ಇದರಿಂದಾಗಿ ವಾಹನ ಸವಾರರಿಗೆ ಕಿರಿಕಿರಿಯಾಗಿದ್ದು, ಸರಾಗ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಹಿಂದೆಯೂ ನಗರಕ್ಕೆ ಗಣ್ಯರು ಭೇಟಿ ನೀಡಿದಾಗ ಸ್ವಾಗತ ಕಮಾನುಗಳನ್ನು ಅಳವಡಿಸಲಾಗಿತ್ತು. ಆದರೆ, ರಸ್ತೆ ಮಧ್ಯದಲ್ಲಿ ಕಬ್ಬಿಣದ ಕಂಬ ಅಳವಡಿಸಿದ್ದು ಇದೇ ಮೊದಲು ಎಂದು ವಾಹನ ಸವಾರರು 'ಪ್ರಜಾವಾಣಿ'ಗೆ ಕರೆ ಮಾಡಿ ಆರೋಪಿಸಿದರು.