ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: 17, 18 ರಂದು ದಲಿತ ಸಾಹಿತ್ಯ ಸಮ್ಮೇಳನ

ಸ್ವಾಗತ ಸಮಿತಿಗೆ ಸುರೇಶ ಶರ್ಮಾ ಅಧ್ಯಕ್ಷ
Published : 6 ಆಗಸ್ಟ್ 2024, 14:24 IST
Last Updated : 6 ಆಗಸ್ಟ್ 2024, 14:24 IST
ಫಾಲೋ ಮಾಡಿ
Comments

ಕಲಬುರಗಿ: ‘ಜಿಲ್ಲೆಯ ನೆಲದಲ್ಲಿ ಹುಟ್ಟಿಕೊಂಡ ದಲಿತ ಚಳವಳಿ ನಾಡಿನಾದ್ಯಂತ ವಿಸ್ತರಿಸಿ ದಮನಿತರಿಗೆ ಧ್ವನಿಯಾಗಿ ನಿಂತಿದೆ. ಇಂಥ ಚಳವಳಿಯಿಂದಲೇ ನಾಡಿನಲ್ಲಿ ದಲಿತ ಮತ್ತು ಬಂಡಾಯ ಸಾಹಿತ್ಯ ರಚನೆಯಾಗಿದೆ’ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಭಿಪ್ರಾಯಪಟ್ಟರು.

ಆಗಸ್ಟ್‌ 17 ಮತ್ತು 18 ರಂದು ನಗರದಲ್ಲಿ ನಡೆಸಲು ಉದ್ದೇಶಿಸಿರುವ ಜಿಲ್ಲಾ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಸುರೇಶ ಎಲ್. ಶರ್ಮಾ ಅವರನ್ನು ಸತ್ಕರಿಸಿ ಆಹ್ವಾನ ನೀಡಿ ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸುರೇಶ ಎಲ್. ಶರ್ಮಾ, ಶರಣರ ನಾಡಿನಲ್ಲಿ ನಡೆಯಲಿರುವ ದಲಿತ ಚಳವಳಿ ಸಾಹಿತ್ಯ ಸಮ್ಮೇಳನ ಅಭೂತಪೂರ್ವವಾಗಿ ನಡೆಸಲು ಎಲ್ಲರ ಸಹಕಾರ ಅಗತ್ಯ. ದಲಿತ ಹೋರಾಟದ ಅಸ್ಮಿತೆ ಎತ್ತಿ ಹಿಡಿಯಬೇಕು ಎಂದರು.

ಪ್ರಮುಖರಾದ ಎಸ್‌.ಪಿ ಸುಳ್ಳದ, ಎಚ್. ಶಂಕರ, ಬಿ.ಸಿ.ವಾಲಿ, ಜಿಲ್ಲಾ ಕಸಾಪದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ವಿನೋದಕುಮಾರ ಜೇನವೇರಿ, ಎಂ. ಎನ್ ಸುಗಂಧಿ, ಸೋಮಶೇಖರಯ್ಯಾ ಹೊಸಮಠ, ಬಸಯ್ಯಾ ಸ್ವಾಮಿ, ಶಿವಶರಣಪ್ಪ ಬಡದಾಳ, ಪ್ರಭವ ಪಟ್ಟಣಕರ್, ಗುರು ಬಂಡಿ, ಮಹಾಂತೇಶ ರೋಢಗಿ, ಸಂಗಮನಾಥ, ಗಣೇಶ ಚಿನ್ನಾಕಾರ, ಬಾಬುರಾವ ಪಾಟೀಲ, ಧರ್ಮರಾಯ ಜವಳಿ, ಶಿವಾನಂದ ಪೂಜಾರಿ, ರಾಘವೇಂದ್ರ ಕಲ್ಯಾಣಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

‘ಡಿ.ಜಿ. ಸಾಗರ್‌ ಆಯ್ಕೆ ಸರಿಯಾಗಿದೆ’

80ರ ದಶಕದಲ್ಲಿ ದಲಿತ ಚಳವಳಿ ಹುಟ್ಟು ಹಾಕಿದ ಡಿ.ಜಿ. ಸಾಗರ್‌ ಅವರು ಇಡೀ ದಲಿತ ಸಮುದಾಯದ ಧ್ವನಿಯಾಗಿ ಹೋರಾಟಕ್ಕಿಳಿದವರು. ಅಸಮಾನತೆ ಜಾತಿ ದೌರ್ಜನ್ಯಗಳ ವಿರುದ್ಧ ಧ್ವನಿಯೆತ್ತಿ ದಮನಿತರ ಸಂಕಷ್ಟಗಳಿಗೆ ಹೋರಾಟದ ಮೂಲಕ ಪರಿಹಾರ ಒದಗಿಸಿಕೊಟ್ಟಿದ್ದಾರೆ. ಇಂಥ ಚಳವಳಿಗಳ ಪ್ರತಿರೂಪವಾಗಿ ಇಂದಿಗೂ ಹೋರಾಟದ ಬದುಕು ಸಾಗಿಸುತ್ತಿರುವ ಡಿ.ಜಿ. ಸಾಗರ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ನೂರಕ್ಕೆ ನೂರರಷ್ಟು ಸಮಂಜಸವಾಗಿದೆ ಎಂದು ತೇಗಲತಿಪ್ಪಿ ತಿಳಿಸಿದ್ದಾರೆ. ದಲಿತ ಚಳವಳಿ ಸಾಹಿತ್ಯ ಸಮ್ಮೇಳನದ ಕುರಿತು ಯಾರು ಕೂಡ ಅಪಾರ್ಥ ಕಲ್ಪಿಸಬಾರದು. ಹೋರಾಟಗಾರರಿಗೆ ಗೌರವ ತಂದು ಕೊಡುವ ಕೆಲಸ ಕನ್ನಡ ಸಾಹಿತ್ಯ ಪರಿಷತ್‌ ಮಾಡುತ್ತಾ ಬಂದಿದೆ. ಇಂಥ ಹೋರಾಟಗಾರರನ್ನು ವೈಯಕ್ತಿಕ ನೆಲೆಗಟ್ಟಿನಿಂದ ನೋಡದೇ ಸಮಗ್ರ ದೃಷ್ಟಿಕೋನದಿಂದ ನೋಡುವಂತಾಗಬೇಕು. ಸಾಗರ್‌ ಅವರನ್ನು ಗುರುತಿಸಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಕೂಡ ಎಲ್ಲರಿಗೂ ಸಂತಸ ತಂದಿದೆ ಎಂದು ಅವರು ಸಮರ್ಥಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT