ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಅತ್ಯಾಚಾರ ಯತ್ನಕ್ಕೊಳಗಾದ ಮಹಿಳಾ ರೋಗಿ ಸಾವು

Last Updated 16 ಜೂನ್ 2021, 14:23 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಜಿಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲೇ ಖಾಸಗಿ ಆಂಬುಲೆನ್ಸ್‌ ಚಾಲಕನಿಂದ ಅತ್ಯಾಚಾರ ಯತ್ನಕ್ಕೊಳಗಾಗಿದ್ದ 25 ವರ್ಷದ ನಗರದ ಮಹಿಳೆ ಬುಧವಾರ ಸಾವಿಗೀಡಾಗಿದ್ದಾರೆ.

ಕಳೆದ ಜೂನ್ 8ರಂದು ರಾತ್ರಿ ಆಂಬುಲೆನ್ಸ್ ಚಾಲಕ, ನಗರದ ಫಿಲ್ಟರ್ ಬೆಡ್ ನಿವಾಸಿ ಪ್ರೇಮಕುಮಾರ ಅಲಿಯಾಸ್ ಪಿಂಟು (25) ಮಹಿಳೆಯ ಮೂತ್ರ ಚೀಲವನ್ನು ತೆಗೆದು ಅತ್ಯಾಚಾರಕ್ಕೆ ಯತ್ನಿಸಿದ್ದ. ಇದರಿಂದ ಎಚ್ಚರಗೊಂಡ ಮಹಿಳೆ ಜೋರಾಗಿ ಕೂಗಿಕೊಂಡಿದ್ದರಿಂದ ಸುತ್ತಮುತ್ತಲಿನ ಬೆಡ್‌ಗಳಲ್ಲಿದ್ದ ರೋಗಿಗಳು ಹಾಗೂ ಸಿಬ್ಬಂದಿ ಹಿಡಿಯಲು ಯತ್ನಿಸಿದ್ದರು. ಆಗ ತಪ್ಪಿಸಿಕೊಂಡಿದ್ದ. ನಂತರ ಬ್ರಹ್ಮಪುರ ಠಾಣೆ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಕೋವಿಡ್‌ ಸೋಂಕು ತೀವ್ರವಾಗಿ ಬಾಧಿಸಿದ್ದರಿಂದ ಆ ಮಹಿಳೆ ಚಿಕಿತ್ಸೆಗಾಗಿ ಜಿಮ್ಸ್‌ ಕೋವಿಡ್‌ ವಾರ್ಡ್‌ಗೆ ದಾಖಲಾಗಿದ್ದರು.

ಭದ್ರತಾ ಲೋಪ: ‘ರಾಜ್ಯದಲ್ಲಿ ಎಲ್ಲಿಯೂ ಇಲ್ಲದ ಬೌನ್ಸರ್‌ಗಳ ಕಾವಲು ಇಲ್ಲಿನ ಜಿಮ್ಸ್‌ ಆಸ್ಪತ್ರೆಗೆ ಇದೆ. ಇಷ್ಟೆಲ್ಲ ಭದ್ರತೆ ಮಧ್ಯೆಯೂ ಖಾಸಗಿ ಆಂಬುಲೆನ್ಸ್ ಚಾಲಕ ಒಳಗೆ ಹೋಗಿ ಮಹಿಳಾ ರೋಗಿಯ ಮೇಲೆ ಅತ್ಯಾಚಾರ ಯತ್ನ ನಡೆಸಿದ್ದು ಹೇಗೆ? ಈ ಭದ್ರತಾ ಲೋಪದ ಹೊಣೆ ಯಾರು ಹೊರಬೇಕು. ಇಷ್ಟೆಲ್ಲ ನಡೆದರೂ ಹಿರಿಯ ಅಧಿಕಾರಿಗಳು ಏಕೆ ಸುಮ್ಮನಿದ್ದಾರೆ’ ಎಂದು ದಲಿತ ಮಾದಿಗ ಸಮನ್ವಯ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ ತಾರಫೈಲ್ ಪ್ರಶ್ನಿಸಿದರು.

ಈ ಕುರಿತು ಮಾಹಿತಿ ಪಡೆಯಲು ಜಿಮ್ಸ್ ನಿರ್ದೇಶಕಿ ಡಾ. ಕವಿತಾ ಪಾಟೀಲ ಅವರನ್ನು ಹಲವು ಬಾರಿ ‘ಪ್ರಜಾವಾಣಿ’ ಸಂಪರ್ಕಿಸಿದರೂ ಅವರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT