ಶುಕ್ರವಾರ, ಸೆಪ್ಟೆಂಬರ್ 17, 2021
25 °C

ಕಲಬುರ್ಗಿ: ಅಂಚೆ ಮತ ಎಣಿಕೆ ಆರಂಭಕ್ಕೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಇಲ್ಲಿನ ನೂತನ ವಿದ್ಯಾಲಯದ ಆವರಣದಲ್ಲಿ ಮೊದಲಿಗೆ ‌ಅಂಚೆ ಮತ ಎಣಿಕೆಗೊ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಉಪವಿಭಾಗಾಧಿಕಾರಿ ಮೋನಾ ರೂತ್ ನೇತೃತ್ವದಲ್ಲಿ ವಿವಿಧ ವಾರ್ಡ್ ಚುನಾವಣಾಧಿಕಾರಿಗಳು ಮತ ಪೆಟ್ಟಿಗೆಗಳನ್ನು ಪರಿಶೀಲಿಸಿ ಎಣಿಕೆ ಸಿಬ್ಬಂದಿಗೆ ನೀಡಿದರು.

55 ಟೇಬಲ್‌ಗಳಲ್ಲಿ ಮತ ಎಣಿಕೆ ಆರಂಭಗೊಳ್ಳಲಿದ್ದು, ಮಧ್ಯಾಹ್ನದ ವೇಳೆಗೆ ಎಲ್ಲ 55 ವಾರ್ಡುಗಳ ಫಲಿತಾಂಶ ‌ಹೊರಬೀಳಲಿದೆ.

ಬೆಳಿಗ್ಗೆಯಿಂದಲೇ ಎನ್.ವಿ. ಮೈದಾನದ ಎದುರು ಸಹಸ್ರಾರು ಸಂಖ್ಯೆಯಲ್ಲಿ ವಿವಿಧ ಪಕ್ಷಗಳ‌ ಮುಖಂಡರು, ಏಜೆಂಟರು ಸೇರಿದ್ದು, ಪೊಲೀಸರು ಅವರನ್ನು ತಪಾಸಣೆ ನಡೆಸಿ ಒಳಗೆ ಬಿಡುತ್ತಿದ್ದಾರೆ.

ಮುಂಜಾಗ್ರತಾ ‌ಕ್ರಮವಾಗಿ ಎಸ್.ಬಿ.  ಟೆಂಪಲ್ ರಸ್ತೆಯಲ್ಲಿ ಸಾರ್ವಜನಿಕ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ‌.

ಡಿಸಿಪಿಗಳಾದ ಅಡ್ಡೂರು ಶ್ರೀನಿವಾಸಲು,‌ ಶ್ರೀಕಾಂತ ಕಟ್ಟಿಮನಿ, ಎಸಿಪಿಗಳಾದ ಅಂಶುಕುಮಾರ್, ಜೆ.ಎಂ.ಇನಾಮದಾರ, ಗಿರೀಶ್ ಎಸ್. ಬಿ. ನೇತೃತ್ವದಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು