ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಖರ್ಗೆ ಶ್ರಮಕ್ಕೆ ಮೆರುಗು ತುಂಬಿದ ಮತದಾರ’

ಸೇಡಂ;ಸಚಿವ ಡಾ. ಶರಣಾಪ್ರಕಾಶ ಪಾಟೀಲ ಅಭಿಮತ
Published 11 ಜುಲೈ 2024, 6:56 IST
Last Updated 11 ಜುಲೈ 2024, 6:56 IST
ಅಕ್ಷರ ಗಾತ್ರ

ಸೇಡಂ: ಕಲ್ಯಾಣ ಭಾಗದಲ್ಲಿ 371(ಜೆ) ಕಲಂ ಜಾರಿಗೆ ತಂದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪರಿಶ್ರಮಕ್ಕೆ ಕಲ್ಯಾಣ ಕರ್ನಾಟಕದ ಮತದಾರರು ಲೋಕಸಭಾ ಚುನಾವಣೆಯಲ್ಲಿ ಮತ ನೀಡಿ ಮೆರುಗು ತಂದಿದ್ದಾರೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಅಭಿಪ್ರಾಯಪಟ್ಟರು.

ಪಟ್ಟಣದ ಹೊರವಲಯದ ವೀರಶೈವ ಕಲ್ಯಾಣಮಂಟಪದಲ್ಲಿ ಬುಧವಾರ ನಡೆದ ಅಭಿನಂದನಾ ಸಮಾರಾರಂಭದಲ್ಲಿ ಅವರು ಮಾತನಾಡಿದರು.

‘ದೇಶದ ಬಡಜನರ ಏಳಿಗೆಗೋಸ್ಕರ ಕಾಂಗ್ರೆಸ್‌ ಕೆಲಸ ಮಾಡುತ್ತಿದೆ. ಲೋಕಸಭೆಯ ಚುನಾವಣೆ ಗೆಲ್ಲಲು ಗ್ಯಾರಂಟಿ ಕೊಟ್ಟಿದ್ದಾರೆ ಎಂದು ಬಿಜೆಪಿಯವರು ದೂರುತ್ತಿದ್ದಾರೆ. ಓಟಿಗಾಗಿ ಗ್ಯಾರಂಟಿ ಕೊಟ್ಟಿಲ್ಲ. ಗ್ಯಾರಂಟಿಗಳನ್ನು ಹಿಂಪಡೆಯುವುದಿಲ್ಲವೆಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ’ ಎಂದರು.

‘ನನ್ನ ರಾಜಕೀಯ ಜೀವನದ ಏಳಿಗೆಗೆ ನಿರಂತರವಾಗಿ ಸಲಹೆ ಮತ್ತು ಮಾರ್ಗದರ್ಶನವನ್ನು ರಾಧಾಕೃಷ್ಣ ನೀಡಿದ್ದಾರೆ. ಅವರ ಗೆಲುವಿಗೆ ನಾನು ಮಾಡಿದ ಕೆಲಸ ಅಲ್ಪ. ಮಲ್ಲಿಕಾರ್ಜುನ ಖರ್ಗೆ ಅವರ ಪ್ರೋತ್ಸಾಹ ಮತ್ತು ರಾಧಾಕೃಷ್ಣ ದೊಡ್ಡಮನಿ ಅವರ ಸಹಕಾರ ಹಿರಿದಾಗಿದೆ’ ಎಂದರು.

ಸಂಸದ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ, ‘ನನ್ನ ಗೆಲುವು ಪ್ರತಿಯೊಬ್ಬರ ಶ್ರಮದಿಂದ ಸಾಧ್ಯವಾಗಿದೆ. ವಿಶೇಷವಾಗಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮತ್ತು ಸಚಿವ ಪ್ರಿಯಾಂಕ್‌ ಖರ್ಗೆ ಅವರ ಬಹಳ ಪರಿಶ್ರಮವಿದೆ. ಗೆಲುವಿಗೋಸ್ಕರ ಒಗ್ಗಟ್ಟಿನಿಂದ ಶ್ರಮಿಸಿದ್ದು ಸಂತಸ ತಂದಿದ್ದು, ಒಗ್ಗಟ್ಟಿನ ಕೆಲಸ ಹೀಗೆಯೇ ಮುಂದುವರಿಯಲಿ' ಎಂದರು.

ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಮಾತನಾಡಿ, ‘ಕಲ್ಯಾಣ ಕರ್ನಾಟಕ ಭಾಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿರುವ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ ಈ ಭಾಗಕ್ಕೆ ಅಪಾರವಾಗಿದೆ. ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಲ್ಲಿ ದೇಶದ ಪ್ರಧಾನಿಯಾಗುತ್ತಿದ್ದರು’ ಎಂದರು.

ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ ಹುಮನಾಬಾದ್, ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ, ನಾಗೇಶ್ವರರಾವ ಮಾಲಿ ಪಾಟೀಲ ಮಾತನಾಡಿದರು.

ಸೇಡಂ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ರವೀಂದ್ರ ನಂದಿಗಾಮ, ಸತೀಶರೆಡ್ಡಿ ಪಾಟೀಲ, ಧೂಳಪ್ಪ ದೊಡ್ಮನಿ, ಮಹಾಂತಪ್ಪ ಸಂಗಾವಿ, ಜಗನ್ನಾಥ ಚಿಂತಪಳ್ಳಿ, ನಾಗೇಶ ಕಾಳಾ, ಜೈಭೀಮ ಊಡಗಿ, ವೆಂಕಟರಾಮರೆಡ್ಡಿ ಕಡತಾಲ, ಮೇಘರಾಜ ರಾಠೋಡ, ರಾಜುಗೌಡ ಬೆನಕನಹಳ್ಳಿ, ರಾಜಶೇಖರ ಪುರಾಣಿಕ, ರವಿ ಸಾಹು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT