ಕಲಬುರಗಿ: ರಾಜ್ಯದಲ್ಲೇ ನೆಲೆಸಿದ್ದರೂ ತೆರಿಗೆ ಉಳಿಸಲು ಬೇರೆ ರಾಜ್ಯಗಳಲ್ಲಿ ನೋಂದಣಿ ಮಾಡಿದ ವಾಹನಗಳ ಮಾಲೀಕರಿಗೆ ಸಾರಿಗೆ ಇಲಾಖೆ ‘ದಂಡ’ದ ಬಿಸಿ ಮುಟ್ಟಿಸಿದೆ.

ಕಲಬುರಗಿ ವಿಭಾಗದ ಜಿಲ್ಲೆಗಳಲ್ಲಿ ಸೆಪ್ಟೆಂಬರ್ ಹಾಗೂ ಅಕ್ಟೋಬರ್ನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿರುವ ಸಾರಿಗೆ ಇಲಾಖೆ ಅಧಿಕಾರಿಗಳು, ಪುದುಚೇರಿ ನೋಂದಣಿ ಹೊಂದಿದ್ದ ಒಟ್ಟು 205 ವಾಹನಗಳನ್ನು ವಶಕ್ಕೆ ಪಡೆದು ತೆರಿಗೆ ಹಾಗೂ ದಂಡ ಸೇರಿದಂತೆ ₹1.53 ಕೋಟಿ ವಸೂಲಿ ಮಾಡಿದ್ದಾರೆ. ತೆರಿಗೆ ವಂಚಿಸಿದ ವಾಹನಗಳಲ್ಲಿ ಐಷಾರಾಮಿ ಕಾರುಗಳ ಜೊತೆಗೆ ಮಧ್ಯಮ ವರ್ಗದ ಕಾರುಗಳೂ ಸೇರಿವೆ.

ಎರಡು ತಿಂಗಳಲ್ಲಿ ಸಾರಿಗೆ ಅಧಿಕಾರಿಗಳು ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 2,573 ವಾಹನಗಳನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಅದರಲ್ಲಿ ಪುದುಚೇರಿ ನೋಂದಣಿ ಹೊಂದಿದ 205 ವಾಹನ ಹಾಗೂ ಇತರೆ 673 ವಾಹನ ಸೇರಿದಂತೆ ಒಟ್ಟು 878 ವಾಹನಗಳ ವಿರುದ್ಧ ಅಧಿಕಾರಿಗಳು ಕ್ರಮಗೊಂಡಿದ್ದಾರೆ.

103 ಪುದುಚೇರಿ ನೋಂದಣಿಯ ವಾಹನ ಹಾಗೂ ಇತರೆ 43 ವಾಹನಗಳು ಸೇರಿದಂತೆ 146 ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದರು. ಅವುಗಳಿಂದ ತೆರಿಗೆ ರೂಪದಲ್ಲಿ ₹1.59 ಕೋಟಿ ರಾಜಸ್ವ ಸಂಗ್ರಹಿಸಿದ್ದಾರೆ. ಅಲ್ಲದೇ ದಂಡದ ರೂಪದಲ್ಲಿ ₹13.95 ಲಕ್ಷ ವಸೂಲಿ ಮಾಡಿದ್ದಾರೆ.

ಬೀದರ್ನಲ್ಲೇ ಹೆಚ್ಚು:

ಕಲ್ಯಾಣ ಕರ್ನಾಟಕ ಭಾಗದ ಬೀದರ್ ಜಿಲ್ಲೆಯಲ್ಲೇ (ಬೀದರ್, ಭಾಲ್ಕಿ, ಬಸವಕಲ್ಯಾಣ ಸೇರಿ) ಅತಿ ಹೆಚ್ಚು(130) ಪುದುಚೇರಿ ನೋಂದಣಿ ಹೊಂದಿದ ವಾಹನಗಳು ಕಾರ್ಯಾಚರಣೆಯಲ್ಲಿ ಪತ್ತೆಯಾಗಿವೆ. ಕಲಬುರಗಿ ಜಿಲ್ಲೆಯ 69 ಪುದುಚೇರಿ ನೋಂದಣಿ ವಾಹನಗಳು ಪತ್ತೆಯಾಗಿದ್ದು 2ನೇ ಸ್ಥಾನದಲ್ಲಿದೆ.

‘ವಾಹನ ಎಲ್ಲಿ ಸಂಚರಿಸುತ್ತದೆತೀ ಅದೇ ಭಾಗದಲ್ಲಿ ವಾಹನದ ನೋಂದಣಿ ಆಗಿರಬೇಕು ಎಂಬುದು ನಿಯಮ. ತೆರಿಗೆ ಉಳಿಸಲು ಕೆಲವರು ಪುದುಚೇರಿ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಗೋವಾದಂಥ ರಾಜ್ಯಗಳಲ್ಲಿ ತಮ್ಮ ವಾಹನಗಳ ನೋಂದಣಿ ಮಾಡಿಸುತ್ತಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಬರಬೇಕಿದ್ದ ರಾಜಸ್ವ, ನೆರೆಯ ರಾಜ್ಯಗಳ ಪಾಲಾಗುತ್ತಿದೆ’ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

‘ಅಂದಾಜು ರಾಜ್ಯದಲ್ಲಿ ₹10 ಲಕ್ಷ ಬೆಲೆಯ ಹೊಸ ಕಾರಿಗೆ ತೆರಿಗೆ ಹಾಗೂ ಸೆಸ್ ಸೇರಿದಂತೆ ಒಟ್ಟು ₹1.87 ಲಕ್ಷ ಕಟ್ಟಬೇಕಾಗುತ್ತದೆ. ಅದೇ ಪುದುಚೇರಿಯಲ್ಲಾದರೆ ₹10 ಸಾವಿರದೊಳಗೆ ಮುಗಿಯುತ್ತದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಪುದುಚೇರಿಯಲ್ಲಿ ವಾಹನಗಳನ್ನು ನೋಂದಾಯಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಮೊದಲೆಲ್ಲ ಐಷಾರಾಮಿ ಕಾರುಗಳಷ್ಟೇ ಪುದುಚೇರಿಯಲ್ಲಿ ನೋಂದಣಿ ಮಾಡಿಸಿದ್ದು ಕಾಣಸಿಗುತ್ತಿತ್ತು. ಇದೀಗ ₹10 ಲಕ್ಷಕ್ಕೂ ಹೆಚ್ಚಿನ ವಾಹನಗಳ ಮಾಲೀಕರು ದುಡ್ಡು ಉಳಿಸಲು ಹೋಗಿ ಪುದುಚೇರಿಯಲ್ಲಿ ನೋಂದಣಿ ಮಾಡುತ್ತಿದ್ದಾರೆ. ಹಲವರು ನಕಲಿ ಬಾಡಿಗೆ ಒಪ್ಪಂದ ದಾಖಲೆ ನೀಡಿ ಪುದುಚೇರಿಯಲ್ಲಿ ನೋಂದಣಿ ಮಾಡಿಸುತ್ತಿರುವುದು ಕಾರ್ಯಾಚರಣೆಯಲ್ಲಿ ಪತ್ತೆಯಾಗಿದೆ’ ಎಂದು ಅವರು ಹೇಳುತ್ತಾರೆ.

ತೆರಿಗೆ ವಂಚಿಸಲು ನೆರೆಯ ರಾಜ್ಯಗಳ ನೋಂದಣಿ ಹೊಂದಿರುವ ವಾಹನಗಳ ವಿರುದ್ಧದ ವಿಶೇಷ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಲಿದೆ
ಸಿದ್ಧಪ್ಪ ಕಲ್ಲೇರ ಕಲಬುರಗಿ ವಿಭಾಗದ ಜಂಟಿ ಆಯುಕ್ತ ಸಾರಿಗೆ ಇಲಾಖೆ

ಬೇರೆ ರಾಜ್ಯಗಳ ನೋಂದಣಿ ಹೊಂದಿರುವ ವಾಹನಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ತೆರಿಗೆ ಪಾವತಿಸಲು ಮುಂದೆ ಬಂದರೆ ಅವರಿಗೆ ರಿಯಾಯಿತಿ ಸಿಗಲಿದೆ
ಆನಂದ ಪಾರ್ಥನಳ್ಳಿ ಉಪ ಸಾರಿಗೆ ಆಯುಕ್ತ ಕಲಬುರಗಿ

ಇಕ್ಕಟ್ಟಿನಲ್ಲಿ ವಾಹನಗಳ ಮಾಲೀಕರು

ತೆರಿಗೆ ಉಳಿಸಲು ಪುದುಚೇರಿಯ ನಕಲಿ ವಿಳಾಸ ಕೊಟ್ಟವರು ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ ಸಿಕ್ಕಿ ಬಿದ್ದ ವಾಹನಗಳ ಮಾಲೀಕರು ರಾಜ್ಯ ತೆರಿಗೆ ಹಾಗೂ ದಂಡ ಪಾವತಿಸಲು ಪರದಾಡುತ್ತಿದ್ದಾರೆ. ‘ಇನ್ನೊವಾದಂಥ ವಾಹನಗಳು ತೆರಿಗೆ ದಂಡ ಸೇರಿದಂತೆ ₹4 ಲಕ್ಷ ಮೀರುತ್ತದೆ. ಸಾರಿಗೆ ಅಧಿಕಾರಿಗಳು ವಶಕ್ಕೆ ಪಡೆದ ವಾಹನಗಳಿಗೆ ದೊಡ್ಡ ಮೊತ್ತ ಪಾವತಿಸಿ ಅವುಗಳನ್ನು ಬಿಡಿಸಿಕೊಳ್ಳಲು ಮಾಲೀಕರು ಪರದಾಡುತ್ತಿದ್ದಾರೆ. ತೆರಿಗೆ ಪಾವತಿಯಾಗದ ಕಾರಣಕ್ಕೆ 15 ವಾಹನಗಳು ಈಗಲೂ ಕಲಬುರಗಿ ಆರ್ಟಿಒ ಕಚೇರಿ ಆವರಣದಲ್ಲೇ ಉಳಿದಿವೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.