ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯುತ್ ಪ್ರವಹಿಸಿ ಸೆಂಟ್ರಿಂಗ್ ಕಾರ್ಮಿಕ ಸಾವು

Published 9 ಜೂನ್ 2024, 6:25 IST
Last Updated 9 ಜೂನ್ 2024, 6:25 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಅಕ್ಕಮಹಾದೇವಿ ಕಾಲೊನಿಯ ಮನೆಯೊಂದರಲ್ಲಿ ಸೆಂಟ್ರಿಂಗ್ ಕೆಲಸ ಮಾಡುವಾಗ ವಿದ್ಯುತ್ ಪ್ರವಹಿಸಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.

ಅಂಬಿಕಾ ನಗರದ ನಿವಾಸಿ ದೀಪಕ್ ಸಹದೇವ (35) ಮೃತ ಕಾರ್ಮಿಕ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಮದೇವ ಜಾಧವ ಅವರ ಮನೆಯಲ್ಲಿ ದೀಪಕ್ ಅವರು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ಕಬ್ಬಿಣ ತುಂಡರಿಸುವಾಗ ಯಂತ್ರದ ವೈರ್ ತಗುಲಿ ವಿದ್ಯುತ್ ಪ್ರವಹಿಸಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಮಾಂಗಲ್ಯ ಸರ ಕಳವು: ಅಫಜಲಪುರ ತಾಲ್ಲೂಕಿನ ಮಲ್ಲಾಬಾದ್ ಗ್ರಾಮದ ಜಾತ್ರೆಯಲ್ಲಿ ಶಿವಲೀಲಾ ಶಿವಲಿಂಗಪ್ಪ ಅವರ ಕೊರಳಲ್ಲಿದ್ದ ₹2.20 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಕಳ್ಳರು ಕದ್ದಿದ್ದಾರೆ.

ಗ್ರಾಮದ ವಿಜಯಲಕ್ಷ್ಮಿ ದೇವಿಯ ಜಾತ್ರೆಯ ಅಂಗವಾಗಿ ದೇವಸ್ಥಾನದ ಆರತಿ ಪೂಜೆಯ ವೇಳೆ ಶಿವಲೀಲಾ ಅವರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಕೆಲ ಹೊತ್ತಿನ ಬಳಿಕ ನೋಡಿದಾಗಿ ಅವರ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಳ್ಳರು ಕದ್ದೊಯ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಟವರ್ ಅಳವಡಿಕೆ ಆಮಿಷಯೊಡ್ಡಿ ರೈತರಿಗೆ ವಂಚನೆ: ಕೃಷಿ ಜಮೀನಿನಲ್ಲಿ ಮೊಬೈಲ್ ಟವರ್ ಅಳವಡಿಸುವುದಾಗಿ ಹುಸಿ ಭರವಸೆ ಕೊಟ್ಟು ಹಣ ಪಡೆದು ಆಳಂದ ತಾಲ್ಲೂಕಿನ ಜಿಡಗಾ ಗ್ರಾಮದ ರೈತ ಗುಂಡಪ್ಪ ಗುರುಶಾಂತಪ ಅವರಿಗೆ ವ್ಯಕ್ತಿಯೊಬ್ಬರು ವಂಚಿಸಿದ್ದಾರೆ.

ಗುಂಡಪ್ಪ ನೀಡಿದ ದೂರಿನ ಅನ್ವಯ ಕಮಲಾಪುರದ ಅಶೋಕ ಕುಮಾರ ಅವರ ವಿರುದ್ಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರ್ಕಾರೇತರ ಕಂಪನಿಯ ಮುಖ್ಯಸ್ಥ ಎಂದು ಹೇಳಿಕೊಂಡ ಅಶೋಕ ಅವರು ಚಂಡಿಗಢ ಮೂಲದ ಕಂಪನಿಯಿಂದ ಮೊಬೈಲ್ ಟವರ್ ಅಳವಡಿಸಿ ಲಕ್ಷಾಂತರ ರೂಪಾಯ ಕೊಡಿಸುವುದಾಗಿ ಗುಂಡಪ್ಪ ಅವರನ್ನು ನಂಬಿಸಿದ್ದ. 20 ವರ್ಷದ ಒಪ್ಪಂದಕ್ಕೆ ₹65 ಲಕ್ಷ ನೀಡುತ್ತಾರೆ. ಮುಂಗಡವಾಗಿ ₹10 ಲಕ್ಷ ಕೊಡುವರು ಎಂದು ಹುಸಿ ಭರವಸೆ ಕೊಟ್ಟ ಅಶೋಕ ಅವರು ರೈತರಿಂದ ₹27 ಸಾವಿರ ಪಡೆದಿದ್ದರು. ಇಲ್ಲಿಯವರೆಗೂ ಟವರ್ ಅಳವಡಿಸದೆ ಮತ್ತು ಪಡೆದ ಹಣವನ್ನೂ ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT