ಕಲಬುರಗಿ: ‘ಜಿಲ್ಲೆಯಲ್ಲಿ ರಂಗಭೂಮಿ ಪರಿಸರ ಸಮೃದ್ಧಗೊಳಿಸುವ ಗುರಿಯೊಂದಿಗೆ ಕಲಬುರಗಿಯಲ್ಲಿ ಇದೇ ಮೊದಲ ಬಾರಿಗೆ ಫೆಬ್ರುವರಿ 21ರಿಂದ 28ರವರೆಗೆ ‘ಕಲಬುರಗಿ ನಾಟಕೋತ್ಸವ–2026’ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

‘ಬೆಂಗಳೂರಿನ ರಂಗಶಂಕರ ಸಹಯೋಗದಲ್ಲಿ ಈ ನಾಟಕೋತ್ಸವ ನಡೆಯಲಿದೆ. ಮುಂದಿನ ಐದು ವರ್ಷಗಳ ಕಾಲ ನಿರಂತರ ನಾಟಕೋತ್ಸವ ಆಯೋಜಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಎರಡು ಪರ್ಯಾಯ ವೇದಿಕೆಗಳಲ್ಲಿ ನಾಟಕಗಳು ಪ್ರದರ್ಶನಗೊಳ್ಳಲಿವೆ. ಮುಖ್ಯ ವೇದಿಕೆಯಾದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ನಿತ್ಯ ಸಂಜೆ 7ರಿಂದ ನಾಟಕಗಳು ಪ್ರದರ್ಶನಗೊಳ್ಳಲಿವೆ’ ಎಂದರು.

ಫೆ.21ರಂದು ಬಿ.ಜಯಶ್ರೀ ನಿರ್ದೇಶನದ ‘ಕರಿಮಾಯಿ’, ಫೆ.22ರಂದು ಅಜಿತೇಶ್ ಗುಪ್ತಾ ನಿರ್ದೇಶನದ ‘ಜೋ ಡೂಬಾ ಸೋ ಫಾರ್’, ಫೆ.23ರಂದು ಬಿ.ವಿ.ರಾಜಾರಾಂ ನಿರ್ದೇಶನದ ‘ಮುಖ್ಯಮಂತ್ರಿ’, ಫೆ.24ರಂದು ಸುಮಿತ್ ವ್ಯಾಸ್ ನಿರ್ದೇಶನದ ‘ಪುರಾನಾ ಚಾವಲ್’, ಫೆ.25ರಂದು ಗಣೇಶ ಮಂದಾರ್ತಿ ಅವರ ‘ಕಾಮರೂಪಿಗಳು’, ಫೆ.26ರಂದು ಅನುರೂಪ ರಾಯ್ ನಿರ್ದೇಶನದ ‘ಎಬೌಟ್ ರಾಮ್’, ಫೆ.27ರಂದು ಹುಲುಗಪ್ಪ ಕಟ್ಟಿಮನಿ ನಿರ್ದೇಶನದ ‘ಕಾಲಚಕ್ರ’ ಹಾಗೂ ಫೆ.28ರಂದು ಲಕ್ಷ್ಮಣ ಕೆ.ಪಿ. ನಿರ್ದೇಶನದ ‘ಬಾಬ್ ಮಾರ್ಲೆ ಫ್ರಮ್ ಕೋಡಿಹಳ್ಳಿ’ ನಾಟಕಗಳು ಪ್ರದರ್ಶನಗೊಳ್ಳಲಿವೆ’ ಎಂದು ವಿವರಿಸಿದರು.

‘ಕಲಬುರಗಿಯನ್ನು ಕರ್ನಾಟಕದ ಒಂದು ಕ್ರಿಯಾಶೀಲ ಸಾಂಸ್ಕೃತಿಕ ಹೆಗ್ಗುರುತಾಗಿ ರೂಪಿಸುವ ಆಶಯವನ್ನು ಈ ನಾಟಕೋತ್ಸವ ಹೊಂದಿದೆ. ಅತ್ಯಂತ ಜನಪ್ರಿಯ, ವಿವಿಧ ಶೈಲಿಯ ಪ್ರದರ್ಶನಗಳನ್ನು ಈ ನಾಟಕೋತ್ಸವಕ್ಕಾಗಿ ಆಯ್ಕೆ ಮಾಡಲಾಗಿದೆ. ಪ್ರಾದೇಶಿಕ ಕಲಾ ಪ್ರಕಾರಗಳನ್ನು ಮತ್ತು ಕಲಾವಿದರನ್ನು ಗುರುತಿಸಿ, ಅವರಿಗೆ ಬೆಂಬಲ ನೀಡುವ ಮೂಲಕ ಸ್ಥಳೀಯ ರಂಗಭೂಮಿ ವ್ಯವಸ್ಥೆ ಬಲಪಡಿಸುವುದು ಮತ್ತು ಸಮೃದ್ಧಗೊಳಿಸುವುದು ಈ ರಂಗೋತ್ಸವ ಉದ್ದೇಶ.

‘ಇದೊಂದು ರಾಷ್ಟ್ರೀಯಮಟ್ಟದ ನಾಟಕೋತ್ಸವ. ಬುದ್ಧ, ಬಸವ, ಶರಣರು, ಖಾಜಾ ಬಂದಾನವಾಜರಂಥ ಸೂಫಿಸಂತರು ಪರಂಪರೆಯನ್ನು ಅಳವಡಿಕೊಂಡು ಈ ನಾಟಕೋತ್ಸವ ನಡೆಸುತ್ತಿದ್ದೇವೆ. ಬೇರೆಯಲ್ಲಿ ಒಂದು ದಿನದ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ. ಆದರೆ, ಕಲಬುರಗಿಯಲ್ಲಿ ಕಲೆ, ಕ್ರೀಡೆ, ಸಂಸ್ಕೃತಿ, ಸಾಹಿತ್ಯ ಸೇರಿದಂತೆ ರಂಗಕ್ಷೇತ್ರಗಳಲ್ಲಿ ಉತ್ಸವಗಳ ಆಯೋಜನೆಗೆ ನಿರ್ಧರಿಸಿದ್ದೇವೆ. 12 ಬಗೆಯ ಕಾರ್ಯಕ್ರಮಗಳ ಆಯೋಜನೆಗೆ ಯೋಜನೆ ರೂಪಿಸಿದ್ದೇವೆ’ ಎಂದರು.

ರಂಗಾಯಣದ ರಂಗಮಂದಿರದಲ್ಲಿ ಫೆಬ್ರುವರಿ 22ರಿಂದ 27ರವರೆಗೆ ಮಕ್ಕಳಿಗಾಗಿಯೇ ವಿಶೇಷ ನಾಟಕಗಳ ಪ್ರದರ್ಶನ ಆಯೋಜಿಸಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಫೆ.22ರಿಂದ 27ರವರೆಗೆ ರಂಗಭೂಮಿ ಕುರಿತಂತೆ ಹೆಸರಾಂತ ರಂಗಕರ್ಮಿಗಳೊಂದಿಗೆ ಪ್ರತಿದಿನ ವಿವಿಧ ವಿಷಯಗಳ ಕುರಿತು ಸಂವಾದಗಳನ್ನು ಸಹ ಹಮ್ಮಿಕೊಳ್ಳಲಾಗಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಹೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕುಡಾ ಅಧ್ಯಕ್ಷ ಮಜಹರ್ ಆಲಂಖಾನ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ಸಿಂಗ್ ಮೀನಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಮಕ್ಕಳ ನಾಟಕಗಳ ವಿವರ ಕಲಬುರಗಿ ರಂಗಾಯಣದ ರಂಗಮಂದಿರದಲ್ಲಿ ಫೆ.22 ಮತ್ತು ಫೆ.23ರಂದು ರಂಗ ಶಂಕರದ ‘ಸರ್ಕಲ್ ಆಫ್ ಲೈಫ್’ ನಾಟಕ ಫೆ.24 ಮತ್ತು ಫೆ. 25ರಂದು ಮುಂಬೈನ ರೆಡ್ ಎಂಟರ್ಟೈನ್ಮೆಂಟ್ನ ‘ಜಾಬ್ ಲೆಸ್ ಜಾಬ್’ ಫೆ.26 ಮತ್ತು ಫೆ.27ರಂದು ರಂಗ ಶಂಕರದ ‘ಚಿಪ್ಪಿ ದಿ ಚಿಪ್ಕಲಿ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಚಿವ ಪ್ರಿಯಾಂಕ್ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.