ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾತನೂರು: ಮತಯಂತ್ರದಲ್ಲಿ ದೋಷ, ಒಂದು ಗಂಟೆಯಿಂದ ಮತದಾನ ಸ್ಥಗಿತ

Published 7 ಮೇ 2024, 6:47 IST
Last Updated 7 ಮೇ 2024, 6:47 IST
ಅಕ್ಷರ ಗಾತ್ರ

ಚಿತ್ತಾಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಸಾತನೂರು ಗ್ರಾಮದಲ್ಲಿನ ಮತಗಟ್ಟೆ ಸಂಖ್ಯೆ 165ರಲ್ಲಿ ಮತಯಂತ್ರದಲ್ಲಿ ದೋಷವುಂಟಾಗಿ ಮತದಾನದ ನಂತರ ಬೀಪ್ ಸೌಂಡ್ ಬಾರದೆ ಬೆಳಿಗ್ಗೆ 10.30ರಿಂದ 11.38ರ ವರೆಗೆ ಮತದಾನ ಸ್ಥಗಿತಗೊಂಡಿತ್ತು.

ಮತಯಂತ್ರದಲ್ಲಿ ದೋಷ ಕಾಣುವ ಸಮಯದವರೆಗೆ ಒಟ್ಟು 185 ಮತದಾರರು ತಮ್ಮ ಮತ ಹಕ್ಕು ಚಲಾಯಿಸಿದ್ದರು. ಮತದಾನ ಮಾಡಲು ಮತಗಟ್ಟೆಗೆ ಆಗಮಿಸಿದ್ದ ಮತದಾರರು ಮತದಾನ ಮಾಡಲಾಗದೆ ಸರದಿ ಸಾಲಿನಲ್ಲಿಯೇ ನಿಂತ ಸ್ಥಳದಲ್ಲಿಯೆ ಕುಳಿತಿದ್ದರು.

ಈಗ ಮನೆಗೆ ಹೋಗುತ್ತೇವೆ ಬಿಸಿಲು ಕಡಿಮೆಯಾದ ನಂತರ ಸಾಯಂಕಾಲ ಐದು ಗಂಟೆಗೆ ಮತ್ತೆ ಬಂದು ಮತದಾನ ಮಾಡುತ್ತೇವೆ ಎಂದು ವಯಸ್ಸಾದ ಮಹಿಳಾ ಮತದಾರರು ಮನೆಗೆ ಹೋಗಲು ಅಣಿಯಾದಾಗ, ಹೋಗಬೇಡಿ ದುರಸ್ತಿ ಮಾಡುತ್ತಿದ್ದಾರೆ. ಮತ ಚಲಾಯಿಸಿ ಹೋಗಬೇಕು ಎಂದು ಗ್ರಾಮದ ರಾಜಕೀಯ ಕಾರ್ಯಕರ್ತರು ಮತದಾರರಿಗೆ ಮನವಿ ಮಾಡಿದರು.

ದುರಸ್ತಿಗೆ ಕ್ರಮ: ಮತಯಂತ್ರದಲ್ಲಿ ದೋಷವುಂಟಾದ ಕುರಿತು ಸಂಬಂಧಿಸಿದ ಅಧಿಕಾರಿಗೆ ಕಳುಹಿಸಿ ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳುವುದಾಗಿ ಚಿತ್ತಾಪುರ ಕ್ಷೇತ್ರದ ಸಹಾಯಕ ಚುನಾಣಾಧಿಕಾರಿ ನವೀನಕುಮಾರ್ ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.

11.40ಕ್ಕೆ ಮತಯಂತ್ರದ ದೋಷ ಸರಿಪಡಿಸಿ ಮತದಾನಕ್ಕೆ ಅವಕಾಶ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT