ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುವಿವಿ ಹಂಗಾಮಿ ಕುಲಪತಿಯಾಗಿ ಸಹಾಯಕ ಪ್ರಾಧ್ಯಾಪಕ!

ಕುಲಪತಿ ನೇಮಕಕ್ಕೆ ಇನ್ನೂ ರಚನೆಯಾಗದ ಶೋಧನಾ ಸಮಿತಿ
Last Updated 31 ಡಿಸೆಂಬರ್ 2019, 15:30 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಯಾಗಿ ಕಾನೂನು ನಿಕಾಯದ ಡೀನ್‌ ಆಗಿರುವ ಸಹಾಯಕ ಪ್ರಾಧ್ಯಾಪಕ ಡಾ.ದೇವಿದಾಸ ಮಾಲೆ ಮಂಗಳವಾರ ಅಧಿಕಾರ ವಹಿಸಿಕೊಂಡರು.

ಡಾ.ಎಸ್‌.ಆರ್‌.ನಿರಂಜನ ಅವರ ಅವಧಿ ಮುಗಿದ ಬಳಿಕ ಪೂರ್ಣಾವಧಿ ಕುಲಪತಿ ನೇಮಕವಾಗಿಲ್ಲ. ಹೀಗಾಗಿ, ಪ್ರೊ.ಎಸ್‌.ಪಿ.ಮೇಲಕೇರಿ, ಪ್ರೊ.ಪರಿಮಳಾ ಅಂಬೇಕರ್‌, ಪ್ರೊ.ರಾಜನಾಳ್ಕರ ಲಕ್ಷ್ಮಣ ಅವರು ಹಂಗಾಮಿ ಕುಲಪತಿಯಾಗಿ ಈಗಾಗಲೇ ಕಾರ್ಯನಿರ್ವಹಿಸಿದ್ದು, ಮಾಲೆ ನಾಲ್ಕನೇ ಹಂಗಾಮಿ ಕುಲಪತಿ.

‘ಡೀನ್‌ ಆಗಿದ್ದಾರೆ ಎಂಬ ಕಾರಣಕ್ಕೆ ಸಹಾಯಕ ಪ್ರಾಧ್ಯಾಪಕರಿಗೆ ಈ ಹುದ್ದೆ ನೀಡಿರುವುದು ಸರಿಯಲ್ಲ’ ಎಂದು ಕೆಲ ಪ್ರಾಧ್ಯಾಪಕರು ಅಭಿಪ್ರಾಯಪಟ್ಟರೆ, ‘ವಿಶ್ವವಿದ್ಯಾಲಯದ ಡೀನ್‌ಗಳ ಪೈಕಿ ಹಿರಿಯ ಡೀನ್‌ ಆಗಿರುವ ಮಾಲೆ ಅವರನ್ನು ರಾಜ್ಯಪಾಲರು ನಿಯಮಾನುಸಾರವೇ ಹಂಗಾಮಿ ಕುಲಪತಿಯನ್ನಾಗಿ ನೇಮಕ ಮಾಡಿದ್ದಾರೆ’ ಎಂದುಕೆಲ ಪ್ರಾಧ್ಯಾಪಕರು ಸಮರ್ಥಿಸಿಕೊಂಡಿದ್ದಾರೆ.

‘ನನ್ನ ನೇಮಕಾತಿಯಲ್ಲಿ ನಿಯಮ ಉಲ್ಲಂಘನೆಯಾಗಿಲ್ಲ. ಕರ್ನಾಟಕ ವಿಶ್ವವಿದ್ಯಾಲಯದ ಕಾಯ್ದೆಯ ಕಲಂ 16 (2)ರಲ್ಲಿ ಪೂರ್ಣಾವಧಿ ಕುಲಪತಿ ಇಲ್ಲದ ಸಂದರ್ಭದಲ್ಲಿ ಹಿರಿಯ ಡೀನ್‌ರನ್ನು ನೇಮಕ ಮಾಡಬೇಕು ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಇದು ತಾತ್ಕಾಲಿಕ ನೇಮಕ. ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರನ್ನು, ಮಂಗಳೂರು ವಿ.ವಿ.ಯಲ್ಲಿ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕರನ್ನು ನೇಮಕ ಮಾಡಲಾಗಿತ್ತು. ಹಾಗೆ, ಹಿರಿತನದ ಆಧಾರದಲ್ಲಿ ರಾಜ್ಯಪಾಲರು ನನಗೆ ನೇಮಕಾತಿ ಆದೇಶ ಕೊಟ್ಟಿದ್ದಾರೆ’ ಎಂದುಡಾ.ದೇವಿದಾಸ ಮಾಲೆ ಪ್ರತಿಕ್ರಿಯಿಸಿದರು.

ಏತನ್ಮಧ್ಯೆ ಪೂರ್ಣಾವಧಿ ಕುಲಪತಿ ನೇಮಕಕ್ಕೆ ಶೋಧನಾ ಸಮಿತಿ ಇನ್ನೂ ರಚನೆಯಾಗಿಲ್ಲ. ಹೀಗಾಗಿ, ನೇಮಕ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎನ್ನುವುದು ಮೂಲಗಳ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT