ಕಲಬುರಗಿ: ‘ಕವಿ, ಬರಹಗಾರರು ಬಹಳ ಪರಿಶ್ರಮದಿಂದ ಕಾರ್ಯಕ್ರಮ ಮಾಡುತ್ತಾರೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು. ರಾಷ್ಟ್ರಮಟ್ಟದ ಪ್ರಶಸ್ತಿಗಳು ಕೂಡ ಸಿಗಲಿ’ ಎಂದು ಮಾಜಿ ಉಪ ಮೇಯರ್ ನಾಗವೇಣಿ ತಿಪ್ಪಣ್ಣಪ್ಪ ಕಮಕನೂರ ಆಶಿಸಿದರು.

ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಭಾನುವಾರ ರಂಗಮಿತ್ರ ನಾಟ್ಯ ಸಂಘ, ಕರ್ನಾಟಕ ರಾಜ್ಯ ನಾಟಕ ಬರಹಗಾರರ ಕವಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕವಿಸಂಗಮ-2026 ನಮ್ಮ ನಾಟಕ ನಮ್ಮ ಹಕ್ಕು ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕವಿಗಳು, ನಾಟಕ ಬರಹಗಾರರು ತಮ್ಮ ಜೀವನದ ನೋವುಗಳನ್ನು ಹೇಳಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗಬಾರದು’ ಎಂದು ಹೇಳಿದರು.

ನಾಟಕ ಬರಹಗಾರರ ಕವಿಗಳ ಸಂಘದ ರಾಜ್ಯಾಧ್ಯಕ್ಷ ಶಂಕರಜಿ ಹೂವಿನಹಿಪ್ಪರಗಿ ಮಾತನಾಡಿ, ‘ಸಂಘದಲ್ಲಿ 400 ಜನ ಸದಸ್ಯರಿದ್ದು, ಕವಿ ಬರಹಗಾರರಿಗೆ ಸಮಾಜದಲ್ಲಿ ಗೌರವ ಸಿಗುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಸಂಕಷ್ಟದಲ್ಲಿದ್ದವರಿಗೆ ನೆರವಾಗುತ್ತಿದೆ’ ಎಂದು ತಿಳಿಸಿದರು.

ಪ್ರಶಸ್ತಿ ಪ್ರದಾನ: 50 ಜನ ಸಾಧಕರಿಗೆ ‘ಶ್ರೀವಿಜಯರತ್ನ’ ಹಾಗೂ 26 ಜನರಿಗೆ ‘ಕನ್ನಡ ಕವಿರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಧಕರಾದ ಎಲ್.ಬಿ.ಶೇಕ್ ಮಾಸ್ತರ್, ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಮಲ್ಲೇಶ್ ಕೋನಾಳ ಯಾದಗಿರಿ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.

ಶ್ರೀನಿವಾಸ ಸರಡಗಿಯ ಅಪ್ಪಾರಾವ ದೇವಿ ಮುತ್ಯಾ, ಹಳ್ಳೊಳ್ಳಿಯ ಶಿರಸಪ್ಪಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಂಗಮಿತ್ರ ನಾಟ್ಯ ಸಂಘದ ಜಿಲ್ಲಾಧ್ಯಕ್ಷ ಶಾಮರಾವ ಎಸ್.ಕೊರವಿ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಕುಮಾರಿ ವಿಜಯಲಕ್ಷ್ಮಿ, ಗುರಪ್ಪ ಪಾಟೀಲ, ಡಿ.ಆರ್.ಪೂಜಾರಿ, ಜಗನ್ನಾಥ ಕಟ್ಟಿ, ರಾಮರಾವ ಪಾಟೀಲ, ಗೌತಮ ಬೊಮ್ಮನಳ್ಳಿ ಇದ್ದರು.

ಭವಾನಿ ಎಲ್.ಅವಂಟಿ ಭರತನಾಟ್ಯ, ಮಾರುತಿ ಹುಲಕಟ್ಟಿ ವೀರಗಾಸೆ ಪ್ರದರ್ಶಿಸಿದರು. ಬಾಲಕರಾದ ಸಮೀರ್ ಶೇಕ್ ಮತ್ತು ತನ್ವೀರ್ ಶೇಕ್ ಪ್ರಾರ್ಥಿಸಿದರು. ಪ್ರೇಮಾ ಬೆಳಗಲಿ ಸಂಘದ ಗೀತೆ ಹಾಡಿದರು. ಲಕ್ಷ್ಮಣ ಅವಂಟಿ ಸ್ವಾಗತಿಸಿದರು. ಬಿ.ಎಚ್.ನಿರಗುಡಿ ಮತ್ತು ಸುಜಾತಾ ಪಾಟೀಲ ನಿರೂಪಿಸಿದರು.

ಹಲವರಿಂದ ದೇಣಿಗೆ

ಜಿ.ಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್ ಬಂಧು ಪ್ರಿಂಟರ್ಸ್ ಮಾಲೀಕ ರಮೇಶ ಜಿ.ತಿಪ್ಪನೂರ ಅಫಜಲಪುರದ ಸಿದ್ರಾಮೇಶ್ವರ ನಾಟ್ಯ ಸಂಘದ ಮಾಲೀಕ ಚಂದ್ರಶೇಖರ ಕರಜಗಿ ಅವರು ನಾಟಕ ಬರಹಗಾರರು ಮತ್ತು ಕವಿಗಳ ಸಂಕಷ್ಟಕ್ಕೆ ನೆರವಾಗಲಿ ಎಂದು ಸಂಘಕ್ಕೆ ತಲಾ ₹25 ಸಾವಿರ ದೇಣಿಗೆ ನೀಡಿದರು. ಅವರಂತೆ ಅನೇಕರು ₹11 ಸಾವಿರ ₹5 ಸಾವಿರ ದೇಣಿಗೆ ಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.