ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಡಿ: ಅರಿವಿನ ಹಣತೆ ಹಚ್ಚುವ ತೋಟೇಂದ್ರ ಶ್ರೀ

ಕೈಬೀಸಿ ಕರೆಯುತ್ತಿದೆ ನಾಲವಾರದ ಕೋರಿಸಿದ್ದೇಶ್ವರ ಮಠ
ಸಿದ್ದರಾಜ ಎಸ್ ಮಲ್ಕಂಡಿ
Published 10 ಫೆಬ್ರುವರಿ 2024, 6:06 IST
Last Updated 10 ಫೆಬ್ರುವರಿ 2024, 6:06 IST
ಅಕ್ಷರ ಗಾತ್ರ

ವಾಡಿ: ಜ್ಯೋತಿಯ ಬಲದಿಂದ ತಮಂದದ ಕೇಡು ನೋಡಯ್ಯ ಎನ್ನುವ ಹಾಗೇ ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಾ ಅರಿವಿನ ಹಣತೆ ಹಚ್ಚುತ್ತಾ ಸಾಗುತ್ತಿದ್ದಾರೆ ನಾಲವಾರ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಸಿದ್ಧತೋಟೇಂದ್ರ ಶಿವಾಚಾರ್ಯರು.

ಇನ್ನುಳಿದ ಮಠಾಧೀಶರ ಹಾಗೇ ಕೇವಲ ಧಾರ್ಮಿಕ ಕಾರ್ಯಗಳಿಗೆ ಮಾತ್ರ ಸೀಮಿತರಾಗದೇ ಕಲೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಬಹುಮುಖ್ಯವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸುತ್ತಾ ಸಾಮಾಜಿಕ ಜವಾಬ್ದಾರಿ ನಿಭಾಯಿಸುತ್ತಿರುವ ಇವರು ಸಮಕಾಲೀನ ಸಮಾಜ ಸುಧಾರಕರಲ್ಲಿ ಅಗ್ರಗಣ್ಯರು.

ವಿಜ್ಞಾನ, ಸಿನಿಮಾರಂಗ, ಧರ್ಮ, ಕ್ರೀಡಾಲೋಕ, ಬಾಹ್ಯಕಾಶ, ರಾಜಕೀಯ ರಂಗ ಹೀಗೆ ಸಮಾಜದ ಪ್ರತಿ ಕ್ಷೇತ್ರದ ಮಹಾನೀಯ ವ್ಯಕ್ತಿಗಳನ್ನು ತಮ್ಮ ಮಠದ ಆವರಣದಲ್ಲಿ ಜರುಗುವ ಪ್ರತಿ ಕಾರ್ಯಕ್ರಮಕ್ಕೂ ಪ್ರೀತಿಯ ಸ್ವಾಗತ ನೀಡಿ ಭಕ್ತರಿಗೆ ಹತ್ತಿರವಾಗಿಸುವ ಮಹಾನ್ ಕಾರ್ಯ ನಡೆಸುತ್ತಾ ಬರುತ್ತಾ ಭಕ್ತರ ಮನ ತಣಿಸುತ್ತಿದ್ದಾರೆ.

ನಾವು ದೂರದಿಂದಲೂ ನೋಡಲು ಸಾಧ್ಯವಾಗದ ಮಹಾನ್ ಪುರುಷರನ್ನು ನಮ್ಮ ಹತ್ತಿರಕ್ಕೆ ಕರೆತಂದು ನಮ್ಮ ಬದುಕು ಪಾವನ ಮಾಡುತ್ತಿರುವ ಮಹಾನೀಯರು ನಮ್ಮ ಸಿದ್ಧ ತೋಟೇಂದ್ರರು ಎಂದು ಸ್ಥಳೀಯರು ಹೆಮ್ಮೆಯಿಂದ ನೆನೆಯುತ್ತಾರೆ.

ಗುರುಗೌಡ ಇಟಗಿ
ಗುರುಗೌಡ ಇಟಗಿ
ನಾಲವಾರದ ನಂದಾದೀಪವೆಂದೇ ಖ್ಯಾತಿ ಪಡೆದ ಸಿದ್ಧ ತೋಟೇಂದ್ರರು ಕಲೆ ಸಾಹಿತ್ಯ ಸಂಸ್ಕೃತಿಯ ಪೋಷಕರು ಹೌದು. ಸಮಾಜದ ಇನ್ನಿತರ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ.
ಗುರುಗೌಡ ಇಟಗಿ ,ಯುವ ಮುಖಂಡ
ಶಾಂತಗೌಡ ಅಲ್ಲೂರು
ಶಾಂತಗೌಡ ಅಲ್ಲೂರು
ರಾಜ್ಯದಲ್ಲಿಯೇ ಅಪರೂಪದ ಮಠ ಇದಾಗಿದ್ದು ಭಕ್ತರ ಅಜ್ಞಾನದ ಬದಲು ಅರಿವಿನ ಹಣತೆ ಹಚ್ಚಲು ತಮ್ಮ ಬದುಕು ಮುಡುಪಾಗಿಸಿದ ಸಿದ್ಧ ತೋಟೇಂದ್ರರು ಮಠಾಧೀಶರಿಗೆ ಪ್ರೇರಣಾ ಶಕ್ತಿಯಾಗಿದ್ದಾರೆ.
ಶಾಂತಗೌಡ ಭಕ್ತ ಅಲ್ಲೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT