ಅಫಜಲಪುರ: ತಾಲ್ಲೂಕಿನ ಸಿದ್ದನೂರು ಗ್ರಾಮದಲ್ಲಿ ಹನುಮಾನ ಜಾತ್ರಾ ಮಹೋತ್ಸವ ನಿಮಿತ್ತ ಹನುಮಾನ ದೇವರ ಪಲ್ಲಕ್ಕಿ ಉತ್ಸವ ಹಾಗೂ ಪುರವಂತರ ಸೇವೆ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.
ಬೆಳಗ್ಗೆ ಹಿಂಚಿಗೇರಿಯ ಶಂಭುಲಿಂಗ ಶಿವಾಚಾರ್ಯರಿಂದ ಹನುಮಾನ ಮೂರ್ತಿಗೆ ಅಭಿಷೇಕ ಜರುಗಿತು. ನಂತರ ಹನುಮಾನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮಸ್ಥರು ಪಲ್ಲಕ್ಕಿಗೆ ನೀರು, ಕಾಯಿ, ಕರ್ಪೂರ ಅರ್ಪಿಸಿ, ದರ್ಶನ ಪಡೆದರು. ಪುರವಂತರ ಕಲಾ ಪ್ರದರ್ಶನ ಗಮನ ಸೆಳೆಯಿತು.