ರಾಜ್ಯದ ಎಲ್ಲ ರಂಗಾಯಣಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಸೂಚಿಸಲಾಗಿದ್ದು ಚಟುವಟಿಕೆ ಶುರು ಮಾಡುವಂತೆ ತಿಳಿಸಿದ್ದೇವೆ. ಸಾಂಸ್ಕೃತಿಕ ಚಟುವಟಿಕೆಗಳಿಗೆ ಹಣಕಾಸಿನ ಕೊರತೆ ಇಲ್ಲ
ಶಿವರಾಜ ತಂಗಡಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ
ಸುಜಾತಾ ಜಂಗಮಶೆಟ್ಟಿ
ರಂಗಾಯಣಕ್ಕೆ ಒಂದು ಕಂತಿನ ಅನುದಾನ ಬಿಡುಗಡೆಯಾದರೆ ಕಲಾವಿದರ ನೇಮಕ ಪ್ರಕ್ರಿಯೆ ಶುರು ಮಾಡಬಹುದು. ಅನುದಾನದ ನಿರೀಕ್ಷೆಯಲ್ಲಿದ್ದೇವೆ
ಸುಜಾತಾ ಜಂಗಮಶೆಟ್ಟಿ ನಿರ್ದೇಶಕಿ ಕಲಬುರಗಿ ರಂಗಾಯಣ
ಪ್ರಭಾಕರ ಜೋಶಿ
ನಾನು ನಿರ್ದೇಶಕನಾಗಿದ್ದ ಅವಧಿಯ ಕೊನೆಗೆ ಸರ್ಕಾರ ಕೇವಲ ₹ 20 ಲಕ್ಷ ಅನುದಾನ ನೀಡಿತ್ತು. ಇದು ಸರಿಯಲ್ಲ ಎಂದು ಸಚಿವರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದೆ. ಕಲಬುರಗಿ ರಂಗಾಯಣಕ್ಕೆ ಕೆಕೆಆರ್‌ಡಿಬಿ ವಾರ್ಷಿಕ ₹ 1 ಕೋಟಿ ನೀಡಬೇಕು
ಪ್ರಭಾಕರ ಜೋಶಿ ರಂಗಾಯಣ ನಿಕಟಪೂರ್ವ ನಿರ್ದೇಶಕ
ಕಲಾವಿದರಿಗೆ ಕಡಿಮೆ ಸಂಭಾವನೆ
ಕಲಾವಿದರಿಗೆ ರಂಗಾಯಣ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ನಿಗದಿಪಡಿಸಲಾಗಿದ್ದ ಸಂಭಾವನೆಯನ್ನು ಇತ್ತೀಚಿನವರೆಗೂ ನೀಡಲಾಗುತ್ತಿದ್ದು ಈ ದುಬಾರಿ ದಿನಗಳಲ್ಲಿ ಆ ಸಂಭಾವನೆ ಮನೆ ನಡೆಸಲೂ ಸಾಲುವುದಿಲ್ಲ ಎಂದು ರಂಗಕರ್ಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಮೂರು ವರ್ಷಗಳ ಅವಧಿಗೆ 12 ಕಲಾವಿದರನ್ನು ನೇಮಕ ಮಾಡಲಾಗುತ್ತಿದ್ದು ಮೊದಲ ವರ್ಷ ಮಾಸಿಕ ₹ 12 ಸಾವಿರ ಎರಡನೇ ವರ್ಷ ₹ 14 ಸಾವಿರ ಹಾಗೂ ಮೂರನೇ ವರ್ಷ ₹ 16 ಸಾವಿರ ನೀಡಲಾಗುತ್ತದೆ. ತಂತ್ರಜ್ಞರಿಗೆ ಸಂಚಿತ ಮೊತ್ತ ಮಾಸಿಕ ₹ 20 ಸಾವಿರ ನೀಡಲಾಗುತ್ತದೆ. ಈ ಬಾರಿ ಹೆಚ್ಚಿನ ಅನುದಾನವನ್ನು ಸರ್ಕಾರದಿಂದ ತರಬೇಕು. ಕಲಾವಿದರಿಗೆ ಈಗ ನೀಡುತ್ತಿರುವ ಸಂಭಾವನೆಯ ದುಪ್ಪಟ್ಟು ನಿಗದಿಪಡಿಸಬೇಕು ಎಂದು ಎನ್ನುತ್ತಾರೆ ಜನರಂಗ ಕಲಾ ಸಂಘಟನೆಯ ಮುಖ್ಯಸ್ಥ ಶಂಕ್ರಯ್ಯ ಘಂಟಿ.