್ಣ ಮುನ್ನುಡಿ ಬರೆದಿತ್ತು. ನಿಜ ಅರ್ಥದಲ್ಲಿ ಹರ ಮುನಿದರೆ ಗುರು ಕಾಯುವನು ಎಂಬ ಮಾತು ಶಿಕ್ಷಕ ಸಮುದಾಯಕ್ಕೆ ಒಪ್ಪುತ್ತದೆ.

ಮಕ್ಕಳ ಹೆಸರಲ್ಲಿ ಠೇವಣಿ ವಿಮಾನ ಪ್ರಯಾಣ ಶಿಕ್ಷಕ ವೃತ್ತಿಯನ್ನು ಬಹುವಾಗಿ ಪ್ರೀತಿಸುವ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೂ ಕೈಲಾದ ಸಹಾಯ ಮಾಡುವಷ್ಟು ದೊಡ್ಡಗುಣ ಹೊಂದಿದ್ದಾರೆ. ಶಾಲೆಯಲ್ಲಿ ದಾಖಲಾತಿ ಕುಸಿತ ಕಾಣುವುದನ್ನು ಗಮನಿಸಿದ ಶಿಕ್ಷಕರು ಮಕ್ಕಳನ್ನು ಶಾಲೆಯತ್ತ ಸೆಳೆಯಲು ಅವರ ಹೆಸರಿನಲ್ಲಿಯೇ ಠೇವಣಿ ಇಡುವುದು ತಮ್ಮ ಸ್ವಂತ ಖರ್ಚಿನಲ್ಲಿ ಮಕ್ಕಳ ವಿಮಾನ ಪ್ರಯಾಣದ ಕನಸನ್ನು ನನಸು ಮಾಡಿದವರೂ ಇದ್ದಾರೆ. ಸತತ ಪ್ರಯತ್ನದಿಂದಾಗಿ ಮಕ್ಕಳಿಗಾಗಿ ದಾನಿಗಳಿಂದ ಸಂಗ್ರಹಿಸಿ ತಮ್ಮ ಕೈಲಾದ ನೆರವನ್ನೂ ನೀಡಿ ಶಾಲಾ ಕೊಠಡಿಗಳನ್ನು ನಿರ್ಮಿಸಿದ ಉದಾಹರಣೆಗಳೂ ನಮ್ಮ ಮುಂದಿವೆ.

ರಾಧಾಕೃಷ್ಣನ್ ಜನ್ಮದಿನವೇ ಶಿಕ್ಷಕರ ದಿನ ಭಾರತದ ರಾಷ್ಟ್ರಪತಿಗಳಾಗಿದ್ದ ಶಿಕ್ಷಣ ತಜ್ಞ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನೇ (ಸೆಪ್ಟೆಂಬರ್ 5) ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಶಿಕ್ಷಕರಾಗಿದ್ದ ರಾಧಾಕೃಷ್ಣನ್ ಅವರ ಜನ್ಮದಿನವನ್ನು 1962ರಲ್ಲಿ ಆಚರಿಸಲು ಅವರ ವಿದ್ಯಾರ್ಥಿಗಳು ಬಯಸಿದಾಗ ತಮ್ಮ ಜನ್ಮದಿನದ ಬದಲು ಶಿಕ್ಷಕರ ದಿನವನ್ನಾಗಿ ಆಚರಿಸುವಂತೆ ಕರೆ ನೀಡಿದರು. ಅಂದಿನಿಂದಲೂ ರಾಧಾಕೃಷ್ಣನ್ ಜನ್ಮದಿನವನ್ನು ದೇಶದಾದ್ಯಂತ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಂದು ರಾಷ್ಟ್ರ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸಾಧಕ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.