ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಬೇಡ್ಕರ್ ಬದುಕೇ ಆದರ್ಶದ ಪ್ರತೀಕ’

ಜಿಲ್ಲೆಯ ವಿವಿಧೆಡೆ ಡಾ.ಅಂಬೇಡ್ಕರ್ ಪರಿನಿರ್ವಾಣ ದಿನಾಚರನೆ, ಪುಷ್ಪನಮನ ಸಲ್ಲಿಸಿದ ಜಿಲ್ಲಾಧಿಕಾರಿ ಜೋತ್ಸ್ನಾ
Last Updated 6 ಡಿಸೆಂಬರ್ 2020, 13:54 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರು ಜೀವನದಲ್ಲಿ ಅನುಸರಿಸಿಕೊಂಡ ಬಂದಿದ್ದ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಅರಿತು ನಡೆಯಬೇಕು’ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದರು.‌

ಡಾ.ಬಿ.ಆರ್. ಅಂಬೇಡ್ಕರ್ ಅವರ 64ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ನಗರದ ಜಗತ್ ವೃತ್ತದಲ್ಲಿರುವ ಅಂಬೇಡ್ಕರ್ ಅವರ ಪ್ರತಿಮೆಗೆ ‌ಪುಷ್ಪನಮನ ಸಲ್ಲಿಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.‌

ಕೋವಿಡ್‌ ಸೋಂಕಿನ ಕಾರಣ ಜಿಲ್ಲೆಯಾದ್ಯಂತ ಮಹಾಪರಿನಿರ್ವಾಣ ದಿನವನ್ನು ಸಂಕ್ಷಿಪ್ತವಾಗಿ ಆಚರಿಸಲಾಗುತ್ತಿದೆ. ಯುವಪೀಳಿಗೆಗೆ ಅಂಬೇಡ್ಕರ್‌ ಅವರ ಜೀವನ ಮಾರ್ಗದರ್ಶಿ ಆದರೆ ಅದೇ ದೊಡ್ಡ ಸುಧಾರಣೆ ಎಂದರು.‌

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಮ್ ಜಾರ್ಜ್, ನಗರ ಪೊಲೀಸ್‌ ಆಯುಕ್ತ ಸತೀಶಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್‌ ಸುಧಾಕರ ಲೋಖಂಡೆ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಅಲ್ಲಾಭಕ್ಷ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ ಹಾಗೂ ಇತರ ಇಲಾಖೆಗಳ ಅಧಿಕಾರಿಗಳೂ ಪುಷ್ಪ ಅರ್ಪಿಸಿ ಗೌರವ ನಮನ ಸಲ್ಲಿಸಿದದರು.

ಮಹಾನಗರ ಪಾಲಿಕೆಯ ಸಮುದಾಯ ಸಂಘಟನಾಧಿಕಾರಿ ಡಾ.ನಾಗರತ್ನ ದೇಶಮಾನೆ, ಎಸ್‍ಸಿ– ಎಸ್.ಟಿ. ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಾಬು ಮೌರ್ಯ, ಕಾಂಬಳೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಎಸ್‍ಸಿ ಎಸ್‍ಟಿ ನೌಕರರ ಸಂಘಟನೆಯ ಪದಾಧಿಕಾರಿಗಳು ಮತ್ತು ವಿವಿಧ ಸಮಾಜದ ಮುಖಂಡರು ಇದ್ದರು.

ಇದೇ ವೇಳೆ ಜಿಲ್ಲಾಧಿಕಾರಿ ಜ್ಯೋತ್ಸ್ನಾ, ಪಂಚಶೀಲ ಧ್ವಜಾರೋಹಣ ಮತ್ತು ಸಿಇಒ ಡಾ.ರಾಜಾ ಅವರು ನೀಲಿ ಧ್ವಜಾರೋಹಣ ಮಾಡಿದರು. ಸಿದ್ಧಾರ್ಥ ವಿಹಾರ ಟ್ರಸ್ಟಿನ ಸಂಗಾನಂದ ಭಂತೇಜಿ ಅವರು ಸಂವಿಧಾನ ಶಿಲ್ಪಿಗೆ ಬುದ್ಧ ವಂದನೆ ಸಲ್ಲಿಸಿದರು.

ಹಿರಿಯ ನಾಯಕ ವಿಠಲ ದೊಡ್ಡಮನಿ, ಶಾಸಕ ಬಸವರಾಜ ಮತ್ತಿಮೂಡ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿರಸಗಿ, ಪಾಲಿಕೆ ಮಾಜಿ ಸದಸ್ಯ ಉಮೇಶ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುರುಶಾಂತ ಪಟ್ಟೇದಾರ, ಮಾಜಿ ಮೇಯರ್ ಚಂದ್ರಿಕಾ ಪರಮೇಶ್ವರ, ಮುಖಂಡರಾದ ಆರ್.ವಿ.ಚಾಂಬಾಳ, ಸಾಯಿಬಣ್ಣ ಹೋಳಕರ್, ಸಿದ್ದು ಸಿರಸಗಿ, ಮಲ್ಲಪ್ಪ ಹೊಸಮನಿ, ಹಣಮಂತ ಬೋಧನ, ಸುರೇಶ ವರ್ಮಾ, ರಮಾನಂದ ಉಪಾಧ್ಯಾಯ, ಮಹೇಶ ಹುಬ್ಬಳ್ಳಿ, ರಾಜರತ್ನ, ಪರಮೇಶ್ವರ ಖಾನಾಪುರ, ಪ್ರಭು ತಿಗಡಿ, ಇನ್‍ಸ್ಪೆಕ್ಟರ್‍ಗಳಾದ ಆರ್.ಎಸ್.ನಾಯಕ, ಸಾಗರ ಸೇರಿದಂತೆ ಅಂಬೇಡ್ಕರ್ ಅಭಿಮಾನಿಗಳು ಪ್ರತಿಮೆಗೆ ಪುಷ್ಪ ಅರ್ಪಿಸಿ ಗೌರವ ಸಲ್ಲಿಸಿದರು.

ಸಾರ್ವತ್ರಿಕ ನ್ಯಾಯ ನೀಡಿದ ಅಂಬೇಡ್ಕರ್: ‌ನಗರದ ಅಂಜುಮನ್ ತರಕ್ಕಿ ಹಿಂದ್‌ ಸಭಾಂಗಣದಲ್ಲಿ ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಅವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ‌ ಗೌರವ ಸಲ್ಲಿಸಿದರು.

‘ದೇಶದ ಅಖಂಡತೆ ಹಾಗೂ ಅಸ್ತಿತ್ವದ ರಕ್ಷಣೆಗೆ ಮತ್ತು ಸಮಸ್ತ ಜನತೆಗೆ ಸಾಮಾಜಿಕ ನ್ಯಾಯ ಸಾರ್ವತ್ರಿಕವಾಗಿ ಸಿಗಬೇಕಾದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಆದರ್ಶಗಳು ಅತಿ ಅವಶ್ಯವಾಗಿದೆ’ ಎಂದು ಅವರು ಹೇಳಿದರು.

ಹೋರಾಟಗಾರ ಲಿಂಗರಾಜ ಸಿರಗಾಪೂರ, ಶಿವಲಿಂಗ ಬಂಡಕ್, ಜಾವೇದ್ ಅಂಜುಮನ್‌, ಅಬ್ದುಲ್ ರಹೀಂ, ವೀರೇಶ ಪುರಾಣಿಕ, ವಿವೇಕಾನಂದ ಕುಲಕರ್ಣಿ, ಗುರುರಾಜ ಭಂಡಾರಿ, ಡಾ.ಮಾಜೀದ್‌ ದಾಗಿ, ವಾಲಿ ಅಹ್ಮದ್, ಜ್ಞಾನ ಮಿತ್ರ, ಮೋಹ್ಮದ ಮಿರಾಜುದ್ದಿನ್‌, ಬಾಬಾ ಫಕ್ರುದ್ದೀನ್, ಸಾಜೀದ ಅಲಿ ರಂಜೋಳ್ಳ್ವಿ, ಮಲ್ಲಿನಾಥ ಸಂಗಶೆಟ್ಟಿ, ಶಾಂತಪ್ಪ ಕಾರಭಾಸಗಿ ಇದ್ದರು.

ಮಾನವೀಯತೆ ಪ್ರತೀಕ: ‘ಸಮಾನತೆ, ಸಹೋದರತೆ ಮತ್ತು ಮಾನವೀಯತೆಗಾಗಿ ಅವಿಶ್ರಾಂತ ಹೋರಾಡಿದ ಡಾ.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು ನಾವೆಲ್ಲರೂ ಸ್ಮರಿಸುವುದು ಅವಶ್ಯಕ’ ಎಂದು ಶಾಸಕ ಬಸವರಾಜ ಮತ್ತಿಮೂಡ ಹೇಳದರು.

ಅಂಬೇಡ್ಕರ್ ಪ್ರತಿಮೆಗೆ ಗೌರವ ಸಲ್ಲಿಸಿ ಮಾತನಾಡಿದ ಅವರು, ಅವರ ವಿಚಾರ ಧಾರೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರಚಾರ ಮಾಡುವುದು ಅಗತ್ಯ ಎಂದರು.

ಬಿಜೆಪಿ ಪ್ರಮುಖ ಅಂಬಾರಾಯ ಅಷ್ಠಗಿ ಮಾತನಾಡಿ, ಡಾ.ಅಂಬೇಡ್ಕರ್ ಅವರ ರಾಷ್ಟ್ರೀಯ ಪ್ರಜ್ಞೆ, ವಾಸ್ತವವಾದ ಏಕತಾ ಭಾವ, ರಾಷ್ಟ್ರಪ್ರೇಮ ಜಾಗೃತ ಜ್ಯೋತಿಯಾಗಿತ್ತು. ಆ ಅದಮ್ಯ ಧ್ಯೇಯವನ್ನು ಸಾರ್ವತ್ರಿಕವಾಗಿ ವಿಮರ್ಶೆಗೆ ಹಚ್ಚಿದ್ದು ತೀರಾ ವಿರಳ. ಪ್ರಸ್ತುತ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಅಂಬೇಡ್ಕರ್ ಜೀವನ ಮತ್ತು ಅವರ ಸಮಗ್ರ ಬದುಕಿಗೆ ಸಂಬಂಧಿಸಿದ ವಿವರವುಳ್ಳ ‘ಪಂಚ ತೀರ್ಥ’ ಯೋಜನಗಳನ್ನು ಅಭಿವೃದ್ಧಿ ಪಡಿಸುವ ಮೂಲಕ, ಡಾ.ಅಂಬೇಡ್ಕರ್ ಆದರ್ಶ ಹಾಗೂ ವಿಚಾರಧಾರೆಗಳಿಗೆ ಹೆಚ್ಚಿನ ಪ್ರಚಾರ ಮಾಡುತ್ತಿರುದು ಶ್ಲಾಘನೀಯ ಎಂದರು.

ಬಿಜೆಪಿ ಯವ ಮೋರ್ಚಾ ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವ ಅಷ್ಠಗಿ, ಬಿಜೆಪಿ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಾಂತವೀರ ಬಡಿಗೇರ ಇದ್ದರು.

20 ಅಡಿ ಕಟೌಟ್‌ ಪೂಜೆ

ಕಲಬುರ್ಗಿ: ರಿಪಬ್ಲಿಕನ್ ಯೂತ್ ಫೆಡರೇಷನ್‌ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ 64ನೇ‌ ಮಹಾಪರಿನಿರ್ವಾಣ ದಿನದ ಅಂಗವಾಗಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ 20 ಅಡಿ ಎತ್ತರದ ಕಟೌಟ್‌ ನಿರ್ಮಿಸಿ ಮಾಲಾರ್ಪಣೆ ಮಾಡಲಾಯಿತು. ಸಾರ್ವಜನಿಕರು ದೀಪ‌ ಬೆಳಗಿಸಿ ನಮನ ಸಲ್ಲಿಸಲಾಯಿತು.

ಎಸಿಪಿಗಳಾದ ಇನಾಮ್ದಾರ, ಗಿರೀಶ್, ಸ್ಟೇಷನ್‌ ಬಜಾರ್‌ ಸರ್ಕಲ್‌ ಇನ್‌ಸ್ಪೆಕ್ಟರ್‌ ಸಿದ್ಧರಾಮ ಗಡೆದೆ, ಅಶೋಕ ನಗರ ಸರ್ಕಲ್‌ ಇನ್‌ಸ್ಪೆಕ್ಟರ್‌ ಪಂಡಿತ್ ಸಾಗರ ಹಾಗೂ ಸಂಘಟನೆಯ ಸಂಚಾಲಕರಾದ ಹನುಮಂತ ಇಟಗಿ, ಗೌರವ ಅಧ್ಯಕ್ಷರಾದ ಸಂತೋಷ ಮೇಲ್ಮನಿ, ರಾಣು ಮುದ್ದನಕರ್, ಸಿದ್ಧಾರ್ಥ ಚಿಂಚನಸೂರ, ನಾಗೇಂದ್ರ ಜವಳಿ, ರುಕ್ಮೇಶ್ ಭಂಡಾರಿ, ಶೀವಕುಮಾರ ಜಾಲವಾದ ಧರ್ಮಣ್ಣ ಕೋಣೆಕರ್, ಧರ್ಮಣ್ಣ ಜೈನಾಪೂರ, ಅರುಣ ಗಡ್ಡದ್, ಸೌರಭ ಸಿಂಧೆ ಹಾಗೂ ಫೆಡರೆಷನ್ ಎಲ್ಲ ನಾಯಕರುಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT