ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಂ: ಜಾಧವ ಪರ ಸಂತೋಷಿರಾಣಿ ಮತಯಾಚನೆ

Published 11 ಏಪ್ರಿಲ್ 2024, 15:41 IST
Last Updated 11 ಏಪ್ರಿಲ್ 2024, 15:41 IST
ಅಕ್ಷರ ಗಾತ್ರ

ಸೇಡಂ: ತಾಲ್ಲೂಕಿನ ಮೋತಕಪಲ್ಲಿ ಗ್ರಾಮದಲ್ಲಿ ಗುರುವಾರ ಸಂಸದ ಡಾ.ಉಮೇಶ ಜಾಧವ ಪರ ಬಿಜೆಪಿ ಮಹಿಳಾ ನಾಯಕಿ ಸಂತೋಷಿರಾಣಿ ಪಾಟೀಲ ಮನೆ ಮನೆಗೆ ತೆರಳಿ ಮತಯಾಚಿಸಿದರು.

ತಾಲ್ಲೂಕಿನ ಮೋತಕಪಲ್ಲಿ ಗ್ರಾಮದ ವಿವಿಧ ಬಡಾವಣೆಗಳಿಗೆ ತೆರಳಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಡಾ.ಉಮೇಶ ಜಾಧವ ಅವರ ಸಾಧನೆಗಳ ಕರಪತ್ರ ವಿತರಿಸಿದರು. ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ, ‘ಕಲಬುರಗಿ ಲೋಕಸಭಾ ಚುನಾವಣಾ ಅಭ್ಯರ್ಥಿ ಸಂಸದ ಡಾ.ಉಮೇಶ ಜಾಧವ ಅವರನ್ನು ಗೆಲ್ಲಿಸುವ ಮೂಲಕ ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕು’ ಎಂದು ಮನವಿ ಮಾಡಿದರು.

ಮೋತಕಪಲ್ಲಿ ಗ್ರಾಮದ ನಂತರ ಶಕಲಾಸಪಲ್ಲಿ,ವೆಂಕಟಾಪುರ ಗ್ರಾಮದಲ್ಲಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಶರಣು ಮೆಡಿಲ್, ಮಹಿಪಾಲರೆಡ್ಡಿ ಪಾಟೀಲ, ಓಂಪ್ರಕಾಶ ಪಾಟೀಲ, ವೀರೇಶ ಹೂಗಾರ, ಶಿವಾನಂದ ಸ್ವಾಮಿ, ಬಸವರಾಜ ರಾಯಕೋಡ, ಶ್ರೀಮಂತ ಆವಂಟಿ, ನಾರಾಯಣ ರೆಡ್ಡಿ ಪಾಟೀಲ, ಬನ್ನಪ್ಪ ಸಕಲೇಶಪಲ್ಲಿ, ಮೋಹನ ರೆಡ್ಡಿ, ಜನಾರ್ದನರೆಡ್ಡಿ, ಸಾಹೇಬರೆಡ್ಡಿ, ಸುದರ್ಶನರೆಡ್ಡಿ, ಶಂಕರ ಹೂಗಾರ, ಬಸಯ್ಯ, ವೆಂಕಟಪ್ಪ ಗೌರೊಳ, ಮಾಣಿಕ ಪ್ರಭು, ಜಗದೀಶ ಅವಂಟಿ, ರೇವಣಸಿದ್ದಪ್ಪ ಬಿರಾದಾರ, ಜಯಶ್ರೀ ಬೊಳದ್, ಮಹನಾಂದ ಸಾಹು, ಶಿಲ್ಪಾ ಪಾಟೀಲ, ವಿಜಯಲಕ್ಷ್ಮಿ ವಿಶ್ವಕರ್ಮ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT